ನ.30, ಡಿ.1 ರಂದು ರಾಜ್ಯಮಟ್ಟದ ‘ಅನ್ವೇಷಣಾ-2019 ಅಗ್ರಿ ಟಿಂಕರಿಂಗ್ ಫೆಸ್ಟ್’

October 28, 2019
1:19 PM

ಪುತ್ತೂರು: ಭಾರತಕ್ಕೆ ಕೃಷಿಯೇ ಆಧಾರ ಸ್ತಂಭ. ದೇಶದ 60 ರಷ್ಟು ಜನರು ಕೃಷಿಯನ್ನೇ ಜೀವನೋಪಾಯವನ್ನಾಗಿಸಿದ್ದಾರೆ. ಹೀಗಿದ್ದರೂ ಜನರನ್ನು ಹಸಿವು ಹಾಗೂ ಅಪೌಷ್ಟಿಕತೆ ಎಂಬ ಪಿಡುಗು ಆವರಿಸಿಕೊಂಡಿದೆ. ಯಾಂತ್ರೀಕರಣದ ಕೊರತೆ, ಅಸಮರ್ಪಕ ನೀರಾವರಿ ವ್ಯವಸ್ಥೆ, ಕಡಿಮೆ ಇಳುವರಿ, ಮಣ್ಣಿನ ಸವಕಳಿ ಇವುಗಳೆಲ್ಲ ಕೃಷಿಕರ ಸಮಸ್ಯೆಗಳಾಗಿದೆ. ಸಮಸ್ತ ಮನುಕುಲದ ಹಸಿವನ್ನು ನೀಗಿಸುವ ಕೃಷಿಯನ್ನು ಪ್ರೋತ್ಸಾಹಿಸುವ ಹೊಸ ಯಂತ್ರಗಳ ಅನ್ವೇಷಣೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಕೃಷಿಯಲ್ಲಿ ಬದಲಾವಣೆ ಮತ್ತು ಯುವಜನತೆಯನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಕಾರ್ಯಕ್ರಮವೊಂದನ್ನು ರೂಪಿಸಲಾಗಿದೆ.

Advertisement
Advertisement

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ‘ಅನ್ವೇಷಣಾ 2019 ಅಗ್ರಿ ಟಿಂಕರಿಂಗ್ ಫೆಸ್ಟ್’ ಎನ್ನುವ ರಾಜ್ಯಮಟ್ಟದ ಕೃಷಿ ಪೂರಕ ಆವಿಷ್ಕಾರಗಳ ಸ್ಪರ್ಧಾ ಉತ್ಸವವನ್ನು ಪುತ್ತೂರಿನ ತೆಂಕಿಲದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕೃಷಿಗೆ ಸಂಬಂಧಪಟ್ಟಂತ ಆವಿಷ್ಕಾರ, ಹೊಸ ಬಗೆಯ ಕೃಷಿ ಯಂತ್ರೋಪಕರಣಗಳು, ಮಣ್ಣು ಮತ್ತು ನೀರಿನ ನಿರ್ವಹಣೆ, ಪಶು ಸಂಗೋಪನೆ ಬಳಕೆ ಮತ್ತು ನವೀನ ಕೃಷಿ ಉಪ ಉತ್ಪನ್ನಗಳನ್ನು ಪ್ರದರ್ಶನ ಮಾಡಿ ಸ್ಪರ್ಧಿಸಬಹುದು. ವಿದ್ಯಾರ್ಥಿಗಳು ಹಾಗೂ ಕೃಷಿಕರಿಗೆ ಉದ್ಯಮಿಯಾಗುವ ಸುವರ್ಣವಕಾಶವನ್ನು ಇಲ್ಲಿ ಒದಗಿಸಲಾಗುತ್ತಿದೆ. ವಿದ್ಯಾವಂತ ನವಯುವ ಕೃಷಿಕರಿಗೆ ಬೆಂಬಲವನ್ನು ನೀಡುವುದು ಇದರ ಉದ್ದೇಶ. ಉದ್ಯೋಗವಿಲ್ಲದೆ ಅಲೆದಾಡುವ ಯುವಜನತೆಗೆ ಕೃಷಿಯನ್ನು ಮಾಡುವುದರ ಮೂಲಕ ಸ್ವ ಉದ್ಯೋಗವನ್ನು ಕಲ್ಪಿಸಿ ನಿರುದ್ಯೋಗವನ್ನು ಹೋಗಲಾಡಿಸುವ ಪ್ರಯತ್ನ ಅಗ್ರಿ ಟಿಂಕರಿಂಗ್ ಫೆಸ್ಟ್ ನದ್ದು.

Advertisement

ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಅನ್ವೇಷಣಾ ಸ್ಪರ್ಧೆ ನ. 30 ಹಾಗೂ ಡಿ.1 ರಂದು ನಡೆಯಲಿದೆ. ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ರಾಜ್ಯಾದ್ಯಂತ ಇರುವ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು, ಪದವಿಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳು, ತಾಂತ್ರಿಕ ಕಾಲೇಜುಗಳು ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ವಯೋಮಾನದ ವಿಭಾಗಗಳಲ್ಲಿ ತಾವು ಆವಿಷ್ಕಾರಿಸಿರುವ ಕೃಷಿ ಸಂಬಂಧಿತ ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಿ, ಸ್ಪರ್ಧಿಸಬಹುದು.

ವಿಭಾಗಗಳು: 13 ವರ್ಷದ ವರೆಗಿನ ಅಂದರೆ 8ನೇ ತರಗತಿ ತನಕ ಓದುವ ವಿದ್ಯಾರ್ಥಿಗಳು ಸಬ್ ಜೂನಿಯರ್ಸ್ ವಿಭಾಗಕ್ಕೆ, 14ರಿಂದ 18 ವರ್ಷದ ವರೆಗಿನ ಅಂದರೆ 9ನೇ ತರಗತಿಯಿಂದ ಪಿಯುಸಿ ತನಕದ ವಿದ್ಯಾರ್ಥಿಗಳು ಜೂನಿಯರ್, ಪದವಿ ಮತ್ತು ತಾಂತ್ರಿಕ ಕಲಿಕೆ ಅಂದರೆ ಐಟಿಐ ಪ್ರೊಫೆಶನಲ್ ಕಾಲೇಜು ಇತ್ಯಾದಿ ಕಲಿಯುವ ವಿದ್ಯಾರ್ಥಿಗಳು ಸೀನಿಯರ್ಸ್ ವಿಭಾಗಕ್ಕೆ ಹಾಗೂ ಸಾರ್ವಜನಿಕರು, ಕೃಷಿಕರು ಪ್ರತ್ಯೇಕ ವಿಭಾಗಗಳಲ್ಲಿ ಭಾಗವಹಿಸಬಹುದು.

Advertisement

ವಿಜೇತರಾದವರಿಗೆ ಬಹುಮಾನದ ಜೊತೆಗೆ ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಬಹುದಾದ ಉತ್ಪನ್ನಗಳನ್ನು ಮುಂದಿನ ವರ್ಷ ಇದೇ ದಿನದಂದು ಭಾಗವಹಿಸಿದವರಿಂದ ಅನಾವರಣಗೊಳಿಸಿ ವಾಣಿಜ್ಯ ಉತ್ಪನ್ನವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತದೆ. ಇದರಿಂದ ಯುವಕರನ್ನು ಯಶಸ್ವಿ ಉದ್ಯಮಿಯಾಗಿ ಬೆಳೆಸಲು ಮತ್ತು ನಿರುದ್ಯೋಗವನ್ನು ಹೋಗಲಾಡಿಸಬಹುದು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಕೃಷಿಗೆ ಸಂಬಂಧಪಟ್ಟಂತಹ ಮಾದರಿಯನ್ನು ಆಧುನಿಕತೆಯ ಮಾದರಿಗಳನ್ನು ತಯಾರಿಸಿ ಸ್ಪರ್ಧಿಸಬಹುದು. ಈ ಮೂಲಕ ಯುವಕರನ್ನು ಕೃಷಿಯತ್ತ ಸಾಗುವಂತೆ ಮಾಡಬಹುದು.

ಇಲ್ಲಿ ಕೃಷಿಗೆ ಉಪಯೋಗವಾಗುವಂತಹ ಆವಿಷ್ಕಾರಗಳನ್ನು ಪ್ರದರ್ಶನ ಮಾಡಿದಾಗ ಅದೆಷ್ಟೋ ಕೃಷಿಕರಿಗೆ ಉಪಯೋಗವಾಗುತ್ತದೆ. ಈಗಾಗಲೇ ನಾವು ತಂತ್ರಜ್ಞಾನದ ಯುಗದಲ್ಲಿ ಜೀವಿಸುತ್ತಿದ್ದೇವೆ. ಇಂತಹ ಸಮಯದಲ್ಲಿ ಕೃಷಿಗೆ ಪ್ರೋತ್ಸಾಹವನ್ನು ನೀಡುವುದು ಮತ್ತು ಯುವ ಜನತೆಯನ್ನು ಕೃಷಿಯಲ್ಲಿ ಹಮ್ಮಿಕೊಳ್ಳುವ ಈ ಕಾರ್ಯಕ್ರಮ ಶ್ಲಾಘನೀಯ.
ಈ ಸೃಜನಾತ್ಮಕ ಆಲೋಚನೆಗಳನ್ನು ಹೊಂದಿರುವ ಹೊಸ ಆವಿಷ್ಕಾರ, ಮಾದರಿ, ಯೋಜನಾ ವರದಿಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಿದೆ ಕೃಷಿಕರು, ಉದ್ಯಮಿಗಳು, ಸರಕಾರದ ನೀತಿ ಸಂಯೋಜಕರು, ಮಾಧ್ಯಮದವರು ಹಾಗೂ ಇತರ ಸಂಘ ಸಂಸ್ಥೆಗಳ ಜೊತೆಗೆ ಸಂವಾದದ ಮುಖಾಂತರ ಪ್ರಸ್ತುತ ಪಡಿಸಲು ಉತ್ತಮ ವೇದಿಕೆಯನ್ನು ನೀಡುತ್ತಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಮಾದರಿ ಅಥವಾ ಯೋಜನೆಗಳನ್ನು ತಯಾರಿಸಿ ಸ್ಪರ್ಧಿಸಬಹುದು. ಕೃಷಿಯಲ್ಲಿ ಆವಿಷ್ಕಾರ ಅಂದರೆ ಕೃಷಿಯಲ್ಲಿನ ನಾವೀನ್ಯತೆ/ ಆಧುನಿಕತೆ ಕುರಿತು, ಹೊಸ ಬಗೆಯ ಕೃಷಿ ಯಂತ್ರೋಪಕರಣಗಳು, ಮಣ್ಣು ಮತ್ತು ನೀರಿನ ನಿರ್ವಹಣೆ, ಕೃಷಿಯಲ್ಲಿ ಪಶು ಸಂಗೋಪನೆಯ ಬಳಕೆ, ಅಡಿಕೆ ಮತ್ತು ಸಂಬಂಧಿತ ಉಪ ಉತ್ಪನ್ನಗಳ ಉಪಯೋಗಗಳಿಗೆ ಹೆಚ್ಚಿನ ಆದ್ಯತೆ ನೀಡುವಂತಹ ನವೀನ ಕೃಷಿ ಉಪ ಉತ್ಪನ್ನಗಳ ಕುರಿತು ಆವಿಷ್ಕಾರಗಳ ಮುಖಾಂತರ ಸ್ಪರ್ಧಿಸಬಹುದು.
ಸ್ಪರ್ಧಿಸುವವರು ನೋಂದಾವಣಿಗೆ ಹಾಗೂ ಹೆಚ್ಚಿನ ವಿವರಗಳಿಗೆ http://anveshana.vivekanandaedu.org/ ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 10.

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನೀವು ನಿರಂತರವಾಗಿ ಹೆಡ್‌ಫೋನ್ ಬಳಸುತ್ತಿದ್ದರೆ ಜಾಗರೂಕರಾಗಿರಿ..! | ಕಿವಿಯ ಮೇಲೆ ಪರಿಣಾಮಗಳು…..
May 17, 2024
4:19 PM
by: The Rural Mirror ಸುದ್ದಿಜಾಲ
ಸೆಗಣಿಯಲ್ಲಡಗಿದೆ ಬೆಳೆಗೆ ಅವಶ್ಯಕ ಪೋಷಕಾಂಶಗಳು | ನೈಸರ್ಗಿಕ ಕೃಷಿಯಲ್ಲಿ ದೇಸೀ ಗೋವಿನ ಮಹತ್ವ ಬಹಳ ಮುಖ್ಯ |
May 17, 2024
3:31 PM
by: The Rural Mirror ಸುದ್ದಿಜಾಲ
ಗದಗ ಜಿಮ್ಸ್ ಆಸ್ಪತ್ರೆಗೆ ತಟ್ಟಿದ ಬರದ ಬಿಸಿ | ನೀರಿಲ್ಲದೆ ರೋಗಿಗಳ ಪರದಾಟ | ದಾರಿಕಾಣದಾದ ಸಿಬ್ಬಂದಿಗಳು
May 17, 2024
2:55 PM
by: The Rural Mirror ಸುದ್ದಿಜಾಲ
ಹವಾಮಾನ ಸಂಕಷ್ಟ | ಕಾದ ಭೂಮಿಗೆ ‘ರೆಡ್‌ ಅಲರ್ಟ್‌’ | ಜಗತ್ತಿನ ತಾಪಮಾನ 1.5 ಡಿಗ್ರಿ ಇಳಿಕೆ ಸಾಧ್ಯವಾಗುತ್ತಿಲ್ಲ…!
May 17, 2024
2:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror