ನ.30-ಪುತ್ತೂರಿನಲ್ಲಿ ಕೃಷಿ ಪೂರಕ ಆವಿಷ್ಕಾರಗಳ ಪ್ರದರ್ಶನ : ಕೃಷಿಕರ ಸಭೆ

November 22, 2019
6:19 PM

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಹಾಗೂ  ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿ ಆಶ್ರಯದಲ್ಲಿ ಲಘು ಉದ್ಯೋಗ ಭಾರತಿ ಇದರ ಸಹಯೋಗದೊಂದಿಗೆ ನ.30 ಹಾಗು ಡಿ.1 ರಂದು ಕೃಷಿ ಪೂರಕ ಆವಿಷ್ಕಾರಗಳ  ಪ್ರದರ್ಶನ ಅನ್ವೇಷಣಾ-2019 ರಾಜ್ಯಮಟ್ಟದ ಕಾರ್ಯಕ್ರಮ  ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಠಾರದಲ್ಲಿ  ನಡೆಯಲಿದೆ. ಈ ಹಿನ್ನೆಲೆಯಲ್ಲಿ  ಶುಕ್ರವಾರ ಕೃಷಿಕರ ಸಭೆ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ  ನಡೆಯಿತು.

Advertisement
Advertisement
Advertisement

ಅನ್ವೇಷಣಾ-2019 ರಾಜ್ಯಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್ ನಲ್ಲಿ  ಕೃಷಿಕರ ಆವಿಷ್ಕಾರಗಳು ಹಾಗೂ ವಿದ್ಯಾರ್ಥಿಗಳ ಸಂಶೋಧನೆಗಳು ಪ್ರದರ್ಶನಗೊಳ್ಳಲಿದೆ. ಇದರ ಜೊತೆಗೆ ಕಾರ್ಯಕ್ರಮಕ್ಕೆ ಲಘು ಉದ್ಯೋಗ ಭಾರತಿಯೂ ಭಾಗವಹಿಸುವರಿಂದ ಮುಂದಿನ ದಿನಗಳಲ್ಲಿ  ಕೃಷಿಕ ಆವಿಷ್ಕಾರಗಳನ್ನು ಕೃಷಿಕರು ಆಸಕ್ತಿ ಹೊಂದಿದ್ದರೆ ಅಭಿವೃದ್ಧಿಪಡಿಸಿ  ಕೃಷಿಕರ ಹೆಸರಿನಲ್ಲಿಯೇ ಮಾರುಕಟ್ಟೆಗೆ ಬಿಡುವ ಮೂಲಕ ಕೃಷಿ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಠಿ ಮಾಡುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಕೃಷಿ ಸಂಶೋಧನೆಗಳ ಕಡೆಗೆ ಆಸಕ್ತಿ ಹುಟ್ಟಿಸುವುದು  ಈ ಮೇಳದ ಪ್ರಮುಖ ಉದ್ದೇಶವಾಗಿದೆ. ಈಗಾಗಲೇ ಸುಮಾರು 350 ಕೃಷಿ ಅನ್ವೇಷಣೆಗಳನ್ನು ಗುರುತಿಸಲಾಗಿದೆ. ಆಸಕ್ತ ಕೃಷಿಕರು ತಮ್ಮ ಸಂಶೋಧನೆಗಳನ್ನು  ಪ್ರದರ್ಶನ ಮಾಡಲು ಅವಕಾಶ ಇದೆ ಎಂದು ಸಭೆಯಲ್ಲಿ  ಮಾಹಿತಿ ನೀಡಲಾಯಿತು. ಪ್ರಮುಖವಾಗಿ ಕೃಷಿಕರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕೃಷಿ ಸಂಶೋಧನೆಗಳನ್ನು  ಪ್ರೋತ್ಸಾಹಿಸುವುದು ಹಾಗೂ ಅಭಿವೃದ್ಧಿಗೆ ಸಲಹೆ ನೀಡಬೇಕಾಗಿದೆ, ಈ ಕಾರಣದಿಂದ ಹೆಚ್ಚಿನ ಕೃಷಿಕರು ಕಾರ್ಯಕ್ರಮಕ್ಕೆ ಬರುವಂತೆ ಮಾಹಿತಿ ನೀಡಬೇಕು ಎಂದು ಸಭೆಯಲ್ಲಿ  ತಿಳಿಸಲಾಯಿತು.

Advertisement

ಸಭೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಇ.ಶಿವಪ್ರಸಾದ್ ,  ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ  ಶಿವಪ್ರಕಾಶ್ ಎಂ, ಸಂಚಾಲಕರಾದ  ಮುರಳೀಧರ ಕೆ, ಸದಸ್ಯರಾದ  ಭರತ್ ಪೈ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಆರ್ ಸಿ ನಾರಾಯಣ ರೆಂಜ , ಅಡಿಕೆ ಪತ್ರಿಕೆಯ ಸಂಪಾದಕರಾದ ನಾ. ಕಾರಂತ ಪೆರಾಜೆ ಮೊದಲಾದವರಿದ್ದರು.

Advertisement

 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರಗುತ್ತಿದೆ ದೇಶದ ತಡೆಗೋಡೆ ಹಿಮಾಲಯದ ಹಿಮ ಸರೋವರಗಳು : ಮುಂದಿದೆ ಭಾರತಕ್ಕೆ ಭಾರಿ ಅಪಾಯ : ಚಿತ್ರ ಸೆರೆ ಹಿಡಿದ ಇಸ್ರೋ
April 23, 2024
12:57 PM
by: The Rural Mirror ಸುದ್ದಿಜಾಲ
ರಾಜ್ಯಕ್ಕೆ ಸ್ಟಾರ್ ಕ್ಯಾಂಪೇನರ್‌ ಆಗಿ ಪ್ರಿಯಾಂಕಾ ಗಾಂಧಿ : ಬೆಂಗಳೂರು, ಚಿತ್ರದುರ್ಗದಲ್ಲಿ ಭರ್ಜರಿ ಪ್ರಚಾರ
April 23, 2024
12:05 PM
by: The Rural Mirror ಸುದ್ದಿಜಾಲ
Karnataka Weather | 23-04-2024 | ರಾಜ್ಯದಲ್ಲಿ ಮಳೆಯ ಪ್ರಮಾಣ ಕ್ಷೀಣ | ಘಟ್ಟದ ಕೆಳಗಿನ ತಪ್ಪಲು ಪ್ರದೇಶದ ಕೆಲವು ಕಡೆ ಮಳೆ ನಿರೀಕ್ಷೆ |
April 23, 2024
11:31 AM
by: ಸಾಯಿಶೇಖರ್ ಕರಿಕಳ
ಅಡಿಕೆ ಹಳದಿ ಎಲೆರೋಗ | ಜನಪ್ರತಿನಿಧಿಗಳು ಮಾಡಬೇಕಾದ್ದೇನು..? | ಸರ್ಕಾರ ಮಾಡಬೇಕಾದ್ದೇನು..? | ಚುನಾವಣಾ ಸಮಯದಲ್ಲಿ ಏಕೆ ಚರ್ಚೆಯಾಗುತ್ತಿಲ್ಲ..?‌ |
April 23, 2024
7:00 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror