ನ.30 ರಿಂದ ಪುತ್ತೂರಿನಲ್ಲಿ ಕೃಷಿ ಸಂಬಂಧಿತ ಆವಿಷ್ಕಾರಗಳ ವಿನೂತನ ಸ್ಪರ್ಧಾ ಉತ್ಸವ “ಅಗ್ರಿ ಟಿಂಕರಿಂಗ್ ಫೆಸ್ಟ್”

November 20, 2019
8:13 PM

ಪುತ್ತೂರು: ಕೃಷಿ ಪೂರಕ ನವೀನ ಆವಿಷ್ಕಾರಗಳ ರಾಜ್ಯ ಮಟ್ಟದ ವಿಜ್ಞಾನ ಮೇಳ ನ.30 ರಿಂದ ಡಿ.1 ರವರೆಗೆ ಅನ್ವೇಷಣಾ- 2019 ಅಗ್ರಿ ಟಿಂಕರಿಂಗ್ ಫೆಸ್ಟ್ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ನಡೆಯಲಿದೆ.

ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ.) ಪುತ್ತೂರು ಹಾಗೂ ಇದರ ಅಂಗ ಸಂಸ್ಥೆಯಾದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕ ನಗರ, ತೆಂಕಿಲ ಇದರ ಜಂಟಿ ಆಶ್ರಯದಲ್ಲಿ  ಉದ್ಯೊಗ ಭಾರತಿ ಕರ್ನಾಟಕ, ಕ್ಯಾಂಪ್ಕೋ, ಪಶು ಸಂಗೋಪನಾ ಇಲಾಖೆ ಹಾಗು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಬೆಂಗಳೂರು ಇವರ ಸಹಯೊಗದೊಂದಿಗೆ ಕಾರ್ಯಕ್ರಮ ನಡೆಯಲಿದೆ. ದೇಶದ ಬೆನ್ನೆಲುಬಾದ ಕೃಷಿ ಕ್ಷೇತ್ರವು ಎದುರಿಸುತ್ತಿರುವ ಸವಾಲುಗಳಿಗೆ ಪ್ರಾಯೋಗಿಕವಾಗಿ ಪರಿಹಾರವನ್ನು ಕಂಡುಕೊಳ್ಳಲು, ಇಂದಿನ ಯುವಜನತೆಯಲ್ಲಿ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿಯನ್ನು ಮೂಡಿಸಿ ಬೆಳೆಸುವ ಸಲುವಾಗಿ ವಿದ್ಯಾರ್ಥಿಗಳು ಹಾಗು ಕೃಷಿಕರು ಸೃಜನಾತ್ಮಕವಾಗಿ ತೊಡಗಿಸಿಕೊಳ್ಳಬೇಕೆಂಬ ಮೂಲ ಉದ್ದೇಶದೊಂದಿಗೆ ಈ ವಿಜ್ಞಾನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸಂಪೂರ್ಣ ಸ್ಪರ್ಧಾ ರೂಪದಲ್ಲಿರುವ ಸದ್ರಿ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ರಾಜ್ಯಾದ್ಯಂತ ಇರುವ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳು, ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗು ವಿಶೇಷವಾಗಿ ಕೃಷಿಕರಿಗೆ ಸಂಬಂಧಪಟ್ಟ ವಯೋಮಾನದ ವಿಭಾಗಗಳಲ್ಲಿ ತಾವು ಆವಿಷ್ಕರಿಸಿರುವ ಕೃಷಿ ಸಂಬಂಧಿತ ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಲು ಅವಕಾಶವಿರುತ್ತದೆ.

ವಿದ್ಯಾರ್ಥಿಗಳು ಹಾಗೂ ಕೃಷಿಕರ ಸೃಜನಾತ್ಮಕ ಆಲೋಚನೆಗಳನ್ನು ಸಮಾಜಕ್ಕೆ ತಲುಪಿಸುವ ಗುರಿಯನ್ನು ಹೊಂದಿರುವ ಈ ಸ್ಪರ್ಧೆಯಲ್ಲಿ ಕೃಷಿಕ, ಉದ್ಯಮಿ, ಸರಕಾರದ ನೀತಿ ಸಂಯೋಜಕರು, ಮಾಧ್ಯಮ ಹಾಗೂ ಇತರ ಸಂಘ ಸಂಸ್ಥೆಗಳ ಜೊತೆಗೆ ಸಂವಾದದ ಮುಖಾಂತರ ಪ್ರಸ್ತುತ ಪಡಿಸಲು ಉತ್ತಮ ವೇದಿಕೆಯನ್ನು ಒದಗಿಸುತ್ತದೆ.

ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಬಹುದಾದ ಅವಿಷ್ಕಾರಗಳನ್ನು ಒಂದು ವರ್ಷದ ಅವಧಿಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿ ವಾಣಿಜ್ಯಉತ್ಪನ್ನವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಪೇಟೆಂಟ್/ IPR ಹಕ್ಕನ್ನು ಒದಗಿಸಿಕೊಡುವ ಹಾಗೂ ಯಶಸ್ವಿ ಉದ್ಯಮಿಯಾಗಿ ಬೆಳೆಯಲು ಪ್ರೇರೇಪಿಸುವ ನವೀನ ಯೋಚನೆಯನ್ನು ಹೊಂದಲಾಗಿದೆ.  ವಿಶೇಷವಾಗಿ ಪ್ರತಿ ವಿಭಾಗಗಳಲ್ಲಿ ಉತ್ತಮ ಎರಡು ಅವಿಷ್ಕಾರಗಳಿಗೆ ತಲಾ ಐದು ಸಾವಿರದಂತೆ ನಗದು ಬಹುಮಾನವನ್ನು ನೀಡಲಾಗುತ್ತಿದೆ.  ಪ್ರಸ್ತುತ ಸುಮಾರು 300 ಯೋಜನೆಗಳು ನೋಂದಾವಣೆ ಆಗಿದ್ದು ಸ್ಪರ್ಧೆಯು ಹಲವು ಕೃಷಿ ಸಂಬಂಧಿತ ಆವಿಷ್ಕಾರಗಳಿಗೆ ನಾಂದಿಯನ್ನು ಹಾಡಲಿರುತ್ತದೆ. ಮೇಳದಲ್ಲಿ ನಿಖರ ಕೃಷಿ, ಬಯೋ ಗ್ಯಾಸ್ ಬ್ಯಾಗ್ ರೀತಿಯ ಹಲವಾರು ಸೃಜನಾತ್ಮಕ ಕೃಷಿ ಸಂಬಂಧಿತ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಸ್ಪತ್ರೆಗಳಲ್ಲಿ ಬಳಕೆಯಾಗದ ಔಷಧ ಮರುಬಳಕೆ – ಹಣವೂ ಉಳಿಯುತ್ತದೆ, ಪರಿಸರವೂ ಕಾಪಾಡುತ್ತದೆ..!
July 29, 2026
6:52 AM
by: ದ ರೂರಲ್ ಮಿರರ್.ಕಾಂ
ಮಲೆನಾಡಿನಿಂದ ಬಯಲುನಾಡಿನತ್ತ ಅಡಿಕೆ ಬೆಳೆ ವಿಸ್ತರಣೆ : ರಾಣೆಬೆನ್ನೂರಿನಲ್ಲಿ ಹೆಚ್ಚಿದ ರೈತರ ಆಸಕ್ತಿ
July 29, 2026
6:42 AM
by: ದ ರೂರಲ್ ಮಿರರ್.ಕಾಂ
ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ
July 28, 2026
11:25 PM
by: ಮಹೇಶ್ ಪುಚ್ಚಪ್ಪಾಡಿ
ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!
July 28, 2026
10:03 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror