ಸುದ್ದಿಗಳು

ಪಂಚಾಯತ್ ಸದಸ್ಯರು, ಅಧಿಕಾರಿಗಳ ಗೈರಿಗೆ ಬೆಳ್ಳಾರೆ ಗ್ರಾಮಸಭೆಯಲ್ಲಿ ಸಾರ್ವಜನಿಕರ ಆಕ್ರೋಶ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬೆಳ್ಳಾರೆ: ಬೆಳ್ಳಾರೆ ಗ್ರಾಮ ಪಂಚಾಯತ್  2019-20ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಕುಂತಳಾ ನಾಗರಾಜ್ ಅಧ್ಯಕ್ಷತೆಯಲ್ಲಿ ರಾಜೀವ್‍ಗಾಂಧಿ ಸೇವಾ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.
ಸಭೆಯ ಪ್ರಾರಂಭದಲ್ಲಿ ಗ್ರಾಮಸ್ಥ ಪ್ರೇಮಚಂದ್ರ ಬೆಳ್ಳಾರೆ ಮಾತನಾಡಿ ಪ್ರತೀ ಬಾರಿಯೂ ಗ್ರಾಮಸಭೆಗೆ ಕೆಲವು ಸದಸ್ಯರು, ಅಧಿಕಾರಿಗಳು ಗೈರಾಗುತ್ತಿದ್ದು, ಸದಸ್ಯರು ಸಾರ್ವಜನಿಕರ ಸಮಸ್ಯೆ ಆಲಿಸಲು ಸಂಪರ್ಕಕ್ಕೆ ಸತತ ಸಿಗುವುದಿಲ್ಲ. ನಮ್ಮ ಕೆಲವು ವಾರ್ಡ್ ಸಮಸ್ಯೆಗಳನ್ನು ನಾವು ಯಾರಿಗೆ ಮನವರಿಕೆ ಮಾಡಬೇಕೆಂದು ತೋಚುತ್ತಿಲ್ಲವೆಂದರು. ಇದಕ್ಕೆ ದನಿಗೂಡಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟಕ ಸಂಚಾಲಕ ಆನಂದ ಬೆಳ್ಳಾರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕು ಪಂಚಾಯತ್ ಮಾಜಿ ಸದಸ್ಯ ಅನಿಲ್ ರೈ ಚಾವಡಿಬಾಗಿಲು ಮಾತನಾಡಿ ಪದೇ ಪದೇ ಬೆಳ್ಳಾರೆಯಲ್ಲಿ ಪಾರ್ಕಿಂಗ್ ಸಮಸ್ಯೆ ತಲೆದೂರುತ್ತಿದ್ದು, ಈ ಹಿಂದೆ ಪೊಲೀಸರ ಮೂಲಕ ಪಾರ್ಕಿಂಗ್ ವ್ಯವಸ್ಥೆ ನಿರ್ಣಯಿಸಲು ನಿಶ್ಚಯಿಸಲಾಗಿತ್ತು. ಆದರೆ ತಡೆಹಿಡಿದಿರುವುದು ಏಕೆಂದು ಪ್ರಶ್ನಿಸಿದರು. ಜೊತೆಗೆ ಹಳೆಯ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲವಾಗಿದ್ದು, ಸುಳ್ಯ ತಹಶೀಲ್ದಾರರು ತೆರವುಗೊಳಿಸಲು ಆದೇಶಿಸಿದ್ದಾರೆ. ಆದರೆ ಇದುವರೆಗೂ ತೆರವುಗೊಂಡಿಲ್ಲದುದರಿಂದ ಮುಂದಿನ ದಿನಗಳಲ್ಲಿ ಬೆಳ್ಳಾರೆ ಸಾರ್ವಜನಿಕರೇ ಇದನ್ನು ತೆರವುಗೊಳಿಸಲಿದ್ದೇವೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಧನಂಜಯ್ 25ದಿನಗಳೊಳಗೆ ಹಳೆ ಆಸ್ಪತ್ರೆ ಕಟ್ಟಡವನ್ನು ತೆರವುಗೊಳಿಸುತ್ತೇವೆ ಎಂದರು.

ಬೆಳ್ಳಾರೆ ವ್ಯಾಪ್ತಿಯಲ್ಲಿ 1ಲಕ್ಷ 85ಸಾವಿರ ರೂಪಾಯಿ ವೆಚ್ಚದಲ್ಲಿ ಬೀದಿ ದೀಪಗಳನ್ನು ಹೊಸದಾಗಿ ಅಳವಡಿಸಲಾಗಿದ್ದು, ಯಾವುದೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೆಳ್ಳಾರೆ ಗ್ರಾಮಸ್ಥರೊಬ್ಬರು ತಮ್ಮ ಅಸಮಾಧಾನವನ್ನು ಹೊರಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಧನಂಜಯ್ ಹೊಸ ಸೆಟ್ ಗಳನ್ನು ಖರೀದಿಸಿದ್ದಕೆ ವ್ಯಾರೆಂಟಿ ಇದ್ದು, ಅದರ ಮೂಲಕ ಸೊತ್ತನ್ನು ಮರುಹೊಂದಿಸಲಾಗುವುದು ಎಂದರು.

ಅಂಗಡಿಗಳ ಪರವಾನಿಗೆ ನವೀಕರಣದ ದಿಢೀರ್ ಬೆಲೆ ಏರಿಕೆಗೆ ವಿರೋಧ: 
ಪಂಚಾಯತ್ ವತಿಯಿಂದ ಬೆಳ್ಳಾರೆಯ ಎಲ್ಲಾ ಅಂಗಡಿಗಳ ಮರು ನವೀಕರಣದ ಶುಲ್ಕವನ್ನು ದಿಢೀರಾಗಿ ಅತಿಯಾಗಿ ಏರಿಕೆ ಮಾಡಿದ್ದರಿಂದ ತೀವ್ರ ಆಕ್ರೋಶಗೊಂಡಿದ್ದ ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು ಸಹಿತ ಸದಸ್ಯರು  ವಿರೋಧಿಸಿದರು. ಈ ಸಂದರ್ಭ ಮಾತನಾಡಿದ ಪಿಡಿಒ ಅವರು ಈಗಾಗಲೇ ಕೆಲವು ಅಂಗಡಿಗಳ ಪರವಾನಿಗೆ ಮರುನವೀಕರಣದ ಶುಲ್ಕವನ್ನು ಇಳಿಕೆ ಮಾಡಲಾಗಿದೆ. ಬೆಳ್ಳಾರೆ ವರ್ತಕರ ಸಂಘದವರು ಅಭಿವೃದ್ದಿಗೆ ಸಹಕರಿಸಿದಷ್ಟು ಒಳ್ಳೆಯದಾಗುತ್ತದೆ ಎಂದರು.

ಕಸ ವಿಲೇವಾರಿಯಲ್ಲಿ ಅಸಮರ್ಪಕತೆ ಕಂಡುಬರುತ್ತಿರುವ ಕುರಿತು ಬೆಳ್ಳಾರೆ ವರ್ತಕರ ಸಂಘದ ಸದಸ್ಯ ವಿನಯ್ ಭಾರದ್ವಾಜ್ ಪ್ರಶ್ನಿಸಿದಾಗ ಉತ್ತರಿಸಿದ ಪಂಚಾಯತ್ ಕಾರ್ಯದರ್ಶಿ  ಕಸವನ್ನು ಸಮರ್ಪಕ ವಿಧಾನದಲ್ಲಿ ನೀಡದಿರುವುದು ಜನರೆ. ಒಣಕಸ, ಹಸಿಕಸವನ್ನು ಮಿಶ್ರಣ ಮಾಡಿ ಕೊಡುವುದರಿಂದ ತೊಂದರೆಯಾಗುತ್ತಿದೆ ಎಂದರು.

Advertisement

ವೇದಿಕೆಯಲ್ಲಿ ನೊಡೆಲ್ ಅಧಿಕಾರಿ ಮೋಹನ್ ನಂಗಾರು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಸ್ತಫಾ, ಮಾಜಿ ಉಪಾಧ್ಯಕ್ಷ ವಿಠಲ್‍ದಾಸ್ ಎನ್‍ಎಸ್‍ಡಿ, ಪಂಚಾಯತ್ ರಾಜ್ ತಾಲೂಕು ಅಭಿಯಾಂತಕ ಎಸ್‍ಎಸ್.ಹುಕ್ಕೇರಿ, ಬೆಳ್ಳಾರೆ ಆರಕ್ಷಕ ಠಾಣೆಯ ಎಎಸ್‍ಐ ಮಧು, ಆರೋಗ್ಯ ಅಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಭವ್ಯ ವರದಿ ವಾಚಿಸಿ,ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭೂಮಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ಮರುಯಾನ | ಕ್ಯಾಲಿಫೋರ್ನಿಯಾದ ಕಡಲತೀರದಲ್ಲಿ ಇಳಿಯಲಿರುವ ನೌಕೆ

ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…

6 hours ago

ಬದುಕು ಪುರಾಣ | ಮನವನ್ನು ಚುಚ್ಚುವ ಅಳಿಲು

ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…

7 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಧಾತ್ರಿ ಕೆ ರಾವ್

ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…

22 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಭವಿಷ್ಯ ಕೆ ಪಿ

ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್‌ ಆನ್ಸ್‌ ಇಂಗ್ಲಿಷ್‌ ಮೀಡಿಯಂ…

22 hours ago

ಜು.16 ರಿಂದ ಕರಾವಳಿ-ಮಲೆನಾಡು ಭಾಗದಲ್ಲಿ ಭಾರೀ ಮಳೆ ಎನ್ನುತ್ತಿದೆ ಹವಾಮಾನ ವರದಿ

ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…

22 hours ago