Advertisement
ನಮ್ಮೂರ ಸುದ್ದಿ

ಪಂಜದಲ್ಲಿ ಸರಕಾರಿ ಶಾಲೆ ಉಳಿಸಿ ಅಭಿಯಾನ

Share

ಪಂಜ : ಸರಕಾರಿ ಶಾಲೆ ಉಳಿಸಿ ಅಭಿಯಾನದ ಅಡಿಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ(ಎಲ್‍ಕೆಜಿ) ಪ್ರಾರಂಭಿಸುವ ಕುರಿತು ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪಂಜ ಪೂರ್ವ ಪ್ರಾಥಮಿಕ ಶಿಕ್ಷಣ ಸಮಿತಿಯ ಸಹಯೋಗದೊಂದಿಗೆ ಸಭೆ ಪಂಜದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‍ಪಿ ಮಹಾದೇವ ಅವರು ಮಾತನಾಡಿ, 2020-2021ನೇ ಶೈಕ್ಷಣಿಕ ವರ್ಷದಲ್ಲಿ ಇದೇ ಶಾಲೆಯಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಲು ಇಲಾಖೆ ವತಿಯಿಂದ ಸರಕಾರಕ್ಕೆ  ಶಿಫಾರಸ್ಸು ಮಾಡುವುದಾಗಿ ಹಾಗೂ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಪ್ರಥಮ ವರ್ಷದ ತರಗತಿಗೆ 30 ವಿದ್ಯಾರ್ಥಿಗಳ ದಾಖಲಾತಿಗೊಂಡ ಕಾರಣ ಮತ್ತು ಪೋಷಕರ ಬೇಡಿಕೆಯು ಹೆಚ್ಚುತ್ತಿರುವುದರಿಂದ ಪ್ರಸ್ತುತ ವರ್ಷವೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸುವುದೆಂದು ನಿರ್ಧರಿಸಲಾಯಿತು. ಜೊತೆಗೆ ತರಗತಿಗೆ ಅರ್ಹ ಶಿಕ್ಷಕಿಯರ ಹಾಗು ಸಹಾಯಕಿಯರ ನೇಮಕಾತಿ ಪ್ರಕ್ರಿಯೆ ಪ್ರಾರಂಭಗೊಂಡಿದೆ.

ಸಭೆಯಲ್ಲಿ ಸಮಿತಿ ಸಂಚಾಲಕ ಕಾರ್ಯಪ್ಪ ಚಿದ್ಗಲ್ಲು, ಸಹಸಂಚಾಲಕ ದೇವಿಪ್ರಸಾದ್ ಜಾಕೆ, ಸೋಮಶೇಖರ ನೇರಳ, ತಿಮ್ಮಪ್ಪ ಪಲ್ಲತಡ್ಕ, ಶಶಿಧರ್ ಮಾವಿನಕಟ್ಟೆ, ದಾಮೋದರ ನೇರಳ, ವಾಚಣ್ಣ ಕರೆಮೂಲೆ, ಪುರುಷೋತ್ತಮ ನೆಕ್ಕಿಲ, ಶಿಕ್ಷಕ ಸಂಯೋಜಕ ವಸಂತ ಏನೆಕಲ್ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ

ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…

22 hours ago

ಬೇವು ಲೇಪಿತ ಯೂರಿಯಾ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ

ಕೇಂದ್ರ ಸರ್ಕಾರ 2015ರಲ್ಲಿ ದೇಶೀಯ ಹಾಗೂ ಆಮದು ಯೂರಿಯಾಗೆ ಬೇವು ಲೇಪನ ಕಡ್ಡಾಯಗೊಳಿಸುವ…

23 hours ago

ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ

ಮನೆತನವನ್ನು ಕಟ್ಟುವುದು ಕೇವಲ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದಲ್ಲ; ಕುಟುಂಬದ ಸದಸ್ಯರ ನಡುವೆ ಪ್ರೀತಿ,…

23 hours ago

ಮಿಜೋರಾಂ ಮೂಲಕ 3,103 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆ ಆರೋಪ – ಮ್ಯಾನ್ಮಾರ್‌ ಜಾಲ ಪತ್ತೆ

ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…

1 day ago

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ

ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…

2 days ago

ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!

ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…

2 days ago