ಪಂಜ: ಎಲ್ಲಾ ಕಡೆ ನೀರಿಗೆ ಬಣ್ಣ ಇಲ್ಲ. ಅದರಲ್ಲೂ ಕುಡಿಯುವ ನೀರಿಗೆ ಬಣ್ಣವೇ ಇಲ್ಲ ಪರಿಶುದ್ಧ, ಶುಭ್ರ. ಆದರೆ ಸುಳ್ಯ ತಾಲೂಕಿನ ಪಂಜದಲ್ಲಿ ಸರಬರಾಜಾಗುವ ನೀರು ಮಾತ್ರಾ ಕೆಂಪು ಕೆಂಪು….!.
ಇದ್ಯಾಕೆ ಕೆಂಪು ಕೆಂಪು ನೀರು ಅಂತ ಕೇಳಬೇಡಿ. ಪಂಚಾಯತ್ ವತಿಯಿಂದ ಈ ಬೇಸಗೆ ಕಾಲದಲ್ಲೂ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ ಪಂಚಾಯತ್ ಗೆ ಅಭಿನಂದನೆ ಹೇಳುತ್ತಾರೆ. ಆದರೆ ನೀರು ಮಾತ್ರಾ ಕುಡಿಯಲು ಆಗುತ್ತಿಲ್ಲ. ಹೀಗಾಗಿ ವಿಷಾದನೀಯ ಪರಿಸ್ಥಿತಿಯಲ್ಲಿ ಪಂಚಾಯತ್ ನೀರನ್ನೇ ಕುಡಿಯುವ ಆಶ್ರಯಿಸಿದ ಮಂದಿ ಇದ್ದಾರೆ.
ಕಳೆದ ಕೆಲವು ದಿನಗಳಿಂದ ಇಲ್ಲಿ ನೀರು ಕಲುಷಿತವಾಗಿ ಬರುತ್ತಿದೆ. ಈ ಬಗ್ಗೆ ಸ್ಥಳೀಯರು ಪಂಚಾಯತ್ ಗಮನಕ್ಕೆ ತಂದಿದ್ದಾರೆ. ಆದರೆ ನೀರು ಸರಬರಾಜು ಮಾಡುವ ವ್ಯವಸ್ಥೆಯಲ್ಲೇ ದೋಷ ಇದೆ ಎನ್ನುತ್ತಾರೆ ಪಂಚಾಯತ್ ಪ್ರಮುಖರು ಹೇಳುತ್ತಾರೆ ಸ್ಥಳೀಯರು. ಕುಡಿಯಲು ನೀರು ಬೇಕಾದರೆ ಸ್ಥಳಿಯವಾದ ಬೋರ್ ವೆಲ್ ಗೆ ಹೋಗಿ ಎಂದು ಪಂಚಾಯತ್ ಆಡಳಿತ ಹೇಳುತ್ತದೆ ಎಂದು ಸಾರ್ವಜನಿಕರು ಅಳಲು ತೋಡುತ್ತಾರೆ.
ಈಗ ಬರುವ ಕುಡಿಯುವ ನೀರು ಕಲುಷಿತವಾಗಿದೆ. ಇದಕ್ಕಾಗಿ ಸಂಬಂಧಿತರು ಗಮನಹರಿಸಬೇಕು, ಸ್ವಚ್ಛ ನೀರು ಕೊಡುವಲ್ಲಿ ಪ್ರಯತ್ನ ಮಾಡಬೇಕು ಎಂಬುದು ನೀರು ಬಳಕೆದಾರರ ಒತ್ತಾಯ.