ಪಂಜ : ಪಂಜ ಹವ್ಯಕ ವಲಯದ ವತಿಯಿಂದ ನಡೆಯುತ್ತಿದ್ದ 18 ನೇ ವರ್ಷದ ವಸಂತ ವೇದ ಶಿಬಿರ ಸಮಾರೋಪ ಸಮಾರಂಭ ನಡೆಯಿತು.
ಶಿಬಿರವು 40 ದಿನಗಳ ಕಾಲ ನಡೆದಿದ್ದು 18 ಮಂದಿ ಮಕ್ಕಳು ವೇದಾಧ್ಯಯನದಲ್ಲಿ ಪಾಲ್ಗೊಂಡಿದ್ದರು. ಶಿಬಿರ ಗುರುಗಳಾದ ವೇದಮೂರ್ತಿ ರಾಮಚಂದ್ರ ಭಟ್, ವೇದಮೂರ್ತಿ ನಾಗರಾಜ್ ಪರಮೇಶ್ವರ ಹೆಗ್ಗಡೆ ಇವರ ಮಾರ್ಗದರ್ಶನದಲ್ಲಿ ನಡೆಯಿತು.
ವೇದ ಶಿಬಿರವನ್ನು ಕಳೆದ ತಿಂಗಳು ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಗೋಪಾಲಕೃಷ್ಣ ಭಟ್ ಉದ್ಘಾಟಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಪಂಜ ವಲಯದ ಅಧ್ಯಕ್ಷರು ಶ್ರೀ ಕೃಷ್ಣ ಭಟ್ ಪಟೋಳಿ, ಕಾರ್ಯದರ್ಶಿ ಪ್ರಸನ್ನ ಭಟ್ ಎಣ್ಮೂರು, ಡಾ.ಅನಂತ ಕೆದಿಲ, ಶ್ರೀಶ ಕುಮಾರ್ ಮತ್ತು ಪೋಷಕರು, ವಲಯದ ಬಂಧುಗಳಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel