ಪಂಜ: ಜೇಸಿಐ ಪಂಜ ಪಂಚಶ್ರೀ ವತಿಯಿಂದ ಸರಕಾರಿ ಪಾಡಿಗದ್ದೆ ಶಾಲೆಯಲ್ಲಿ “ವಿಶ್ವ ಪರಿಸರ ದಿನಾಚರಣೆ ಪ್ರಯುಕ್ರ ಹಣ್ಣಿನ ಗಿಡಗಳ ವಿತರಣೆ ಹಾಗೂ ಕಳೆದ ವರುಷಗಳಲ್ಲಿ ನೆಟ್ಟ ಗಿಡಗಳಿಗೆ ಗೊಬ್ಬರ ಹಾಕಿ ಪೋಷಣೆ” ಕಾರ್ಯಕ್ರಮವು ನಡೆಯಿತು.
ಸಂಪನ್ಮೂಲ ವ್ಯಕ್ರಿ ಜೇಸಿಐ ಭಾರತದ ವಲಯ ತರಬೇತುದಾರ ರಾದ ಜೇಸಿ ತೀರ್ಥನಂದ ಕೊಡಂಕಿರಿ ಹಣ್ಣಿನ ಗಿಡವನ್ನು ಮುಖ್ಯ ಶಿಕ್ಷಕಿ ಧರ್ಮವತಿ.ಟಿ .ಇವರಿಗೆ ಹಸ್ತಾತರಿಸುವ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ “ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಗಿಡಗಳನ್ನು ನಾಶ ಮಾಡುವ ಮೂಲಕ ಪರಿಸರವನ್ನು ಹಾಳು ಮಾಡುತ್ತಿದ್ದು, ಈಗಾಗಲೇ ಎಚ್ಚೆತ್ತು ಕೊಳ್ಳದಿದ್ದರೆ ಅಲ್ಲಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪದ ಜತೆಗೆ ಮತ್ತಷ್ಟು ವಿಕೋಪ ಗಳನ್ನು ಎದುರಿಸಬೇಕಾ ಗುತ್ತದೆ” ಎಂದು ಪರಿಸರದ ಉಳಿವಿನ ಮಹತ್ವವ ನ್ನು ವಿವರಿಸಿದರು.
ವೇದಿಕೆಯಲ್ಲಿ ಜೇಸಿಐ ಪಂಜ ಪಂಚಶ್ರಿಯ ಅಧ್ಯಕ್ಷರಾದ ಜೇಸಿ ವಾಸುದೇವ ಮೇಲ್ಪಾಡಿ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ವಾಚಣ್ಣ ಕೆರೆಮೂಲೆ, ಶಾಲಾ ಮುಖ್ಯ ಶಿಕ್ಷಕಿ ಧರ್ಮವತಿ.ಟಿ., ಪಂಜ ಕ್ಲಸ್ಟರ್‍ನ ಸಮೂಹ ಸಂಪನ್ಮೂಲ ವ್ಯಕ್ತಿ ಯಶೋಧರ.ಕೆ. ವೇದಿಕೆಯಲ್ಲಿದ್ದರು. ಮುಖ್ಯ ಶಿಕ್ಷಕಿ ಮಾತನಾಡಿ ಜೇಸಿಐ ಪಂಜ ಪಂಚಶ್ರೀಯ ಈ ಕಾರ್ಯಕ್ರಮ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೇಸಿ ಶಿವಪ್ರಸಾದ್ ಹಾಳೆಮಜಲು ಅಥಿತಿಗಳನ್ನು ವೇದಿಕೆಗೆ ಆಹ್ವಾನಿಸಿದ ರು. ಜೇಸಿ ನಾಗಮಣಿ ಕೆದಿಲ ಜೇಸಿ ವಾಣಿ ವಾಚಿಸಿದರು. ಕಾರ್ಯದರ್ಶಿ ಪ್ರವೀಣ್ ಕಾಯರ ವಂದಿಸಿದರು.
ಸ್ಥಾಪಕಾಧ್ಯಕ್ಷ ಜೇಸಿ ದೇವಿಪ್ರಸಾದ್ ಜಾಕೆ, ಜೇಸಿ ಷಣ್ಮುಖ ಕಟ್ಟ, ಶಾಲಾ ಎಸ್.ಡಿ.ಎಮ್.ಸಿ ಸದಸ್ಯರುಗಳು ಪೋಷಕರು ಹಾಗೂ ಎಲ್ಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸುಮಾರು 90 ಹಣ್ಣಿನ ಗಿಡಗಳನ್ನು ಎಲ್ಲಾ ವಿದ್ಯಾರ್ಥಿಗಳ ಮನೆಗೆ ಹಂಚಲಾಯಿತು. ಹಾಗೂ ಕಳೆದ ವರ್ಷ ನೆಟ್ಟ ಗಿಡಗಳಿಗೆ ಗೊಬ್ಬರ ಹಾಕಿ ಪೋಷಣೆ ಮಾಡಲಾಯಿತು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…