ಮಂಗಳೂರು: ಅನೇಕ ಸಮಯಗಳಿಂದ ಟ್ರೋಲ್ ಆಗುತ್ತಿದ್ದ ಮಂಗಳೂರು ಪಂಪ್ ವೆಲ್ ಮೇಲ್ಸೇತುವೆಯ ಕಾಮಗಾರಿ ಪೂರ್ತಿಯಾಗಿದೆ. ನಾಳೆ(ಜ.31) ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ನಾಳೆಯೇ… ಇತ್ತೆ ಬಲೆ.. ಪಂಪ್ವೆಲ್ ಬಲೆ… ಪಂಪ್ವೆಲ್ ಬಲೆ…..!
ಅನೇಕ ಸಮಯಗಳಿಂದ ಉದ್ಘಾಟನಾ ಕಾಮಗಾರಿ ಮುಂದೂಡಿ ಮುಂದೂಡಿ ಜನಸಾಮಾನ್ಯರಿಂದ ಟ್ರೋಲ್ ಗೆ ಒಳಗಾಗಿ ಕೊನೆಗೂ ಇದಾಗದು ಎಂದೂ ಶಪಿಸಿದ್ದ ಮಂಗಳೂರಿನ ಪಂಪ್ ವೆಲ್ ಕಾಮಗಾರಿ ಪೂರ್ತಿಗೊಂಡಿದ್ದು ಜ.31 ರಂದು ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಈ ಹಿಂದೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನೀಡಿರುವ ಭರವಸೆಯಂತೆ ಜ.1 ರಂದು ಉದ್ಘಾಟನೆಯಾಗಬೇಕಿತ್ತು. ಇದೀಗ ಜನವರಿ ಅಂತ್ಯದ ವೇಳೆಗೆ ಉದ್ಘಾಟನೆಗೊಳ್ಳಲಿದೆ.
ಈ ಕಾಮಗಾರಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ವೀಕ್ಷಿಸಿದರು.
ಶಾಸಕ ವೇದವ್ಯಾಸ್ ಕಾಮತ್, ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…
ರೈತರಿಗೆ ನ್ಯಾಯ ಕೊಡಲು MSPಗೆ ವೈಜ್ಞಾನಿಕ ಆಧಾರ ಅಗತ್ಯ ಎಂದು ಕೋಡಿಹಳ್ಳಿ ಚಂದ್ರಶೇಖರ್…
ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…
ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…