Advertisement
ಸುದ್ದಿಗಳು

ಪತ್ರಕರ್ತರಿಗೆ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆಗೆ ಕಿಟ್ : ಮಂಗಳೂರಿನ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಕೊಡುಗೆ

Share

ಮಂಗಳೂರು: ನಿತ್ಯವೂ ಕಾರ್ಯದ ಒತ್ತಡಕ್ಕೆ ಒಳಗಾಗುವ ಪತ್ರಕರ್ತರಿಗೆ ಕೆಲಸ ಮಾಡುತ್ತಿರುವ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆ ನಡೆಸುವ ಬಿ.ಪಿ.ತಪಾಸಣೆ ಕಿಟ್‌ನ್ನು ಮಂಗಳೂರಿನ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ಗೆ ಉಚಿತವಾಗಿ ಹಸ್ತಾಂತರಿಸಿದ್ದಾರೆ. ಇನ್ನು ಮುಂದೆ ಪತ್ರಕರ್ತರು ಪ್ರೆಸ್‌ಕ್ಲಬ್‌ಗೆ ಬಂದು ತಾವೇ ಸ್ವತಃ ಬಿ.ಪಿ. ತಪಾಸಣೆಯನ್ನು ನಡೆಸಬಹುದು.

Advertisement
Advertisement

ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರು ತಮ್ಮ ಸಹೋದ್ಯೋಗಿಗಳ ಸಹಿತ ಸಮಾನ ಮನಸ್ಕರ ತಂಡ ರಚಿಸಿದ್ದು, ಆ ಮೂಲಕ ಆರೋಗ್ಯವೇ ಭಾಗ್ಯ ಎಂಬ ವಾಟ್ಸ್‌ಆಪ್ ಗ್ರೂಪ್ ರೂಪಿಸಿ, ಇಂತಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾಾರೆ. ಇದರ ಅಂಗವಾಗಿ ಎಲ್ಲ ಶಾಲೆಗಳಿಗೆ ಬಿಪಿ ತಪಾಸಣೆ ಕಿಟ್‌ನ್ನು ನೀಡುತ್ತಿದ್ದು, ಅದೇ ರೀತಿ ಪತ್ರಕರ್ತರ ಸಂಘಕ್ಕೂ ಇದನ್ನು ಗುರುವಾರ ಕೊಡುಗೆಯಾಗಿ ನೀಡಿದ್ದಾರೆ.

Advertisement

ಯಾಕಾಗಿ ತಪಾಸಣೆ: ಸಾಮಾನ್ಯವಾಗಿ ಜನರು ತಲೆ ನೋವು ಅಥವಾ ಸುತ್ತುವ ಅನುಭವದಿಂದ ಆಸ್ಪತ್ರೆಗೆ ಹೋಗಿ ರಕ್ತದೊತ್ತಡ ತಪಾಸಣೆ ಮಾಡಿಕೊಳ್ಳುತ್ತಾರೆ. ಕೆಲವರಲ್ಲಿ ಬಿಪಿ ಇರಬಹುದು ಅಥವಾ ನಾರ್ಮಲ್ ಇರಬಹುದು. ಇದನ್ನು ಕ್ಲಿನಿಕಲ್ ಹೈಪರ್ ಟೆನ್ಶನ್ ಎನ್ನಲಾಗುತ್ತದೆ. ಹೆಚ್ಚಿನವರಿಗೆ ಕೆಲಸದ ಸ್ಥಳದಲ್ಲಿ ಹೆಚ್ಚಿನ ಒತ್ತಡದಿಂದ ತಲೆ ಸುತ್ತುವಿಕೆ
ಕಾಣಿಸುತ್ತದೆ. ಅಲ್ಲಿ ಬಿಪಿ ಚೆಕ್ ಮಾಡುವ ಯಂತ್ರ ಅಥವಾ ವೈದ್ಯರು ಇರುವುದಿಲ್ಲ. ಕೆಲಸ ಮಾಡುವ ಸ್ಥಳದಲ್ಲೇ ತಪಾಸಣೆ ವೇಳೆ ಕಾಣಿಸುವ ಬಿಪಿಗೆ ಮಾಸ್ಡ್ ಹೈಪರ್ ಟೆನ್ಶನ್
ಎನ್ನಲಾಗುತ್ತದೆ. ಇನ್ನು ಕೆಲವರಿಗೆ ವೈದ್ಯರನ್ನು ಕಂಡ ತಕ್ಷಣ ಬಿಪಿಯಲ್ಲಿ ಏರುಪೇರಾಗುತ್ತದೆ. ಇದನ್ನು ವೈಟ್ ಕೋಟ್ ಹೈಪರ್ ಟೆನ್ಶನ್ ಎನ್ನಲಾಗುತ್ತದೆ. ನಿಜವಾಗಿ ಅದು ಬಿಪಿಯಲ್ಲ. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಇನ್ನೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಆಗ ನಾರ್ಮಲ್ ಇರುತ್ತದೆ. ಮಾಸ್ಡ್  ಹೈಪರ್ ಟೆನ್ಶನ್ ಇರುವವರನ್ನು ಆಸ್ಪತ್ರೆಯಲ್ಲಿ ಚೆಕ್
ಮಾಡುವಾಗ ನಾರ್ಮಲ್ ಆಗಿಯೇ ಇರುತ್ತದೆ. ಆದರೆ, ಕೆಲಸದ ಸ್ಥಳದಲ್ಲಿ ಬಿಪಿ ಹೆಚ್ಚಿರುತ್ತದೆ. ಇದನ್ನು ಪತ್ತೆಹಚ್ಚಲು ಮೆಶಿನ್ ಇಟ್ಟುಕೊಳ್ಳಬೇಕು. 

ದೇಶದಲ್ಲಿ ಶೇ.20-30 ಮಂದಿಯಲ್ಲಿ ಮಾಸ್ಡ್  ಹೈಪರ್ ಟೆನ್ಶನ್ ಇರುತ್ತದೆ. ಎಲ್ಲರಿಗೂ ಚಿಕಿತ್ಸೆ ಕೊಡುವ ಅಗತ್ಯ ಇರುವುದಿಲ್ಲ. ಆದರೆ, ಆಹಾರ ಮತ್ತು ಜೀವನ ಪದ್ಧತಿಯಲ್ಲಿ ಬದಲಾವಣೆ ಮೂಲಕ ಜಾಗರೂಕರನ್ನಾಗಿ ಮಾಡಬಹುದು. ವೈದ್ಯರು, ವಕೀಲರು, ಪತ್ರಕರ್ತರು, ಶಿಕ್ಷಕರು, ಬ್ಯಾಂಕ್ ಸಿಬ್ಬಂದಿ, ಶೋರೂಮ್ ಸಿಬ್ಬಂದಿ ಸೇರಿದಂತೆ ವಿವಿಧ ವೃತ್ತಿನಿರತರಿಗೆ ಅವರ ಕೆಲಸದ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆ ಮಾಡುತ್ತಿರಬೇಕು. ಅದಕ್ಕಾಗಿ ಬಿಪಿ ಚೆಕ್ ಮೆಶಿನ್ ಇರುವುದು ಅಗತ್ಯ ಎನ್ನುತ್ತಾರೆ ಡಾ.ಪದ್ಮನಾಭ ಕಾಮತ್.

Advertisement

ಸ್ವಯಂ ತಪಾಸಣೆ ವಿಧಾನ : ಸುಮಾರು 2300 ರೂಪಾಯಿ ಬೆಲೆಯ ಈ ಕಿಟ್‌ನಲ್ಲಿ ಸುಲಭವಾಗಿ ಸ್ವತಃ ತಪಾಸಣೆ ನಡೆಸಬಹುದು. ನಾವೇ ತೋಳಿಗೆ ಕಿಟ್‌ನಲ್ಲಿರುವ ಬೆಲ್ಟನ್ನು ಸುತ್ತಿದ ಬಳಿಕ ಯಂತ್ರದ ಗುಂಡಿಯನ್ನು ಆನ್ ಮಾಡಬೇಕು. ಸ್ವಲ್ಪ ಹೊತ್ತಿನಲ್ಲಿ ಸ್ವಯಂ ಆಗಿ ರಕ್ತದೊತ್ತಡದ ಪರೀಕ್ಷೆ ನಡೆಯುತ್ತದೆ. ಕೊನೆಗೆ ಮೆಶಿನ್‌ನಲ್ಲೇ ಬಿ.ಪಿ. ಪ್ರಮಾಣದ ಡಿಸ್‌ಪ್ಲೇ ಕಾಣುತ್ತದೆ.
ಒಂದೆರಡು ನಿಮಿಷದಲ್ಲಿ ಬಿ.ಪಿ. ತಪಾಸಣೆ ಮುಗಿದುಹೋಗುತ್ತದೆ. ಪತ್ರಕರ್ತರು ಪ್ರೆಸ್ ಕ್ಲಬ್‌ಗೆ ಆಗಮಿಸಿ ಸ್ವಯಂ ತಪಾಸಣೆ ನಡೆಸಬಹುದು. ಪತ್ರಕರ್ತರು ಇದರ ಪ್ರಯೋಜನ ಪಡೆಯಬೇಕು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತು ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರುವಿನಂತಿಸಿದ್ದಾರೆ. ಅಲ್ಲದೆ ಈ ಕೊಡುಗೆ ನೀಡಿದ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌ಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಕಾರ್ಯದಲ್ಲಿ ಡಾ.ಪದ್ಮನಾಭ ಕಾಮತ್:

Advertisement

ಮಂಗಳೂರಿನ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರು ಸಾಮಾಜಿಕ ಕಾರ್ಯದಲ್ಲಿ ನಿರತರಾಗಿದ್ದಾರೆ. ಗ್ರಾಮೀಣ ಭಾಗದ ಜನರು ಹೃದ್ರೋಗ ಸಮಸ್ಯೆಯಿಂದ ದೂರವಾಗಲು ಹಾಗೂ ಹೃದಯಾಘಾತದಂತಹ ಸಮಸ್ಯೆಗಳಿಂದ ಹೊರಬಂದು ಜೀವ ಉಳಿಸಲು ಈಗಾಗಲೇ ಗ್ರಾಮೀಣ ಭಾಗಕ್ಕೆ ಇಸಿಜಿ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇದಕ್ಕಾಗಿ ವಿವಿಧ ಸಂಸ್ಥೆಗಳೂ ಸಹಕಾರ ನೀಡಿವೆ. ಇದಕ್ಕಾಗಿಯೇ ವ್ಯಾಟ್ಸಪ್ ಗ್ರೂಪು ರಚನೆ ಮಾಡಿ ಗ್ರಾಮೀಣ ಭಾಗದ ಜನರ ಇಸಿಜಿ ಗಮನಿಸಿ ಚಿಕಿತ್ಸೆ ಬಗ್ಗೆ ಸಲಹೆ ನೀಡುತ್ತಿದ್ದಾರೆ. ಇದೀಗ ರಾಜ್ಯದಾದ್ಯಂತ ಈ ಯೋಜನೆ ವಿಸ್ತರಣೆ ಮಾಡುತ್ತಿದ್ದು , ಗ್ರಾಮೀಣ ಭಾಗ ಜನರ ಜೀವ ಉಳಿಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

10 hours ago

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

1 day ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

1 day ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

2 days ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

2 days ago