ಅಹಮದಾಬಾದ್ : ಚಂಡಮಾರುತ ವಾಯು ಇದೀಗ ಪಥ ಬದಲಿಸಿದೆ. ಗುಜರಾತ್ ಕಡಲು ತೀರದಲ್ಲಿ ಭಾರೀ ಗಾಳಿ ಹಾಗೂ ಮಳೆ ಕಂಡುಬಂದು ಆತಂಕಕ್ಕೆ ಕಾರಣವಾಗಿತ್ತು. ಆದರೆ ರಾತ್ರಿ ವೇಳೆಗೆ ಪಥ ಬದಲಿಸಿದೆ. ಹೀಗಾಗಿ ಗುಜರಾತ್ ಕಡೆಗೆ ಈಗ ಚಂಡಮಾರುತ ಹೊಡೆತ ತಪ್ಪಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಜಾಗ್ರತಾ ಕ್ರಮವಾಗಿ ಗುಜರಾತ್ ಕರಾವಳಿ ತೀರದ ಸುಮಾರು 250000 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಈಗಿನ ಮಾಹಿತಿ ಪ್ರಕಾರ ಪೋರಬಂದರ್, ದ್ವಾರಕಾ , ಮಹುವಾ ಬೀಚ್ ಗಳ ಸಮೀಪವಾಗಿ ಚಂಡಮಾರುತ ಸಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಕರಾವಳಿ ತೀರಕ್ಕೆ ಇನ್ನೂ ಅಪಾಯ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಗುಜರಾತ್ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿಯೂ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ವಾಯು ಚಂಡ ಮಾರುತ ಪಥ ಬದಲಿಸಿದರೂ ರೆಡ್ ಎಲರ್ಟ್ ಇನ್ನೂ ಇದೆ.
Advertisement
ಕರ್ನಾಟಕದಲ್ಲೂ ವಾಯು ಚಂಡಮಾರುತ ಪರಿಣಾಮ ಉಂಟಾಗಿದ್ದು, ಕರಾವಳಿ ಪ್ರದೇಶದಲ್ಲಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement