ಸುಳ್ಯ : ಇಲ್ಲಿನ ಜೀವನದಿ ಪಯಸ್ವಿನಿ ಕುರಿತು ಅರಿವು ಕಾಳಜಿ ಕುರಿತಂತೆ ಸಂವಾದ, ಕಾರ್ಯಯೋಜನೆ, ಚರ್ಚೆ, ಅನುಷ್ಠಾನದ ಬಗ್ಗೆ ಜ. 12ರಂದು ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದ ಆವರಣದಲ್ಲಿ ಮದ್ಯಾಹ್ನ 2ರಿಂದ ಕಾರ್ಯಕ್ರಮ ನಡೆಯಲಿದ್ದು, ಈ ಕುರಿತು ಪೂರ್ವಭಾವಿ ಸಭೆ ಗುರುವಾರ ನಡೆಯಿತು.
ಉತ್ಸವ ಸಮಿತಿ ಅಧ್ಯಕ್ಷ ಸಿಎ| ಗಣೇಶ್ ಭಟ್ ಮಾತನಾಡಿ ಒಂದು ದಿನದ ಕಾರ್ಯಕ್ರಮದಲ್ಲಿ ನದಿಯ ಬಗ್ಗೆ ತಜ್ಞರಿಂದ ಮಾಹಿತಿ, ನದಿಯ ಸಮೃದ್ಧಿಗಾಗಿ ಒಂದು ವರ್ಷ ಕೈಗೊಳ್ಳಬಹುದಾದ ಕಾರ್ಯಯೋಜನೆ, ವಿಷಯ ಮಂಡನೆ, ಸಂವಾದ, ನದಿ ರಕ್ಷಣೆಗಾಗಿ ಪ್ರತಿಜ್ಞಾವಿಧಿ ಸ್ವೀಕಾರ ಕೊನೆಗೆ ನದಿ ಪೂಜೆ ನಡೆಸುವ ಕುರಿತಾದ ರೂಪುರೇಖೆಯನ್ನು ತಿಳಿಸಿದರು. ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಬಗ್ಗೆ , ನದಿ ನೀರಿಗೆ ಚರಂಡಿ ನೀರು ಸೇರಿ ಕಲುಷಿತಗೊಳ್ಳುವ ಬಗ್ಗೆ, ಕುಡಿಯುವ ನೀರು ಕಲುಷಿತಗೊಂಡಿರುವ ಬಗ್ಗೆ ಮೊದಲಾದವುಗಳ ಬಗ್ಗೆ ಚರ್ಚೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಇನ್ನಷ್ಟು ಆಸಕ್ತ ಸೇವಾ ಸಂಘ ಸಂಸ್ಥೆಗಳನ್ನು ಸೇರಿಸಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಸಂಚಾಲಕ ಪ್ರಕಾಶ್ ಮೂಡಿತ್ತಾಯ ಮಾಹಿತಿ ನೀಡಿದರು. ಉಪಾಧ್ಯಕ್ಷ ಮಮತಾ ರವೀಶ್ ಪಡ್ಡಂಬೈಲು, ಖಜಾಂಜಿ ಕೇಶವ ಸಿ.ಎ., ನಿರ್ದೇಶಕ ಡಾ|ಪ್ರಭಾಕರ ಶಿಶಿಲ, ಡಾ|ರಂಗಯ್ಯ, ಶ್ರೀಕೃಷ್ಣ ಎಂ.ಎನ್., ನವೀನ್ ಸೋಮಯಾಗಿ, ಗಿರೀಶ್ ಕೇಕುಣ್ಣಾಯ, ಡಾ|ಚಂದ್ರಶೇಖರ ದಾಮ್ಲೆ, ಮಮತಾ ಮೂಡಿತ್ತಾಯ, ಜಯರಾಮ ಭಾರದ್ವಾಜ, ದೇವಿಪ್ರಸಾದ್ ಜಿ.ಸಿ., ರವಿಕುಮಾರ್, ಶಶಿಧರ್ ಎಂ.ಜೆ., ಪ್ರಭಾಕರ ನಾಯರ್, ನವೀನ್‍ಕುಮಾರ್ ಎಂ., ವೇ|ಮೂ ವೆಂಕಟೇಶ ಶಾಸ್ತ್ರಿ, ಪುಷ್ಪಾ ನಾಗರಾಜ, ಶಾಂತಾ ಪಿ.ಆರ್., ಗಂಗಾಧರ ಮಟ್ಟಿ, ಸುಧಾಶ್ರೀಧರ್, ಡಾ|ಹರ್ಷಿತಾ ಪುರುಷೋತ್ತಮ, ಲೋಕೇಶ ಗುಡ್ಡೆಮನೆ, ವಿನೋದ್ ಲಸ್ರಾದೊ, ಡಾ| ನಾಗರಾಜ ಆಚಾರ್ ಮೊದಲಾದವರು ಸಲಹೆ ಸೂಚನೆ ನೀಡಿದರು.
ಮುಂದಿನ ಸಭೆಯನ್ನು ಜ. 10ರಂದು ಸಂಜೆ 5.30ಕ್ಕೆ ಗುರು ರಾಘವೇಂದ್ರ ಮಠದಲ್ಲಿ ನಡೆಸಲು ನಿರ್ಧರಿಸಲಾಯಿತು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…