ಸುದ್ದಿಗಳು

ಪರಿಸರ ದಿನದ ಮೋಹಕ ದೃಶ್ಯ : ಹಸಿರು ಸೂಸುವ ಸೀತಾವನ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ಎರಡು ವರ್ಷದ ಹಿಂದೆ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ನೆಟ್ಟ ಗಿಡಗಳು ಫಸಂದಾಗಿ ಬೆಳೆದು ಹಸಿರು ಸೂಸುತಿದೆ. ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಲ್ಲೆಂಬಿಯಲ್ಲಿ ಭುವಿಯನ್ನೇ ಹಸಿರಾಗಿಸಿರುವ ಸೀತಾವನ ಈ ವಿಶ್ವ ಪರಿಸರ ದಿನಾಚರಣೆ ಸಂದರ್ಭದ ಮನಮೋಹಕ ದೃಶ್ಯ. ಪರಿಸರ ದಿನದಂದು ಹೆಸರಿಗೊಂದು ಗಿಡ ನೆಟ್ಟು ಅದನ್ನು ಅಲ್ಲಿಗೇ ಮರೆಯುವವರು ನೋಡಲೇ ಬೇಕಾದ ದೃಶ್ಯ.

Advertisement

ಸುಳ್ಯ-ಬಂದಡ್ಕ ಅಂತಾರಾಜ್ಯ ರಸ್ತೆ ಬದಿಯಲ್ಲಿ ಕಣ್ಣಿಗೆ ಮತ್ತು ಮನಸಿಗೆ ಹಸಿರ ಸೌಂಧರ್ಯ ಧಾರೆಯೆರೆಯುವ ಸೀತಾವನ ಕಂಡು ಬರುತ್ತಿದೆ. ಯುವ ಕೃಷಿಕ ಪ್ರವೀಣ್ ಕಲ್ಲೆಂಬಿ ಅವರ ಸ್ಥಳದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ ಹಸಿರು ಲೋಕ ಸೃಷ್ಠಿಸಲಾಗಿದೆ. ಗ್ರಾಮ ವಿಕಾಸ ಸಮಿತಿ ಮತ್ತು ಅರಣ್ಯ ಇಲಾಖೆಯ ಸಹಕಾರದಲ್ಲಿ ಒಂದು ಏಕ್ರೆ ಸ್ಥಳದಲ್ಲಿ ಸೀತಾ ವನ ನಿರ್ಮಿಸಲಾಗಿದೆ. ಸುಳ್ಯದಲ್ಲಿ 2017ರಲ್ಲಿ ಗ್ರಾಮ ವಿಕಾಸ ಸಮಿತಿಯ ನೇತೃತ್ವದಲ್ಲಿ ವೃಕ್ಷಾಂದೋಲನ ನಡೆಸಿ ತಾಲೂಕಿನಾದ್ಯಂತ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಸೀತಾ ವನ ಮಾಡುವ ಆಶಯ ಉಂಟಾಯಿತು. ಅದಕ್ಕಾಗಿ ಸ್ಥಳ ನೀಡಲು ಪ್ರವೀಣ್ ಕಲ್ಲೆಂಬಿ ಮುಂದೆ ಬಂದರು. ಸುಮಾರು ಮುನ್ನೂರು ಗಿಡಗಳನ್ನು ನೆಡಲಾಯಿತು. ಅದರಲ್ಲಿ ಬಹುತೇಕ ಗಿಡಗಳು ಚೆನ್ನಾಗಿ ಬೆಳೆದು ಬಂದಿದೆ. ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ನೆಟ್ಟ ಗಿಡಗಳು ಸೇರಿ ಸುಮಾರು ಏಂಟು ನೂರಕ್ಕೂ ಮಿಕ್ಕಿ ಗಿಡಗಳು ಸೀತಾವನದಲ್ಲಿ ರಾರಾಜಿಸುತಿದೆ. ಹಲಸು, ಮಾವು, ಮಹಾಗಣಿ, ಸಾಗುವಾನಿ, ಸಿಲ್ವರ್ ಓಕ್, ರಕ್ತ ಚಂದನ, ಹೀಗೆ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ತಮ್ಮ ಕುಟುಂಬದ ಐದು ಏಕ್ರೆ ಸ್ಥಳಲ್ಲಿ ಒಂದು ಎಕ್ರೆ ಸ್ಥಳವನ್ನು ಹಸಿರು ವನಕ್ಕಾಗಿ ಪ್ರವೀಣ್ ಮತ್ತು ಕುಟುಂಬದವರು ಸೇರಿ ಮೀಸಲಿಟ್ಟಿದ್ದಾರೆ. ಇವರ ಸ್ಥಳಪೂರ್ತಿಯಾಗಿ ಅಡಕೆ ತೋಟವಾಗಿತ್ತು. ಆದರೆ ಹಳದಿ ರೋಗ ಬಂದು ಅಡಕೆ ಕೃಷಿ ನಾಶವಾದಾಗ ರಬ್ಬರ್ ಕೃಷಿ ಮಾಡಿದ್ದರು. ಬೆಲೆಯಿಲ್ಲದೆ ರಬ್ಬರ್ ಕೃಷಿಯೂ ಕೈಕೊಟ್ಟಾಗ ತಮ್ಮ ಸ್ಥಳದ ಒಂದು ಎಕ್ರೆಯಲ್ಲಿ ಮರ ಗಿಡ ಬೆಳೆಸಲು ನಿರ್ಧರಿಸಲಾಯಿತು. ಕಳೆದ ಕೆಲವು ವರ್ಷಗಳಿಂದ ಇಲ್ಲಿ ಗಿಡ ನೆಡುತ್ತಾ ಬಂದಿದ್ದರೂ ಕಳೆದ ವರ್ಷದಿಂದ ಅದನ್ನು ಪೂರ್ತಿಯಾಗಿ ವನವಾಗಿ ಮಾರ್ಪಾಡು ಮಾಡಲಾಗಿದೆ.

 

ನೆಟ್ಟ ಗಿಡಗಳಿಗೆ ಆರಂಭದ ವರ್ಷಗಳಲ್ಲಿ ಗೊಬ್ಬರ, ನೀರು ಹಾಕಿ ಪೋಷಿಸಲಾಗುತ್ತದೆ. ಗಿಡಗಳು ಚೆನ್ನಾಗಿ ಬೆಳೆದು ಹಸಿರ ರಾಶಿಯಂತಾಗಿದೆ. ಪ್ರವೀಣ್ ಕಲ್ಲೆಂಬಿಯವರೇ ಇದರ ನಿರ್ವಹಣೆ ಮಾಡುತ್ತಾರೆ. ಗಿಡ ನಾಶವಾದ ಸ್ಥಳದಲ್ಲಿ ಮತ್ತು ಇದರಲ್ಲಿ ಉಳಿದ ಸ್ಥಳದಲ್ಲಿಯೂ ಕಳೆದ ವರ್ಷವೂ ಗಿಡಗಳನ್ನು ನೆಡಲಾಗಿದೆ.

 

ಈ ಬಗ್ಗೆ ಸುಳ್ಯನ್ಯೂಸ್.ಕಾಂ ಜೊತೆ ಮಾತನಾಡಿದ ಪ್ರವೀಣ್ ಕಲ್ಲೆಂಬಿ, “ಅಡಕೆ ಹಳದಿ ರೋಗ ಬಂದು ಕೃಷಿ ನಾಶವಾದಾದ ಭೂಮಿಯಲ್ಲಿ ಸ್ವಲ್ಪ ಭಾಗದಲ್ಲಿ ಅರಣ್ಯ ಬೆಳೆಯುವ ಯೋಜನೆ ಹಾಕಿ ಕೊಳ್ಳಲಾಗಿತ್ತು. ಅದನ್ನು ಇನ್ನಷ್ಟು ವಿಸ್ತರಿಸಿ ಸೀತಾ ವನ ನಿರ್ಮಿಸಲಾಗಿದೆ. ಇದರಿಂದ ಪರಿಸರ, ಕಾಡು ವೃದ್ದಿಯಾಗುವುದರ ಜೊತೆಗೆ ನಮ್ಮ ಭೂಮಿಗೆ ಇದೊಂದು ಆಸ್ತಿಯೂ ಆಗಬಹುದು” ಎನ್ನುತ್ತಾರೆ. 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…

7 hours ago

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

22 hours ago

“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್

ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…

22 hours ago

ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ | ಭಾರತದಲ್ಲಿ ಪಾಕ್ ಸರ್ಕಾರದ ಸಾಮಾಜಿಕ ಜಾಲತಾಣ ನಿಷೇಧ

ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…

22 hours ago

ರಾಜ್ಯದಲ್ಲಿ ಒಂದು ವಾರ ಗುಡುಗು ಸಹಿತ ಮಳೆ ಸಾಧ್ಯತೆ | 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ

ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…

22 hours ago