ಪರೋಪಕಾರ ಗುಣ ರೋಟೆರಿಯನ್ನರ ರಕ್ತದಲ್ಲಿದೆ

July 14, 2019
4:00 PM

ಬೆಳ್ಳಾರೆ: ಪರೋಪಕಾರ ಗುಣ ನಮ್ಮೆಲ್ಲರ ರಕ್ತದಲ್ಲಿದೆ. ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಗುಣ ರೋಟರಿಯನ್ನರಿಗಿದೆ. ಅದಕ್ಕಾಗಿಯೇ ರೋಟರಿಯು ವಿಶ್ವಮಾನ್ಯವಾಗಿದೆ ಎಂದು ಪದ ಪ್ರಧಾನ ಕಾರ್ಯಕ್ರಮ ನಡೆಸಿಕೊಟ್ಟ ಮಡಿಕೇರಿಯ ಖ್ಯಾತ ಲೆಕ್ಕ ಪರಿಶೋಧಕರೂ, ರೋಟರಿ ಜಿಲ್ಲೆಯ ಮಾಜಿ ಜಿಲ್ಲಾ ಕಾರ್ಯದರ್ಶಿ ಸಿ.ಎ ಈಶ್ವರ ಭಟ್ ನುಡಿದರು.

Advertisement
Advertisement
Advertisement

ಬೆಳ್ಳಾರೆಯ ಶ್ರೀದೇವಿ ಹೈಟ್ಸ್‍ನ ಸಭಾಂಗಣದಲ್ಲಿ ನಡೆದ 2019-20ನೇ ಸಾಲಿನ ನೂತನ ಸಮಿತಿಯ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಕಾರ್ಯಕ್ರಮದ ನಿರ್ವಾಹಕನಾಗಿ ಅವರು ಮಾತನಾಡಿದರು.

Advertisement

ನೂತನ ಅಧ್ಯಕ್ಷರಾಗಿ ಬಿ. ನರಸಿಂಹ ಜೋಶಿಯವರು ಅಧಿಕಾರ ಸ್ವೀಕರಿಸಿ ಮುಂದಿನ ಯೋಜನೆಗಳ ಬಗ್ಗೆ ವಿವರ ನೀಡಿದರು. ಕ್ಲಬ್ಬಿನ ಉಪಾಧ್ಯಕ್ಷರಾಗಿ ಮೋನಪ್ಪ ಎ, ನಿರ್ದೇಶಕರುಗಳಾಗಿ ರವೀಂದ್ರ ಗೌಡ ಯಂ., ಬಿ. ಸುಬ್ರಹ್ಮಣ್ಯ ಜೋಶಿ, ಶಾಮಸುಂದರ ರೈ, ಚಂದ್ರಶೇಖರ ರೈ, ನವೀನ್ ಕುಮಾರ್ ರೈ, ತಂಬಿನಮಕ್ಕಿ, ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಪಿ. ಎಸ್.ರವರು  ಅಧಿಕಾರ ಸ್ವೀಕರಿಸಿದರು. ನೂತನ ಸದಸ್ಯನಾಗಿ ಸೀತಾರಾಮ ಶೆಟ್ಟಿಯವರನ್ನು ಕ್ಲಬ್ಬಿಗೆ ಸೇರ್ಪಡೆಗೊಳಿಸಲಾಯಿತು.

ಮುಖ್ಯ ಅತಿಥಿಯಾದ ಡಿಸ್ಟ್ರಿಕ್ಟ್ ಅಸಿಸ್ಟೆಂಟ್ ಗವರ್ನರ್ ಡಾ| ಪಿ. ಕೆ. ಕೇಶವರವರು ಕ್ಲಬ್ಬಿನಿಂದ ಹೊರತಂದ ರೋಟರಿ ವಾಣಿಯನ್ನು ಬಿಡುಗಡೆಗೊಳಿಸಿ ಕ್ಲಬಿನ ಕಾರ್ಯಚಟುವಟಿಕೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಝೋನಲ್ ಲೆಪ್ಟಿನೆಂಟ್ ಪ್ರಭಾಕರ ಆಳ್ವ ಭಜನಿಗುತ್ತು ಮತ್ತು ಸುಳ್ಯ ಕ್ಲಬಿನ ಅಧ್ಯಕ್ಷ ಡಾ| ಪುರುಷೋತ್ತಮರವರು ಶುಭ ಹಾರೈಸಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ಗಮಿತ ಅಧ್ಯಕ್ಷ ಎ.ಕೆ ಮಣಿಯಾಣಿ ವಹಿಸಿದರು. ವಿನಯ್ ಕುಮಾರ್ ಕೆ. ಸ್ವಾಗತಿಸಿ. ಕಾರ್ಯದರ್ಶಿ ಗೋಪಾಲಕೃಷ್ಣ ಪಿ. ಎಸ್.ರವರು ವರದಿ ವಾಚಿಸಿ ವಂದಿಸಿದರು. ಶ್ಯಾಮಸುಂದರ್ ರೈ ಕಾರ್ಯಕ್ರಮ ನಿರೂಪಿಸಿದರು.

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಸಮಿತಿ ಸದಸ್ಯರಿಂದ ವಿವಿಧ ಕೊಡುಗೆಗಳನ್ನು ನೀಡಲಾಯಿತು. ಜಿಲ್ಲಾ ಯೋಜನೆಗಳಾದ ‘ಜೀವನ್ ಸಂಧ್ಯಾ’ ಕಾರ್ಯಕ್ರಮದಡಿ ಇಬ್ಬರು ನಿರ್ಗತಿಕ ವೃದ್ಧ ಮಹಿಳೆಯರಿಗೆ ತಲಾ 25 ಕೆ. ಜಿ. ಅಕ್ಕಿ ಮತ್ತು ರೂಪಾಯಿ ಒಂದು ಸಾವಿರವನ್ನು ನೀಡಲಾಯಿತು. ಎ. ಕೆ. ಮಣಿಯಾಣಿ, ಗೋಪಾಲಕೃಷ್ಣ ಪಿ. ಯಸ್. ಮತ್ತು ಪ್ರಭಾಕರ ಆಳ್ವ ಕೊಡುಗೆ ನೀಡಿ ಸಹಕರಿಸಿದರು. ನೂತನ ಅಧ್ಯಕ್ಷ ನರಸಿಂಹ ಜೋಶಿಯವರ ಪ್ರಾಯೋಜಕತ್ವದಲ್ಲಿ ಬೆಳ್ಳಾರೆ ಕೆ.ಪಿ.ಎಸ್. ಸ್ಕೂಲ್‍ಗೆ ಫ್ಯಾನನ್ನು ನೀಡಲಾಯಿತು. ರೋಟರಿ ಪ್ರಾಯೋಜಕತ್ವದಲ್ಲಿ ಬೆಳ್ಳಾರೆ ಕೆ.ಪಿ.ಎಸ್.ನ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಕು| ಹೇಮಾಸ್ವಾತಿ ಕುರಿಯಾಜೆಯವರಿಗೆ ದತ್ತಿನಿಧಿ ಮೊತ್ತ ನೀಡಿ ಗೌರವಿಸಲಾಯಿತು. ರೋಟರಿ ಪೌಂಡೇಶನ್‍ಗೆ ಕ್ಲಬ್ ವತಿಯಿಂದ ಚೆಕ್ ಮೂಲಕ ದೇಣಿಗೆ ನೀಡಲಾಯಿತು.

Advertisement

 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದಲ್ಲಿ ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜನ | ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್​ಆರ್​ಐ
April 24, 2024
9:33 PM
by: The Rural Mirror ಸುದ್ದಿಜಾಲ
ಪ್ಯಾರೀಸ್‌ನಲ್ಲಿ ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ಗೆ ಕೆಲವೇ ದಿನ ಬಾಕಿ | ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌ | ಒಲಿಂಪಿಕ್ಸ್‌ನಲ್ಲಿರಲಿದೆ ನೂರಾರು ವಿಶೇಷ
April 24, 2024
9:02 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror