ಪಾಜಪಳ್ಳ – ಕಲ್ಮಡ್ಕ – ಕುಕ್ಕುಜಡ್ಕ ರಸ್ತೆಯ ಅವ್ಯವಸ್ಥೆ 

June 15, 2019
12:00 PM

ಬೆಳ್ಳಾರೆ : ಪಾಜಪಳ್ಳದಿಂದ ‌ಕಲ್ಮಡ್ಕ ರಸ್ತೆಯ ಮಾರ್ಗವಾಗಿ ಕುಕ್ಕುಜಡ್ಕ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು,ಸಾರ್ವಜನಿಕರು , ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುವಂತಾಗಿದೆ.

Advertisement
Advertisement

ಪಾಜಪಳ್ಳದಿಂದ ಪ್ರಾರಂಭವಾಗುವ ರಸ್ತೆಯು ಇಂದ್ರಾಜೆ ಗ್ರಾಮದಲ್ಲಿ ಹಾದು ಹೋಗಿ ಕಲ್ಮಡ್ಕ ಗ್ರಾಮಕ್ಕೆ ಸೇರಿ ನಂತರ ಕುಕ್ಕುಜಡ್ಕವನ್ನು ಸೇರಿಕೊಳ್ಳುತ್ತದೆ. ಈ ರಸ್ತೆ ಹಾದು ಹೋಗುವ ಪ್ರತಿ ಗ್ರಾಮದಲ್ಲಿ ನೂರಾರು ಮನೆಗಳಿವೆ , ನೂರಾರು ವಿದ್ಯಾರ್ಥಿಗಳು ಪ್ರತಿದಿನ ಬೇರೆ ಬೇರೆ ಕಡೆ ಶಾಲೆಗೆ ಹೋಗುತ್ತಾರೆ. ಸರಕಾರಿ ಶಾಲೆಗಳಿವೆ. ಸಹಕಾರಿ ಬ್ಯಾಂಕುಗಳು ಇವೆ. ಪ್ರತಿದಿನ ಈ ರಸ್ತೆಯಲ್ಲಿ 9 ಸರಕಾರಿ ಬಸ್ ಗಳು ಓಡಾಡುತ್ತವೆ. ಇನ್ನು ಖಾಸಗಿ ವಾಹನಕ್ಕೆ ಲೆಕ್ಕವಿಲ್ಲ. ಈ ರಸ್ತೆಯ ಮೂಲಕ ಸುಳ್ಯವನ್ನು ಸುಲಭವಾಗಿ ತಲುಪಬಹುದು. ಆದರೆ ರಸ್ತೆಯ ಅಧೋಗತಿ ಅವ್ಯವಸ್ಥೆ ಕಾರಣದಿಂದ ಯಾರು ಕೂಡ ಈ ರಸ್ತೆಯಲ್ಲಿ ಓಡಾಡಲು ಇಚ್ಚಿಸುವುದಿಲ್ಲ .ಸಮರ್ಪಕವಾದ ಚರಂಡಿ ವ್ಯವಸ್ಥೆಇಲ್ಲ. ರಸ್ತೆಯು ಒಂದು ಬಾಳೆಗಿಡ ನೆಡುವಷ್ಟು ದೊಡ್ಡ ಗುಂಡಿಗಳಾಗಿರುವುದರಿಂದ , ಡಾಮರ್ ಸಂಪೂರ್ಣವಾಗಿ ಕಿತ್ತು ಹೋಗಿರುವುದರಿಂದ ಅಲ್ಲದೆ ಮಳೆಯ ನೀರು ರಸ್ತೆಯಲ್ಲೆ ಹರಿದು ಕೆಸರುಮಯವಾಗಿರುವುದರಿಂದ ವಿದ್ಯಾರ್ಥಿಗಳಿಗೆ , ಸಾರ್ವಜನಿಕರಿಗೆ ಸಂಪೂರ್ಣವಾಗಿ ಅಸುರಕ್ಷಿತ ರಸ್ತೆಯಾಗಿದೆ‌.ಈ ರಸ್ತೆಯ ಅವ್ಯವಸ್ಥೆ ಮೇಲಾಧಿಕಾರಿಗಳ ಗಮನಕ್ಕೆ ಬಂದಿದ್ದರು ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ಈ ರಸ್ತೆಯನ್ನು ಆದಷ್ಟು ಬೇಗ ಸರಿಪಡಿಸಿಕೊಡಬೇಕಾಗಿ ಸಾರ್ವಜನಿಕರ, ವಿದ್ಯಾರ್ಥಿಗಳ ಒಕ್ಕೊರಲ ಒತ್ತಾಯವಾಗಿದೆ‌.

Advertisement

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬರಗಾಲದ ಪರಿಣಾಮ | ತರಕಾರಿ ಬೆಲೆ ಏರಿಕೆಯ ಬಿಸಿ | ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ…. ಎಲ್ಲವೂ ದರ ಏರಿಕೆ |.
April 25, 2024
2:39 PM
by: The Rural Mirror ಸುದ್ದಿಜಾಲ
ಲೋಕಸಭೆ ಚುನಾವಣೆಗೆ ದಿನಗಣನೆ | ‘ಚುನಾವಣಾ ಪರ್ವ – ದೇಶದ ಗರ್ವ’ ಘೋಷ ವಾಕ್ಯದೊಂದಿಗೆ ಚುನಾವಣೆ | ಚುನಾವಣಾ ಆಯೋಗದಿಂದ ಭರದ ಸಿದ್ಧತೆ
April 23, 2024
1:25 PM
by: The Rural Mirror ಸುದ್ದಿಜಾಲ
ಅಡಿಕೆ ಹಳದಿ ಎಲೆರೋಗ | ಜನಪ್ರತಿನಿಧಿಗಳು ಮಾಡಬೇಕಾದ್ದೇನು..? | ಸರ್ಕಾರ ಮಾಡಬೇಕಾದ್ದೇನು..? | ಚುನಾವಣಾ ಸಮಯದಲ್ಲಿ ಏಕೆ ಚರ್ಚೆಯಾಗುತ್ತಿಲ್ಲ..?‌ |
April 23, 2024
7:00 AM
by: ಮಹೇಶ್ ಪುಚ್ಚಪ್ಪಾಡಿ
ಹಠ ಬಿಡದ ಕೆ ಎಸ್‌ ಈಶ್ವರಪ್ಪ | ಬಂಡಾಯವೆದ್ದ ಈಶ್ವರಪ್ಪ ಅವರನ್ನು ಉಚ್ಚಾಟಿಸಿದ ಬಿಜೆಪಿ |
April 22, 2024
10:47 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror