ಪುತ್ತೂರು: ಪೌರತ್ವ ಸುಧಾರಣೆ ಕಾಯಿದೆ’ ಯ ವಿರುದ್ಧ ಹಿಂಸಾಚಾರದ ಪ್ರಕರಣದಲ್ಲಿ ಉತ್ತರಪ್ರದೇಶ ಪೋಲೀಸರು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ( ಪಿ.ಎಫ್.ಐ) ಸಂಘಟನೆಯ 108 ಕಾರ್ಯಕರ್ತರು ಬಂಧಿಸಿದರು. ಇಂತಹ ಸಂಘಟನೆಯನ್ನು ತಕ್ಷಣವೇ ನಿಷೇಧ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಜನಾರ್ದನ ಗೌಡ ಹೇಳಿದ್ದಾರೆ.
ಅವರು ಪುತ್ತೂರಿನ ಮಿನಿ ವಿಧಾನ ಸೌಧದ ಮುಂಭಾಗ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳ ವತಿಯಿಂದ ನಡೆದ ರಾಷ್ಟ್ರೀಯ ಹಿಂದೂ ಆಂದೋಲನದಲ್ಲಿ ಮಾತನಾಡಿದರು. ಪಿ ಎಫ್ ಐ ಸಂಘಟನೆಯ ಇತರ ಐವರನ್ನು ಬಿಜನೌರ್ ನಲ್ಲಿ ಬಂಧಿಸಲಾಗಿದ್ದು ಈ ಐವರು ಸದಸ್ಯರು ಶಾಹೀನ್ ಬಾಗ್ ಆಂದೋಲನವನ್ನು ಉದ್ರಿಕ್ತಗೊಳಿಸಲು, ಆಂದೋಲನಕಾರರನ್ನು ಪ್ರಚೋದಿಸಲು ಹಾಗೂ ಆಂದೋಲನಕಾರರಿಗೆ ಆರ್ಥಿಕ ಸಹಾಯವನ್ನು ಪೂರೈಸುವಲ್ಲಿ ಸಕ್ರಿಯರಾಗಿದ್ದರು.ಸಂಪೂರ್ಣ ದೇಶದಲ್ಲಿ ನಿರ್ಬಂಧ ಹೇರಿರುವ ‘ಸಿಮೀ’ ಯ ಉಗ್ರಗಾಮಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ( ಪಿ.ಎಫ್.ಐ) ಕಾರ್ಯಕರ್ತರಿಗೆ ತರಬೇತಿ ನೀಡಿದ್ದಾಗಿ ಕೆಲವು ಫಟನೆಗಳಿಂದ ಬೆಳಕಿಗೆ ಬಂದಿದೆ.ಆದ್ದರಿಂದ ದೇಶದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಗೆ ತೊಂದರೆಯಾಗದೆ ಇರಲು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ಎಂಬ ಸಂಘಟನೆಯ ಮೇಲೆ ನಿರ್ಬಂಧ ಹೇರುವ ಬೇಡಿಕೆಯನ್ನು ಆಂದೋಲನದಲ್ಲಿ ವ್ಯಕ್ತಪಡಿಸಿದರು.
ಸನಾತನ ಸಂಸ್ಥೆಯ ಆನಂದ ಗೌಡ ಮಾತನಾಡಿ ಶಾಹೀನ್ ಬಾಗ್ ಪರಿಸರದಲ್ಲಿ ಪೌರತ್ವ ಸುಧಾರಣೆ ಕಾಯಿದೆ ವಿರುದ್ಧ ಡಿಸೆಂಬರ್ 15, 2019 ರಿಂದ ಮತಾಂಧರು ಧರಣಿ ಆಂದೋಲನವನ್ನು ಪ್ರಾರಂಭಿಸಲಾಯಿತು. ಪೌರತ್ವ ಸುಧಾರಣೆ ಕಾಯಿದೆ ವಿರೋಧಿ ಹೋರಾಟಗಳ ಮೂಲಕ ದೇಶದಾದ್ಯಂತ ಹಿಂಸಾಚಾರ, ಅರಾಜಕತೆಯನ್ನು ನಿರ್ಮಿಸಿ ಹಾಗೂ ದೇಶವನ್ನು ಅಸ್ಥಿರಗೊಳಿಸುವುದು ಎಂಬುದು ಕೆಲವು ಘಟನೆಗಳಿಂದ ಸ್ಪಷ್ಟವಾಗಿದೆ. ಈಗ ಈ ಆಂದೋಲನದ ಸ್ವರೂಪವನ್ನು ನೋಡಿದರೆ ‘ ವಿದೇಶೀ ಶಕ್ತಿಗಳ ಬೆಂಬಲ ಪಡೆದಿರುವ ಸಾಮ್ಯವಾದಿಗಳು ಹಾಗೂ ಮತಾಂಧರು ಪ್ರಾರಂಭಿಸಿರುವ ಈ ಪ್ರಕರಣವು ಹಿಂದೂ ಬಾಹುಳ್ಯ ‘ ಭಾರತ ದೇಶದ ವಿರುದ್ಧ ಅಂತರರಾಷ್ಟ್ರೀಯ ಷಡ್ಯಂತ್ರವಾಗಿದೆ’, ಎಂಬ ಅನುಮಾನಕ್ಕೆ ಈಗ ಪುಷ್ಟಿ ಸಿಗುತ್ತಿದೆ. ಪೋಲೀಸರು ಇಲ್ಲಿ ಆಂದೋಲನ ಮಾಡುತ್ತಿರುವುವವರನ್ನು ಎಲ್ಲರನ್ನೂ ತೆರವುಗೊಳಿಸಿ ಈ ಪರಿಸರವನ್ನು ಮುಕ್ತಗೊಳಿಸಿ ನಾಗರಿಕರು ಜೀವನ ನಡೆಸಲು ಅನುಕೂಲ ವಾತಾವರಣವನ್ನು ನಿರ್ಮಿಸಲಿ. ಅದೇ ರೀತಿ ಈ ಆಂದೋಲನದಲ್ಲಿ ದೇಶವಿರೊಧಿ, ಸಮಾಜವಿರೋಧಿ, ಹಾಗೂ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಮುಖಂಡರು, ವಕ್ತಾರರು ಇವರುಗಳ ವಿರುದ್ಧ ಅಪರಾಧಗಳನ್ನು ದಾಖಲಿಸಿಕೊಂಡು ಅವರ ಮೇಲೆ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.
ಸಭೆಯ ಬಳಿಕ ಸಹಾಯಕ ಕಮೀಷನರ್ ಗಳ ಮೂಲಕ ಕೇಂದ್ರಿಯ ಗೃಹ ಸಚಿವರಿಗೆ ಮನವಿಯನ್ನು ನೀಡಲಾಯಿತು.
ಆಂದೋಲನವನ್ನು ದಯಾನಂದ ಹೆಗ್ಡೆ ಅವರು ಶಂಖನಾದ ಮಾಡಿ ಪ್ರಾರಂಭಿಸಿದರು. ಚೇತನಾ ನಿರೂಪಿಸಿದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಜಿತೇಶ್ ಮತ್ತು ಪುಷ್ಪರಾಜ , ಕಿಶೋರ್ ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel