Advertisement
ಸುದ್ದಿಗಳು

ಪಾರದರ್ಶಕ ವ್ಯವಹಾರದಿಂದ ಸಂಘಟನೆ ವಿಶ್ವಾಸ ವೃದ್ಧಿ : ಕುಂಬ್ರ ದಯಾಕರ ಆಳ್ವ

Share

ಬೆಳ್ಳಾರೆ : ಸಂಘಟನೆಗಳು ಫಲಾಪೇಕ್ಷ ರಹಿತ ಸೇವೆಯೊಂದಿಗೆ ಪಾರದರ್ಶಕ ವ್ಯವಹಾರ, ಚಟುವಟಿಕೆಗಳಿಗೆ ಒತ್ತು ನೀಡಿದಾಗ ಸಮಾಜದ‌ ಸರ್ವರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು‌ ಮುಕ್ಕೂರು-ಕುಂಡಡ್ಕ‌ ಸಾರ್ವಜನಿಕ ಶ್ರೀ ಗಣೇಶೋತ್ಸವ ದಶಮಾನೋತ್ಸವ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಹೇಳಿದರು.

Advertisement
Advertisement
Advertisement

ಮುಕ್ಕೂರು ‌ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ದಶಮಾನೋತ್ಸವ ವತಿಯಿಂದ ಸೆ.15 ರಂದು‌ ಮುಕ್ಕೂರಿನಲ್ಲಿ ನಡೆದ‌ ಹತ್ತರ ಹುತ್ತರಿ ಸಮಾರಂಭದ ಲೆಕ್ಕಪತ್ರ ಮಂಡನೆ‌ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಳೆದ‌ ಹತ್ತು ವರ್ಷದಿಂದ ಉತ್ತಮ‌ ಕಾರ್ಯಕ್ರಮ ಹಮ್ಮಿಕೊಂಡಿರುವ ಗಣೇಶೋತ್ಸವ ಸಮಿತಿಯ ಹತ್ತರ ಹುತ್ತರಿ ಅಭೂತಪೂರ್ವ ಯಶಸ್ಸು ಕಂಡಿದೆ.‌ ಸಮಾರಂಭದ ಮುಗಿದ ಕೆಲ‌ ದಿನಗಳಲ್ಲಿ ಖರ್ಚು ಜಮೆ ವೆಚ್ಚದ ಲೆಕ್ಕಪತ್ರವನ್ನು‌ ಸಾರ್ವಜನಿಕರ ಮುಂದಿಡುವ ಮೂಲಕ ಮಾದರಿ‌‌ ಹೆಜ್ಜೆ ಇಟ್ಟಿದೆ ಎಂದ ಅವರು, ಹತ್ತರ ಹುತ್ತರಿ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Advertisement

ಸಮಿತಿ‌ ಕಾರ್ಯಾಧ್ಯಕ್ಷ ಉಮೇಶ್ ‌ಕೆಎಂಬಿ ಮಾತನಾಡಿ, ಒಳ್ಳೆಯ ಉದ್ದೇಶದ ಪರಿಶ್ರಮಕ್ಕೆ‌ ಪ್ರತಿಫಲ‌‌ ದೊರೆಯುತ್ತದೆ ಎನ್ನುವುದಕ್ಕೆ‌ ಹತ್ತರ ಹುತ್ತರಿ ಸಮಾರಂಭದ ಯಶಸ್ಸು ಉದಾಹರಣೆ. ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ‌ ಊರ-ಪರವೂರಿನ ಮೆಚ್ಚುಗೆಗೆ ಪಾತ್ರವಾಗಿದೆ. ಸಮಿತಿ‌ ಮುಂದಿನ ದಿನಗಳಲ್ಲಿ
ಇನ್ನಷ್ಟು ಸಮಾಜಮುಖಿ ಕಾರ್ಯಚಟುವಟಿಕೆ ಹಮ್ಮಿಕೊಂಡು ಯಶಸ್ವಿಯಾಗಲಿ‌ ಎಂದರು.

ಸಮಿತಿ ‌ಗೌರವ ಸಲಹೆಗಾರ ರಾಮಚಂದ್ರ ಕೋಡಿಬೈಲು ಮಾತನಾಡಿ, ಸಂಘಟನೆಗಳು ನಿರ್ದಿಷ್ಟ ಗುರಿ ತಲುಪಲು ಪ್ರತಿ ವ್ಯವಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಆಗ ಯಶಸ್ಸು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕುಂಡಡ್ಕ-ಮುಕ್ಕೂರು ಗಣೇಶೋತ್ಸವ ಸಮಿತಿ ಪಾರದರ್ಶಕ ವ್ಯವಸ್ಥೆಯೊಂದಿಗೆ ಮುನ್ನಡೆದಿದ್ದು, ಹತ್ತರ ಹುತ್ತರಿ ಸಮಾರಂಭದ ಯಶಸ್ಸಿಗೆ‌ ಮುಖ್ಯ ಕಾರಣ ಎಂದರು.

Advertisement

ಸಮಿತಿ ಗೌರವ ಸಲಹೆಗಾರ ಸುಧಾಕರ ರೈ ಕುಂಜಾಡಿ ಮಾತನಾಡಿ, ಸಂಘಟನೆಯ ಒಟ್ಟು ಉದ್ದೇಶ ಸಮಾಜಮುಖಿ ಆಗಿರಬೇಕು. ಆಗ ಜನರ ವಿಶ್ವಾಸ, ನಂಬಿಕೆ ಉಳಿದುಕೊಳ್ಳಲು ಸಾಧ್ಯವಿದೆ. ಜಾತಿ, ಧರ್ಮ, ಪಕ್ಷ ಬೇಧವಿಲ್ಲದೆ ಒಗ್ಗಟ್ಟಿನ ನಿಲುವಿನೊಂದಿಗೆ ಯೋಜನೆ, ಯೋಚನೆ ಅನುಷ್ಠಾನಿಸುವ ಗಣೇಶೋತ್ಸವ ಸಮಿತಿ‌ ಸಮಾಜಕ್ಕೆ ‌ಮಾದರಿ‌ ಹೆಜ್ಜೆ ಇಟ್ಟಿದೆ ಎಂದರು.

ಪ್ರಗತಿಪರ ಕೃಷಿಕ ಎನ್.ಸುಬ್ರಾಯ ಭಟ್ ನೀರ್ಕಜೆ ‌ಮಾತನಾಡಿ, ಇಂತಹ ಕಾರ್ಯಕ್ರಮಗಳು‌ ಊರಿಗೂ ಸಂಭ್ರಮ ತಂದೊಡ್ಡಲು‌ ಪೂರಕ. ಎಲ್ಲರೂ ಜತೆಗೂಡಿ ದಶ ಸಂಭ್ರಮವನ್ನು ವ್ಯವಸ್ಥಿತವಾಗಿ ನಡೆಸಿರುವುದು‌ ಶ್ಲಾಘನೀಯ ಎಂದರು.

Advertisement

ಜ್ಯೋತಿ ಯುವಕ ಮಂಡಲ‌ ಗೌರವಾಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ ಮಾತನಾಡಿ, ಸಂಘಟಿತ ಪ್ರಯತ್ನದಿಂದ ಯಶಸ್ಸು ಸಾಧ್ಯ‌ ಎನ್ನುವುದಕ್ಕೆ‌ ಈ ಕಾರ್ಯಕ್ರಮ ಉದಾಹರಣೆ. ಊರಿನಲ್ಲಿ ‌ನಡೆಯುವ‌ ಪ್ರತಿ ಕಾರ್ಯಕ್ರಮವನ್ನು‌ ಎಲ್ಲರೂ ಸೇರಿ ಮಾದರಿಯಾಗಿ‌ ಸಂಘಟಿಸೋಣ ಎಂದರು.

ಸಭೆಯಲ್ಲಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಗುಡ್ಡಪ್ಪ ಗೌಡ ಅಡ್ಯತಕಂಡ, ಲಿಂಗಪ್ಪ ಗೌಡ ನೀರ್ಕಜೆ, ಸತ್ಯಪ್ರಭಾ,‌‌ ಸಾವಿತ್ರಿ ಕೆ, ನಾರಾಯಣ ಗೌಡ ಅಡ್ಯತಕಂಡ, ರಮೇಶ್ ಕಾನಾವು, ಪೂವಪ್ಪ ನಾಯ್ಕ‌ ಕೊಂಡೆಪ್ಪಾಡಿ, ರವೀಂದ್ರ ಅನವುಗುಂಡಿ, ರವಿ ಕುಂಡಡ್ಕ, ‌ರಕ್ಷಿತ್ ಗೌಡ ಒರುಂಕು, ವೆಂಕಟರಮಣ ‌ಕುಂಡಡ್ಕ ಮೊದಲಾದವರಿದ್ದರು.

Advertisement

ಸಮಿತಿ ಗೌರವಾಧ್ಯಕ್ಷ‌ ಜಗನ್ನಾಥ ಪೂಜಾರಿ ಮುಕ್ಕೂರು ಪ್ರಸ್ತಾವನೆಗೈದರು. ಕೋಶಾಧಿಕಾರಿ ರಾಮಚಂದ್ರ ಚೆನ್ನಾವರ ಲೆಕ್ಕಪತ್ರ ವರದಿ‌ ಮಂಡಿಸಿದರು. ‌ಕಿರಣ್ ಪ್ರಸಾದ್ ಕೆ‌‌ ಸ್ವಾಗತಿಸಿದರು. ಗಣೇಶೋತ್ಸವ ಸಮಿತಿ ‌ಅಧ್ಯಕ್ಷ ಪ್ರಸಾದ್ ಎನ್.ಕೆ.ವಂದಿಸಿದರು. ‌ಶಿಕ್ಷಕ‌ ಶಶಿಕುಮಾರ್ ‌ಬಿ.ಎನ್. ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?

ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…

1 day ago

ಮೊಗ್ರದಲ್ಲಿ ಕಾಲಾವಧಿ ನೇಮ

https://youtu.be/YgcAfgYUbGQ?si=vp1TmN5dQYAkVPBy

2 days ago

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

4 days ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

4 days ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

4 days ago