ಪಿಂಕ್ ಬಾಲ್ ಟೆಸ್ಟ್: ಬಾಂಗ್ಲಾ ವಿರುದ್ಧ ಭಾರತಕ್ಕೆ ಮುನ್ನಡೆ

November 23, 2019
8:50 AM

ಕೋಲ್ಕತ್ತ: ಟೆಸ್ಟ್‌ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ 106 ರನ್‌ಗಳಿಗೆ ಆಲೌಟ್‌ ಆಗಿದೆ. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿರುವ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ, ಮೊದಲ ದಿನದಾಟದ ಅಂತ್ಯಕ್ಕೆ 46 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 174 ರನ್‌ ಕಲೆ ಹಾಕಿದೆ. ಇದರೊಂದಿಗೆ 68 ರನ್‌ಗಳ ಮುನ್ನಡೆ ಸಾಧಿಸಿದ್ದು, ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿ ಬೃಹತ್‌ ಮೊತ್ತ ಕಲೆಹಾಕುವತ್ತ ಮುನ್ನಡೆದಿದೆ.

Advertisement
Advertisement

ಟೆಸ್ಟ್‌ ಪಂದ್ಯವನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಹಗಲು ರಾತ್ರಿ ಆಯೋಜಿಸಲಾಗುತ್ತಿದೆ. ಹಾಗಾಗಿ ಕ್ರಿಕೆಟ್‌ ಜಗತ್ತನ್ನು ತನ್ನತ್ತ ಸೆಳೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದ ಪ್ರವಾಸಿ ಪಡೆ, ಅಲ್ಪಮೊತ್ತಕ್ಕೆ ಕುಸಿದಿತ್ತು. ತ್ರಿವಳಿ ವೇಗಿಗಳಾದ ಇಶಾಂತ್‌ ಶರ್ಮಾ (5), ಉಮೇಶ್‌ ಯಾದವ್‌ (3) ಹಾಗೂ ಮೊಹಮದ್‌ ಶಮಿ ಅತ್ಯುತ್ತಮವಾಗಿ ಬೌಲಿಂಗ್‌ ದಾಳಿ ಸಂಘಟಿಸಿ, ಪ್ರವಾಸಿ ಬಳಗದ ಎಲ್ಲ ವಿಕೆಟ್‌ಗಳನ್ನೂ ಕಬಳಿಸಿದ್ದರು.

Advertisement

ಮೊತ್ತ ಹಿಂಬಾಲಿಸಿದ ಭಾರತಕ್ಕೂ ಆರಂಭಿಕ ಆಘಾತ ಎದುರಾಯಿತು. ಕನ್ನಡಿಗ ಮಯಾಂಕ್‌ ಅಗರವಾಲ್‌ (14) ಹಾಗೂ ರೋಹಿತ್‌ ಶರ್ಮಾ (21) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲವಾದರು. ಮೂರನೇ ವಿಕೆಟ್‌ಗೆ ಟೆಸ್ಟ್‌ ಪರಿಣಿತ ಚೇತೇಶ್ವರ ಪೂಜಾರ (55) ಹಾಗೂ ನಾಯಕ ವಿರಾಟ್‌ ಕೊಹ್ಲಿ 94 ರನ್‌ಗಳ ಜೊತೆಯಾಟವಾಡಿದರು.

ಸದ್ಯ ಉಪನಾಯಕ ಅಜಿಂಕ್ಯ ರಹಾನೆ ಹಾಗೂ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ. 93 ಎಸೆತಗಳಲ್ಲಿ 8 ಬೌಂಡರಿ ಸಹಿತ 59 ರನ್‌ ಕಲೆಹಾಕಿರುವ ಕೊಹ್ಲಿ ತಾಳ್ಮೆಯ ಆಟ ಮುಂದುವರಿಸಿದ್ದಾರ. 22 ಎಸೆತಗಳಲ್ಲಿ 23 ರನ್‌ ಗಳಿಸಿರುವ ರಹಾನೆ, ಕೊಹ್ಲಿಗೆ ತಕ್ಕ ಸಾಥ್‌ ನೀಡುತ್ತಿದ್ದಾರೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕರಾಗಿ ವೇಗವಾಗಿ ಐದು ಸಾವಿರ ರನ್‌ ಪೂರೈಸಿದ ಆಟಗಾರ ಎಂಬ ಶ್ರೇಯಕ್ಕೆ ಭಾಜನರಾದರು. ನಾಯಕರಾಗಿ ಇದುವರೆಗೆ 53 ಪಂದ್ಯಗಳಲ್ಲಿ ತಂಡ ಮುನ್ನಡೆಸಿರುವ ಅವರು, 86 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಈ ದಾಖಲೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಹೆಸರಲ್ಲಿ ಈವರೆಗೆ ಇತ್ತು. ಪಾಂಟಿಂಗ್‌ 97ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗೋವಿನ ಸಗಣಿಯಿಂದ ಗಣೇಶ ಮೂರ್ತಿ | ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಆದ್ಯತೆ ನೀಡಿದ ರೈತ|
September 7, 2024
10:59 PM
by: ದ ರೂರಲ್ ಮಿರರ್.ಕಾಂ
ಗಣೇಶೋತ್ಸವ | ಮೈಸೂರಿನಲ್ಲಿ ಗಮನ ಸೆಳೆದ ವಿಶೇಷ ಗಣಪ | ವಿವಿಧ ಪ್ರತಿಮೆಗಳು |
September 7, 2024
10:38 PM
by: ದ ರೂರಲ್ ಮಿರರ್.ಕಾಂ
ಗಣೇಶೋತ್ಸವ | ದೇವರ ಪ್ರಸಾದಕ್ಕೆ FSSAI ಪರವಾನಗಿ ಕಡ್ಡಾಯ | ಖಂಡನೆ-ಸಾರ್ವಜನಿಕರಿಂದ ಅಸಮಾಧಾನ |
September 7, 2024
10:26 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-09-2024 | ರಾಜ್ಯದ ಅಲ್ಲಲ್ಲಿ ಸಾಮಾನ್ಯ ಮಳೆ | ಸೆ.13 ರಿಂದ ಕರಾವಳಿ ಜಿಲ್ಲೆಯಲ್ಲೂ ಮಳೆ ಕಡಿಮೆ ಸಾಧ್ಯತೆ |
September 7, 2024
2:22 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror