ಪುತ್ತೂರು: ಹಲಸು ಸಾರ ಮೇಳ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇಂದು (ಜೂ.16 ) ಸಂಜೆ ಸಮಾಪನಗೊಳ್ಳಲಿದೆ. ಮೇಳದಲ್ಲಿ 30 ಕ್ಕೂ ಅಧಿಕ ಹಲಸಿನ ಉತ್ಪನ್ನಗಳದ್ದೇ ಮಳಿಗೆಗಳು ಇವೆ. ಹಲಸು ಕೇಸರಿಬಾತ್ , ಹಲಸಿನ ವಿವಿಧ ಖಾದ್ಯಗಳು ಗಮನಸೆಳೆಯುತ್ತಿವೆ.
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹಲಸು ಸ್ನೇಹ ಸಂಗಮ ಹಾಗೂ ಐಐಎಚ್‍ಆರ್ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಪುತ್ತೂರು ಜೇಸಿಐ ಮನತ್ತು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹಲಸು ಸಾರ ಮೇಳ ನಡೆಯುತ್ತಿದೆ. ನಿನ್ನೆ (ಜೂ.15 ) ಉದ್ಘಾಟನೆಗೊಂಡ ಹಲಸು ಸಾರ ಮೇಳದಲ್ಲಿ ಹಲಸಿನ ಕಾಯಿ ಹಾಗೂ ಹಣ್ಣಿನ ದೋಸೆ, ಹಲಸಿನ ಬೀಜದ ಹೊಳಿಗೆ, ಹಲಸಿನ ಹಣ್ಣಿನ ಹಲ್ವ, ಹಲಸಿನ ಹಪ್ಪಳ ಚಾಟ್, ಗುಜ್ಜೆ ಮಂಚೂರಿ, ಕಬಾಬ್, ಹಲಸು ರೋಸ್ಟ್ , ಪಲಾವ್, ಪೋಡಿ, ಹಲಸಿನ ಬೀಜದ ಅಂಬೊಡೆ, ಹಲಸಿನಕಾಯಿ ಅಂಬೊಡೆ, ಹಲಸಿನಬೀಜದ ಜಾಮೂನ್ , ಹಲಸಿನಬೀಜದ ಬಿಸ್ಕೆಟ್ , ಇನ್ಟಂಟ್ ರಸಂ ಪೌಡರ್, ಹಲಸಿನಹಣ್ಣಿನ ಕೇಸರಿಬಾತ್ , ಕಲರ್ ರಹಿತ ಹಲಸಿನಹಪ್ಪಳ, ತೆಂಗಿನ ಎಣ್ಣೆಯಲ್ಲಿ ಕರಿದ ಹಲಸಿನ ಚಿಪ್ಸ್,
ಹಲಸಿನ ಬೀಜದ ಬಿಸ್ಕೆಟ್ , ಉಪ್ಪುಸೊಳೆ ವಡೆ ಹಲಸಿನ ಐಸ್ ಕ್ರೀಂ , ಕ್ಯಾಂಡಿ, ಹಲಸಿನ ಬೀಜದ ಪತ್ರೊಡೆ, ಪಾಯಸ, ಗಟ್ಟಿ, ಕಡುಬು, ಹಲಸಿನ ಬೀಜದ ಬರ್ಫಿ, ಹಲಸಿನ ಹಲ್ವಾ ಮೇಳದಲ್ಲಿದೆ. ಮೇಳವು ಇಂದು ಸಂಜೆ ಸಮಾಪನಗೊಳ್ಳಲಿದೆ.