ಪುತ್ತೂರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ : ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

July 3, 2019
5:57 PM

ಪುತ್ತೂರು: ಪುತ್ತೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ನಡೆಸಿದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ  ವಿರುದ್ಧ ಪ್ರಕರಣ ದಾಖಲಾಗಿದೆ.  ಪುತ್ತೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಈ ಕೃತ್ಯ ನಡೆಸಿದ್ದಾರೆ.

Advertisement
Advertisement

ಮಾರ್ಚ್ ತಿಂಗಳ ಕೊನೆಯ ವಾರ ಮದ್ಯಾಹ್ನ 3.00 ಗಂಟೆಗೆ ವಿದ್ಯಾರ್ಥಿನಿಯೊಬ್ಬಳ ಜೊತೆ ಕಾಲೇಜಿನ ಸುನಿಲ್ ಎಂಬಾತನು  ಮಾತನಾಡಲಿಕ್ಕಿದೆ ಎಂದು ಕಾರಿನಲ್ಲಿ ಕುಳ್ಳಿರಿಸಿ, ಪ್ರಜ್ವಲ್, ಪ್ರಕೃತ್ ಎಂಬವರನ್ನು ಕೂಡಿಕೊಂಡು ಕಾರಿನಲ್ಲಿ ಚಾಲಕನೊಂದಿಗೆ ಜೊತೆಯಾಗಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ  4 ರಿಂದ 5 ಜನ ಆರೋಪಿಗಳು  ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುತ್ತಾರೆ ಹಾಗೂ ಈ ವಿಚಾರವನ್ನು ಮುಂದಕ್ಕೆ ಯಾರಲ್ಲಿಯೂ ಹೇಳದಂತೆ ಜೀವ ಬೆದರಿಕೆ ಒಡ್ಡಿರುತ್ತಾರೆ ಮತ್ತು ಈ ಬಗ್ಗೆ ಬೇರೆಯವರಿಗೆ ತಿಳಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಪಡಿಸುವುದಾಗಿ ಬೆದರಿಸಿರುತ್ತಾರೆ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಈ ಬಗ್ಗೆ  ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಜಿಲ್ಲಾ ಪೊಲೀಸ್ ಅಧೀಕ್ಷಕರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದು,  ಆರೋಪಿಗಳನ್ನು ವಶಪಡಿಸುವಲ್ಲಿ ತಂಡಗಳು ಯಶಸ್ವಿಯಾಗಿರುತ್ತದೆ.

ಆರೋಪಿಗಳು

ಬಜತ್ತೂರು ಗ್ರಾಮದ  ಗಾಣದಮೂಲೆ ಮನೆಯ ರಾಧಾಕೃಷ್ಣ ಎಂಬವರ ಪುತ್ರ ಗುರುನಂದನ್ (19),

ಪೆರ್ನೆ ಗ್ರಾಮದ ರಾಜಶ್ರೀ ಕೃಪದ ನಾಗೇಶ್ ನಾಯ್ಕ ಅವರ ಪುತ್ರ ಪ್ರಜ್ವಲ್ (19) ,

ಪೆರ್ನೆ ಗ್ರಾಮದ ಕಡಂಬು ಮನೆ ಸದಾಶಿವ ಅವರ ಪುತ್ರ ಕಿಶನ್(19) , 

ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಪಿಲಿಗುಂಡ ಮನೆಯ ಕಾಂತಪ್ಪ ಗೌಡರ ಪುತ್ರ ಸುನಿಲ್ (19) ,

ಬರಿಮಾರು ಗ್ರಾಮದ ಬಲ್ಯ ಮನೆ ಸುಬ್ಬಣ್ಣ ಶೆಟ್ಟಿ ಅವರ ಪುತ್ರ ಪ್ರಖ್ಯಾತ್(19),

 

 

 

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |
March 14, 2025
6:51 AM
by: The Rural Mirror ಸುದ್ದಿಜಾಲ
ಸೈಬರ್ ಅಪರಾಧ ತಡೆಗೆ ಪೊಲೀಸ್ ಇಲಾಖೆಯಿಂದ ನೂತನ ತಂತ್ರಜ್ಞಾನ ಬಳಕೆ
December 9, 2024
7:15 AM
by: The Rural Mirror ಸುದ್ದಿಜಾಲ
ಹೆಚ್ಚುತ್ತಿರುವ ಆನ್‌ಲೈನ್ ವಂಚನೆ ಪ್ರಕರಣಗಳು | ಸಾರ್ವಜನಿಕರ ಜಾಗೃತಿಗಾಗಿ ಅರಿವು ಕಾರ್ಯಕ್ರಮ
November 15, 2024
10:56 PM
by: The Rural Mirror ಸುದ್ದಿಜಾಲ
ನಕಲಿ ದಾಖಲೆ ಕೊಟ್ಟು ಪಡಿತರ ಚೀಟಿ ಮಾಡಿಸಿದರೆ ಜೋಕೆ : ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷ ರೇಷನ್ ಕಾರ್ಡ್ ರದ್ದು : ಕಾರಣ ಏನು..?
August 2, 2024
2:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror