ಪುತ್ತೂರು: ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿ ಮತ್ತೆ 8 ಜನರನ್ನು ಬಂಧಿಸಲಾಗಿದೆ.
ಈ ಬಗ್ಗೆ ಪೊಲೀಸರು ನಡೆಸಿದ ತನಿಖೆಯ ವರದಿ ಹೀಗಿದೆ, ಪುತ್ತೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯಾದ ಪ್ರಖ್ಯಾತ ಎಂಬಾತನು ತಾನು ತನ್ನ ಸ್ನೇಹಿತರೊಂದಿಗೆ ಸೇರಿ ನಡೆಸಿರುವ ಸಾಮೂಹಿಕ ಅತ್ಯಾಚಾರದ ವಿಡಿಯೋವನ್ನು ತನ್ನ ಮೊಬೈಲ್ ನ ಒಂದು ಅ್ಯಪ್ ನಲ್ಲಿ ಸ್ಟೇಟಸ್ ಹಾಕಿ ಕೊಂಡಿದ್ದು ಈ ವಿಡಿಯೋವನ್ನು ಅದೇ ಕಾಲೇಜಿನ ಮೋಹಿತ್ ಎಂಬಾತನು ತನ್ನ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡಿರುತ್ತಾನೆ. ಕಾಲೇಜಿನ ವಿದ್ಯಾರ್ಥಿಗಳ ಚುನಾವಣೆ ಸಮಯ ಗುಂಪು-ಗುಂಪುಗಳಾಗಿ ವಿದ್ಯಾರ್ಥಿಗಳು ವೈಷಮ್ಯ ಬೆಳೆಸಿಕೊಂಡಿರುತ್ತಾರೆ. ಒಂದು ಗುಂಪಿನಲ್ಲಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಕೆಲವರ ತೇಜೋವಧೆ ಮಾಡುವ ಉದ್ದೇಶದಿಂದ ಶ್ರೇಯಾಂಸ್ ಎಸ್ ಎಂಬಾತನು ತನಗೆ ಬೇರೆಯವರ ಮೂಲಕ ದೊರೆತ ಈ ವಿಡಿಯೋವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಮಾಡಿರುವುದಾಗಿದೆ. ಈ ಪ್ರಕರಣದಲ್ಲಿ ವಿಡಿಯೋ ವನ್ನು ಸಾರ್ವಜನಿಕವಾಗಿ ಪ್ರಸಾರ ಪಡಿಸಿದ ಆರೋಪದಲ್ಲಿ ಮತ್ತೆ 8 ಜನರನ್ನು ಬಂಧಿಸಲಾಗಿದೆ.
ಮತ್ತೆ ಬಂಧಿಸಿದ ಆರೋಪಿಗಳು ಮುರಳೀಧರ, ಚಂದ್ರಶೇಖರ ಮಯ್ಯ, ಶ್ರೇಯಾಂಸ್, ಪೂವಪ್ಪ ಕೆ, ಪವನ್ ಕುಮಾರ್ ಡಿ, ಮೋಹಿತ್ ಪಿ ಜಿ, ಧ್ಯಾನ್ ಎ ಎನ್, ಅದ್ವಿತ್ ಕುಮಾರ್ ನಾಯ್ಕ್ ಎಂಬವರುಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…