ಪುತ್ತೂರು:ಶಾಲೆಗೆ ಹೋಗುವ ಸುಮಾರು 15 ವರ್ಷದ ಪ್ರಾಯದ ವಿದ್ಯಾರ್ಥಿನಿಯ ಅತ್ಯಾಚಾರ ನಡೆಸಿದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಗ್ರಾಮಾಂತರ ಪ್ರದೇಶದ ಪರನೀರು ಎಂಬಲ್ಲಿ ಬೆಳಗ್ಗೆ ಶಾಲಾ ಬಾಲಕಿ ಶಾಲೆಗೆ ತೆರಳುವ ವೇಳೆ ಆರೋಪಿ ಅಜಿತ್ ಎಂಬಾತ ತಾಯಿ ಸುಸ್ತಾಗಿ ಗುಡ್ಡೆಯಲ್ಲಿ ಬಿದ್ದಿದ್ದಾರೆ ಎಂದು ಹೇಳಿ ಬಾಲಕಿಯನ್ನು ಆರೋಪಿಯು ಕೈ ಹಿಡಿದು ಎಳೆದುಕೊಂಡು ಹೋಗಿ ಬಾಯಿಗೆ ಕೈಯನ್ನು ಅಡ್ಡ ಹಿಡಿದು ಎದೆಯ ಭಾಗಕ್ಕೆ ಕೈ ಹಾಕಿದಾಗ ನೊಂದ ಬಾಲಕಿಯು ಪ್ರಜ್ಞೆ ತಪ್ಪಿ ಬಿದ್ದಿದ್ದು ಬಳಿಕ ಸ್ವಲ್ಪ ಹೊತ್ತು ಕಳೆದು ಎಚ್ಚರವಾದಾಗ ಧರಿಸಿದ್ದ ಸಮವಸ್ತ್ರ ಅಸ್ತವ್ಯಸ್ತವಾಗಿ ಬಿದ್ದಿತ್ತು ನಂತರ ಬಾಲಕಿಯು ಮನೆಗೆ ಹೋಗಿದ್ದಳು. ತಕ್ಷಣವೇ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ ಎಂದು ದೂರು ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಜಿತ್ ನನ್ನು ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ.

Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel