ಪುತ್ತೂರು: ಜೇಸಿಐ ಪುತ್ತೂರು – ತರಬೇತಿ ವಿಭಾಗ ಮತ್ತು ಸರಕಾರಿ ಮಹಿಳಾ ಪದವಿ ಕಾಲೇಜು ಪುತ್ತೂರು ಸಹಭಾಗಿತ್ವದಲ್ಲಿ ಫೆಬ್ರವರಿ 15 ರಿಂದ ಮಾರ್ಚ್ 6 ರವರಿಗೆ, ಕಾಲೇಜಿನ ಅಂತಿಮ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಾಗಾರ ಆಯೋಜಿಸಲಾಯಿತು.
ಜೇಸಿಐ ಪುತ್ತೂರು ಹಾಗೂ ಜೇಸಿಐ ವಲಯ 15ರ ಹತ್ತು ತರಬೇತುದಾರರು, 15 ದಿನ, 30 ತರಬೇತಿ ನಡೆಸಿಕೊಟ್ಟರು. ಸುಮಾರು 220 ವಿದ್ಯಾರ್ಥಿನಿಯರು ತರಬೇತಿಯ ಪ್ರಯೋಜನ ಪಡೆದುಕೊಂಡರು. ಕಾರ್ಯಾಗಾರದ ಸಮಾರೋಪ ಸಮಾರಂಭ ಮತ್ತು ಪ್ರಮಾಣಪತ್ರ ವಿತರಣೆ ಮಾರ್ಚ್ 6 ರಂದು ರೋಟರಿ ಮನಿಷಾ ಹಾಲ್ ನಲ್ಲಿ ಮದ್ಯಾಹ್ನ 3 ಗಂಟೆಯಿಂದ ನಡೆಯಿತು. ಪುತ್ತೂರು ತಾಲೂಕು ಅಸಿಸ್ಟೆಂಟ್ ಕಮಿಷನರ್ ಡಾ. ಯತೀಶ್ ಉಲ್ಲಾಳ್ ಅವರು ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು, ಭಾರತೀಯ ರೈಲ್ವೆ ಯಲ್ಲಿ ಸದ್ಯ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ಶ್ರೀಮಾ ಪ್ರಿಯದರ್ಶಿನಿ ಹಾಗೂ ಸಂತ ಫಿಲೋಮಿನಾ ಕಾಲೇಜ್ ನ ಕನ್ನಡ ವಿಭಾಗ ಮುಖ್ಯಸ್ಥರಾದ ಜೇಸಿಐ ಪುತ್ತೂರು ಪೂರ್ವಧ್ಯಾಕ್ಷ ವಿಜಯ್ ಕುಮಾರ್ ಮೊಳೆಯಾರ್ ಅವರು ಆಹ್ವಾನಿತ ಅತಿಥಿಗಳಾಗಿ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದರು.
ಇಡೀ ಕಾರ್ಯಾಗಾರವನ್ನು ಜೇಸಿಐ ಪುತ್ತೂರು ಅಧ್ಯಕ್ಷ ವೇಣುಗೋಪಾಲ್, ಕಾರ್ಯಕ್ರಮ ನಿರ್ದೇಶಕರಾದ ರೇಷ್ಮಾ ಶೆಟ್ಟಿ, ಗೌರವ್ ಜತೆ ರಘು ಶೆಟ್ಟಿ ಮತ್ತು ಜೇಸಿಐ ಕಾರ್ಯದರ್ಶಿ ಪ್ರಮಿತಾ ಸುಧಾರಣೆ ಮಾಡಿದರು. ಜೇಸಿಐ ನ ಸುಭಾಷ್ ಬಂಗೇರ, ಕೃಷ್ಣಮೋಹ ನ್, ಪಶುಪತಿ ಶರ್ಮ, ದಾಮೋದರ ಪಾಟಾಳಿ, ಲತಾ ಯತೀಶ್, ಅಶ್ವಿನಿ ಕೃಷ್ಣ, ಶಾಮ್ ಮೂರ್ತಿ, ಉಮಾ ಪ್ರಸನ್ನ, ಅನೀಶ್, ನವೀನ್ ಕೊಯ್ಲ ತರಬೇತಿ ನಡೆಸಿ ಕೊಟ್ಟರು.
ಸಮಾರೋಪ ಕಾರ್ಯಕ್ರಮದಲ್ಲಿ ಜೇಸಿಐ ಪುತ್ತೂರು ತರಬೇತಿ ವಿಭಾಗದ ಶಶಿರಾಜ್, ನಿಕಟಪೂರ್ವ ಅಧ್ಯಕ್ಷ ಗೌತಮ್ ರೈ, ಪ್ರಜ್ವಲ್ ರೈ, ಸ್ವಾತಿ ಜೆ ರೈ, ಮೋಹನ್, ರುಕ್ಮಯ ಸಹಕರಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…