ಪುತ್ತೂರು: ಸೊಳ್ಳೆಗಳಿಂದ ಹರಡುತ್ತಿರುವ ಡೆಂಘೆ ಸಹಿತ ವಿವಿಧ ಸಾಂಕ್ರಾಮಿಕ ರೋಗಗಳ ಬಗ್ಗೆ ರಕ್ತ ಪರೀಕ್ಷೆಯನ್ನು ನಡೆಸಲು ಅನುಕೂಲವಾಗುಂತೆ ಪುತ್ತೂರು ಸರಕಾ ರಿ ಆಸ್ಪತ್ರೆಯಲ್ಲಿ `ಕಾರ್ಡ್‍ಟೆಸ್ಟ್’ ವ್ಯವಸ್ಥೆಯನ್ನು ಆರಂಭಿಸುವಂತೆ ಶಾಸಕ ಸಂಜೀವ ಮಠಂದೂರು ಅವರು ರಾಜ್ಯ ಆರೋಗ್ಯ ಇಲಾಖೆಯ ಕಮೀಷನರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಡೆಂಘೆ ಜ್ವರದ ಕುರಿತ ಆರಂಭಿರ ರಕ್ತ ಪರೀಕ್ಷೆಯಾದ ಕಾರ್ಡ್‍ಟೆಸ್ಟ್ ವ್ಯವಸ್ಥೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಕಾರಣ ಈ ಪರೀಕ್ಷೆಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸಬೇಕಾಗಿದೆ. ಇದಕ್ಕಾಗಿ ರೂ. 680 ಖರ್ಚಾಗಲಿದ್ದು ಇದರಿಂದ ಬಡ ರೋಗಿಗಳಿಗೆ ಆರ್ಥಿಕ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾರ್ಡ್‍ಟೆಸ್ಟ್ ಪರೀಕ್ಷೆಗೆ ವ್ಯವಸ್ಥೆಗೊಳಿಸುವಂತೆ ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel