ಪುತ್ತೂರು ಹಣ್ಣು ಮೇಳ-2020 ಪ್ರಾತ್ಯಕ್ಷಿಕೆಗಳ ತಯಾರಿ ಉದ್ಘಾಟನೆ

March 7, 2020
11:43 PM

ಪುತ್ತೂರು:ಕರಾವಳಿಯಲ್ಲಿ ಆಹಾರ ಬೆಳೆಯತ್ತ ಗಮನಹರಿಸಬೇಕಾದ ಅಗತ್ಯವಿದೆ. ತರಕಾರಿ ಹಾಗೂ ಹಣ್ಣುಗಳ‌ ಸ್ವಾವಲಂಬನೆ ಬೇಕಿದೆ. ಈ ನೆಲೆಯಲ್ಲಿ ಕೃಷಿಕರನ್ನು ಜಾಗೃತಿಗೊಳಿಸುವ ಕಾರ್ಯಬೇಕಿದೆ. ಇದರ ಜೊತೆಗೆ ಮಾರುಕಟ್ಟೆಯ ಕಡೆಗೂ‌ ಗಮನಹರಿಸಬೇಕಾದ ಅಗತ್ಯವಿದೆ ಎಂದು ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೊಂಕೋಡಿ ಹೇಳಿದರು.

Advertisement
Advertisement
Advertisement

ಅವರು ಶನಿವಾರದಂದು ಪುತ್ತೂರು ಸುದಾನ ವಸತಿಯುತ ಶಾಲಾ ವಠಾರದಲ್ಲಿ ಕರ್ನಾಟಕ ಸರಕಾರ, ಐ ಐ ಎಚ್ ಆರ್, ತೋಟಗಾರಿಕಾ ಇಲಾಖೆ, ನವತೇಜ‌ಟ್ರಸ್ಟ್, ಪುತ್ತೂರು ಜೇಸಿಐ ಹಾಗೂ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಮೇ 23 ರಿಂದ 25 ರವರೆಗೆ ನಡೆಯುವ ಹಣ್ಣು ಮೇಳದಲ್ಲಿ ಕರಾವಳಿಯಲ್ಲಿ ಬೆಳೆಯುವ ವಿವಿಧ ತರಕಾರಿ ಬೆಳೆ ಹಾಗೂ ಹೂವು ಬೆಳೆಯ ಪ್ರಾತ್ಯಕ್ಷಿಕೆಗೆ ತರಕಾರಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

Advertisement

ಅತಿಥಿಯಾಗಿದ್ದ ವಿವೇಕಾನಂದ ಕಾಲೇಜು ನಿವೃತ್ತ ಪ್ರಾಂಶುಪಾಲ, ಸುದಾನ ಶಾಲಾ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ‌ ಹಿಂದೆ ಗ್ರಾಮ‌ಸ್ವಾವಲಂಬೆಯಲ್ಲಿ ಇತ್ತು. ‌ತರಕಾರಿಯಿಂದ ತೊಡಗಿ ಭತ್ತದವರೆಗೆ ಎಲ್ಲವನ್ನೂ ಕೃಷಿಕರು ಬೆಳೆಯುತ್ತಿದ್ದರು, ಇದರಿಂದ ಆರೋಗ್ಯವೂ ಉತ್ತಮವಾಗಿತ್ತು.ಈಗ ಕಾಲ ಬದಲಾಗಿದೆ, ಈಗ ಆರೋಗ್ಯವೂ ಹದಗೆಡುತ್ತಿರುವುದಕ್ಕೆ ಸ್ವಾವಲಂಬನೆಯಿಂದ ಹೊರಬಂದಿರುವುದೇ ಕಾರಣವಾಗಿದೆ. ಈ ಸಂದರ್ಭದಲ್ಲಿ ಮತ್ತೆ ತರಕಾರಿ,ಹಣ್ಣು ಬೆಳೆಯುವ ಮೂಲಕ ಸ್ವಾವಲಂಬನೆಯತ್ತ, ಆರೋಗ್ಯವಂತ ಬದುಕಿನತ್ತ ಸಾಗಬೇಕಿದೆ ಎಂದರು.

ಪ್ರಸ್ತಾವನೆಗೈದ ನವತೇಜ ಟ್ರಸ್ಟ್ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ, ಮೇ ತಿಂಗಳ ಅಂತ್ಯದಲ್ಲಿ ನಡೆಯುವ ತೋಟಗಾರಿಕಾ ಬೆಳೆಗಳ ಮೇಳಕ್ಕೆ ಸಮಸ್ತ ಜನರ ಹಾಗೂ ವಿಶೇಷವಾಗಿ ಕೃಷಿಕರ ಸಹಕಾರ ಅಗತ್ಯವಿದೆ ಎಂದರು. ಪ್ರಾತ್ಯಕ್ಷಿಕೆಯಲ್ಲಿ ಸುಮಾರು‌30 ಬಗೆಯ ತರಕಾರಿ ಬೆಳೆ , ಹೂವು ಕೃಷಿಯ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.

Advertisement

ನವತೇಜ ಟ್ರಸ್ಟ್ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಸ್ವಾಗತಿಸಿ ಪ್ರಸ್ತಾವನೆಗೈದರು. ಪುತ್ತೂರು ಹಣ್ಣುಮೇಳ ಕಾರ್ಯಕ್ರಮ ನಿರ್ದೇಶಕ ಪ್ರಜ್ವಲ್ ರೈ ವಂದಿಸಿದರು. ನವತೇಜ ಟ್ರಸ್ಟ್ ಕಾರ್ಯದರ್ಶಿ ಸುಹಾಸ್ ಮರಿಕೆ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಯ ಔಷಧೀಯ ಗುಣ | “we made” ಅಡಿಕೆಯ ಲಿಕ್ವಿಡ್‌ ಸೋಪು | ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ |
November 26, 2024
7:11 AM
by: ಮಹೇಶ್ ಪುಚ್ಚಪ್ಪಾಡಿ
ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಜಯಪ್ರಸಾದ ಆನೆಕಾರ
November 26, 2024
5:53 AM
by: ದ ರೂರಲ್ ಮಿರರ್.ಕಾಂ
ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |
November 25, 2024
8:44 PM
by: The Rural Mirror ಸುದ್ದಿಜಾಲ
ಗುಬ್ಬಚ್ಚಿ ಸಂಕುಲ ರಕ್ಷಣೆಗೆ ಪ್ರಧಾನಿ ಕರೆ | ಬೇಲೂರಿನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ
November 25, 2024
8:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror