ಪುತ್ತೂರು ಹಣ್ಣು ಮೇಳ-2020 ಲೋಗೋ ಅನಾವರಣ

March 7, 2020
11:45 PM

ಪುತ್ತೂರು: ಕೃಷಿ ಉಳಿಯಲು ಕೃಷಿಯಲ್ಲಿ ಲಾಭ ಗಳಿಕೆಯೂ ಮುಖ್ಯವಾಗುತ್ತದೆ. ಹೀಗಾಗಿ ಕೃಷಿಕರಿಗೆ ಆದಾಯ ತರುವ ಉದ್ಯಮ, ಮೌಲ್ಯವರ್ಧನೆಗಳ ಕಡೆಗೆ ಗಮನಹರಿಸಲು ಯುವಕರು ತಾಂತ್ರಿಕತೆ ಬೆಳೆಸಿ ಯುವಕರು ಕೃಷಿ ಉದ್ಯಮ ಸ್ಥಳೀಯವಾಗಿ ತೆರೆಯಬೇಕಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಶನಿವಾರದಂದು ಪುತ್ತೂರು ಸುದಾನ ವಸತಿಯುತ ಶಾಲಾ ವಠಾರದಲ್ಲಿ ಕರ್ನಾಟಕ ಸರಕಾರ, ಐಐಎಚ್‍ಆರ್, ತೋಟಗಾರಿಕಾ ಇಲಾಖೆ, ನವತೇಜಟ್ರಸ್ಟ್, ಪುತ್ತೂರು ಜೇಸಿಐ ಹಾಗೂ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಮೇ 23 ರಿಂದ 25 ರವರೆಗೆ ನಡೆಯುವ ಹಣ್ಣು ಮೇಳದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದರು. ಮಿಶ್ರ ಕೃಷಿಯ ಮೂಲಕ ಕೃಷಿಕರ ಆದಾಯ ಹೆಚ್ಚು ಮಾಡಬಹುದು. ಅಂತಹ ಮಿಶ್ರ ಕೃಷಿಗಳಲ್ಲಿ ಹಣ್ಣುಗಳು, ತರಕಾರಿಯೂ ಸೇರುತ್ತದೆ. ಹಣ್ಣುಗಳ ಮೌಲ್ಯವರ್ಧನೆ, ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇತ್ಯಾದಿಗಳು ಅಗತ್ಯವಾಗಿ ಬೇಕಿದೆ. ಈ ಕಾರಣದಿಂದ ಪ್ರೋತ್ಸಾಹ ಅಗತ್ಯವಿದೆ. ರಾಜ್ಯಮಟ್ಟದ ಇಂತಹ ಮೇಳಗಳ ಮೂಲಕ ರಾಜ್ಯದ ಕೃಷಿಕರಿಗೆ ಉತ್ತಮ ಸಂದೇಶ ಪುತ್ತೂರಿನಿಂದ ನೀಡಬೇಕಿದೆ ಎಂದರು.

ವೇದಿಕೆಯಲ್ಲಿ ಸುದಾನ ಶಾಲಾ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ನವತೇಜ ಟ್ರಸ್ಟ್ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ,ಪುತ್ತೂರು ಹಣ್ಣುಮೇಳ ಕಾರ್ಯಕ್ರಮ ನಿರ್ದೇಶಕ ಪ್ರಜ್ವಲ್ ರೈ ಉಪಸ್ಥಿತರಿದ್ದರು.

ನವತೇಜ ಟ್ರಸ್ಟ್ ನವತೇಜ ಟ್ರಸ್ಟ್ ಕಾರ್ಯದರ್ಶಿ ಸುಹಾಸ್ ಮರಿಕೆ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 11-04-2026 | ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿ… ಮುಂದೇನು?
April 11, 2026
1:52 PM
by: ಸಾಯಿಶೇಖರ್ ಕರಿಕಳ
ಜನನ-ಮರಣ ನೋಂದಣಿ 21 ದಿನಗಳೊಳಗೆ ಕಡ್ಡಾಯ ನೋಂದಣಿ – ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ
April 11, 2026
7:09 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ
April 10, 2026
3:11 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!
April 9, 2026
1:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror