ಮಡಿಕೇರಿ :ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ತಮ್ಮ ಮಗುವನ್ನು ಸರಕಾರಿ ಅಂಗನವಾಡಿಗೆ ದಾಖಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಮಕ್ಕಳಿಗೆ ಶಿಕ್ಷಣ ನೀಡುವುದನ್ನು ಕೂಡ ಪ್ರತಿಷ್ಠೆಯನ್ನಾಗಿ ಪರಿಗಣಿಸುತ್ತಿರುವ ಇಂದಿನ ಪೋಷಕರು ಮಕ್ಕಳು ಜನಿಸುತ್ತಲೇ ಇಂಗ್ಲೀಷ್ ಪದ ಪ್ರಯೋಗಗಳನ್ನು ಆರಂಭಿಸುತ್ತಾರೆ. ಬೇಬಿ ಸಿಟ್ಟಿಂಗ್, ಎಲ್‍ಕೆಜಿ, ಯುಕೆಜಿ ತರಗತಿಗಳಿಗಾಗಿ ವರ್ಷಗಟ್ಟಲೆ ಕಾದು ಸೀಟು ಗಿಟ್ಟಿಸಿಕೊಳ್ಳುವ ರಿಸ್ಕ್ ಕೂಡ ಪೋಷಕರ ಮೇಲಿದೆ. ಆದರೆ ಯಾವುದೇ ಪೈಪೋಟಿಗಳಿಲ್ಲದೆ ಸುಲಭ ಮಾರ್ಗ ತೋರುವ ಅಂಗನವಾಡಿಗಳು ಕಾಲ ಬುಡದಲ್ಲಿದ್ದರೂ ಅವುಗಳ ಬಗ್ಗೆ ಕನ್ನಡ ಪೋಷಕರಿಗೆ ತಾತ್ಸಾರವೇ ಹೆಚ್ಚು. ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳಂತೂ ತಮ್ಮ ಮಕ್ಕಳನ್ನು ಸರಕಾರಿ ಶಾಲೆಯ ಕಡೆಗೆ ತಿರುಗಿಯೂ ನೋಡದಂತೆ ಮಾಡುತ್ತಾರೆ ಎನ್ನುವ ಅಪವಾದವಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಕೊಡಗು ಎಸ್‍ಪಿ ಸುಮನ್ ಡಿ.ಪನ್ನೇಕರ್ ಅವರು ತಮ್ಮ ಎರಡೂವರೆ ವರ್ಷದ ಪುತ್ರಿ ಖುಷಿಯನ್ನು ಫೀ.ಮಾ.ಕಾರ್ಯಪ್ಪ ಕಾಲೇಜು ಸಮೀಪದ ಅಂಗನವಾಡಿಗೆ ದಾಖಲಿಸಿದ್ದಾರೆ.
ಮಕ್ಕಳಿಗೆ ಬಾಲ್ಯದಿಂದಲೇ ನೈತಿಕತೆ ಮತ್ತು ಮೌಲ್ಯಗಳ ಪಾಠ ಅಗತ್ಯವೆನ್ನುವ ಕಾರಣಕ್ಕಾಗಿ “ಖುಷಿ”ಗೆ ಅಂಗನವಾಡಿ ಮೂಲಕವೇ ಮೊದಲ ಪಾಠ ಆರಂಭಿಸುತ್ತಿರುವುದಾಗಿ ಎಸ್‍ಪಿ ತಿಳಿಸಿದ್ದಾರೆ. ಸ್ಥಳೀಯ ಅಂಗನವಾಡಿ ವ್ಯವಸ್ಥೆ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂಗನವಾಡಿಯ ಇತರ ಮಕ್ಕಳು “ಖುಷಿ”ಯೊಂದಿಗೆ ಖುಷಿ, ಖುಷಿಯಾಗಿ ದಿನ ಕಳೆಯುತ್ತಿರುವುದು ವಿಶೇಷ.
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…