ಕೈಗೆಟುಕದ ಗಗನದಲಿ
ಬೆಳ್ಳಿಯ ಬಟ್ಟಲೊಂದು ಹೊಳೆಯುತ್ತಿದೆ
ಸುತ್ತಲೂ ಪುಟಾಣಿ ಮುತ್ತುಗಳು
ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ
ಮನದಿ ನೂರಾರು ಬಯಕೆಗಳು
ಸುಂದರ ಕನವರಿಕೆಗಳು
ಪುಟಾಣಿ ಮುತ್ತುಗಳ ಅಂಗೈಯೊಳಗೆ ಹಿಡಿದು
ಬೆಳ್ಳಿಯ ಬಟ್ಟಲೊಳಗೆ ತುಂಬಿಕೊಳ್ಳಬೇಕು
ಇಲ್ಲ! ಅದು ಬೆಳ್ಳಿಯ ಬಟ್ಟಲಲ್ಲ
ಆಗಸದರಮನೆಯ ರಾಜ
ಬೆಳದಿಂಗಳ ಸೂಸುವ ಶ್ವೇತದೊಡೆಯ
ಅವನು ಪೂರ್ಣ ಚಂದಿರ
ಅವನ ಸುತ್ತಲೂ ಮುತ್ತುಗಳಿಲ್ಲ
ಚಂದಿರನ ಚಂದಕ್ಕೆ
ಮನಸೋತ ಚುಕ್ಕಿ ತಾರೆಗಳು
ಈ ನೋಟವೇ ವಿಹಂಗಮ
ಸುಂದರ ಶಶಿಯ, ಸೌಂದರ್ಯದ ಮೆರುಗಿಗೆ
ಸೋತಿದೆ ನನ್ನ ಮನ
ತಿಳಿಯಾದ ಮುಗಿಲು,ಹೊಳೆವ ಚಂದಿರ
ತಂಪನೆಯ ಗಾಳಿ,ನಾನು ಕಳೆದುಹೋಗಿದ್ದೇನೆ
ಕಾಲಕಳೆದು , ಅವನು ಮರೆಯಾದಾಗ
ಮನದಿ ಅತೀವ ಸಂಕಟ
ಮತ್ತೆ ಕಾಯುತ್ತಿರುತ್ತೇನೆ , ಸೌಂದರ್ಯದ ಗಣಿಗಾಗಿ…
ಪೂರ್ಣ ಚಂದಿರನ ಬರುವಿಕೆಗಾಗಿ..
* ಅಪೂರ್ವ ಕೊಲ್ಯ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement