ಪೆರಾಜೆ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ತಾಲೂಕು ಮಟ್ಟದ “ನೆರೆಹೊರೆ ಯುವಜನ ಸಂಸತ್ತು 2019-20” ಎಂಬ ಯೋಗ ಕಾರ್ಯಕ್ರಮವು ಪೆರಾಜೆಯ ಜ್ಯೋತಿ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು.
ನೆಹರು ಯುವ ಕೇಂದ್ರ ಮಡಿಕೇರಿ, ಚಿಗುರು ಯುವಕ ಮಂಡಲ ಪೆರಾಜೆ,ಯುವ ಕೋಟೆ ಯುವಕ ಮಂಡಲ ಪುತ್ಯ ಪೆರಾಜೆ,ಯುವಸ್ಪೂರ್ತಿ ಸಂಘ ಕರಂಟಡ್ಕ,
ಅಮಚೂರು ಯುವಕ ಮಂಡಲ ಪೆರಾಜೆ, ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ನೆಹರು ಯುವ ಕೇಂದ್ರ ಮಡಿಕೇರಿ ಇದರ ಲೆಕ್ಕಾಧಿಕಾರಿಗಳಾದ ಮಹೇಶ್ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ಜ್ಯೋತಿ ಪ್ರೌಢ ಶಾಲೆ ಪೆರಾಜೆ ಇದರ ಮುಖ್ಯ ಶಿಕ್ಷಕರಾದ ದೊಡ್ಡಣ್ಣ ಬರಮೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಲ್ಲದೆ ತರಬೇತಿ ಹಾಗೂ ಮಾಹಿತಿ ಉಪನ್ಯಾಸ ನೀಡಲು ಯೋಗ ತರಬೇತುದಾರರಾದ ತೀರ್ಥೇಶ್ ಕೆ. ವಿ, ಸಂತೋಷ್ ಆಗಮಿಸಿದ್ದರು.
ಕಾರ್ಯಕ್ರಮವನ್ನು ಚಿಗುರು ಯುವಕಮಂಡಲದ ಅಧ್ಯಕ್ಷ ಶೀತಲ್ ಕುಂಬಳಚೇರಿ ಅವರು ಸ್ವಾಗತ ಮತ್ತು ನಿರೂಪಿಸಿ, ಚಿಗುರು ಯುವಕಮಂಡಲದ ಕ್ರೀಡಾ ಕಾರ್ಯದರ್ಶಿ ದೀಪಕ್ ಮಜಿಕೋಡಿ ವಂದಿಸಿದರು.
ಕರ್ನಾಟಕದಲ್ಲಿ ಇನ್ನೂ ಕೆಲ ದಿನಗಳು ಬಿಸಿಲು ತಾಪಮಾನ ಹೆಚ್ಚಾಗಿದ್ದು, ತುಂತುರು ಮಳೆ ಮಾತ್ರ…
ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಚಟುವಟಿಕೆ ಆರಂಭವಾಗಿದೆ. ಏಪ್ರಿಲ್ 15…
ಜನನ-ಮರಣ ಘಟನೆಗಳನ್ನು 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸೂಚನೆ.
ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಮುಂದುವರಿಯುತ್ತಿದ್ದು, ಮಳೆಯ ಚಟುವಟಿಕೆ ಕಡಿಮೆಯಾಗಿದೆ. ಏಪ್ರಿಲ್ 15…
ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…
ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…