ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರಿಗೆ ದೀರ್ಘಕಾಲದ ಚಿಕಿತ್ಸೆ ಅಗತ್ಯವಿದೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳಿಗೆ ಎಲ್ಲ ರೀತಿಯ ಅಗತ್ಯ ಪರೀಕ್ಷೆಗಳನ್ನೂ ಮಾಡಲಾಗಿದೆ. ಎಲ್ಲವೂ ನಾರ್ಮಲ್ ಆಗಿದೆ. ಅವರಿಗೆ ನ್ಯುಮೋನಿಯಾ ಹೊರತುಪಡಿಸಿ ಬೇರೆ ಯಾವುದೇ ತೊಂದರೆ ಇಲ್ಲ. ಶ್ರೀಗಳಿಗೆ ದೀರ್ಘಕಾಲದ ಚಿಕಿತ್ಸೆ ಅಗತ್ಯವಿದೆ ಎಂದರು. ಬೆಂಗಳೂರಿನ ಇಬ್ಬರು ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ದೆಹಲಿ ಆಸ್ಪತ್ರೆ ವೈದ್ಯರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಆರೋಗ್ಯ ಸಚಿವಾಲಯ ನಮ್ಮ ಸಂಪರ್ಕದಲ್ಲಿದ್ದು, ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ ಎಂದು ಅವಿನಾಶ್ ವಿವರಿಸಿದರು. ಶ್ರೀಗಳಿಗೆ ಕೆಎಂಸಿಯಲ್ಲೆ ಚಿಕಿತ್ಸೆ ಮುಂದುವರಿಯಲಿದೆ ಎಂದರು.
ಬೆಂಗಳೂರಿನ ಮಣಿಪಾಲ ಸಮೂಹ ಆಸ್ಪತ್ರೆ ತುರ್ತು ಚಿಕಿತ್ಸೆ ವಿಭಾಗ, ಶ್ವಾಸಕೋಶ ತಜ್ಞ ವೈದ್ಯರಾದ ಡಾ.ರಾಜೇಶ್ ಶೆಟ್ಟಿ, ಡಾ.ಸತ್ಯನಾರಾಯಣ ಮಾತನಾಡಿ, ಪೇಜಾವರ ಶ್ರೀಗಳಿಗೆ ನಿಧಾನವಾಗಿ ಪ್ರಜ್ಞೆ ಮರುಕಳಿಸುತ್ತಿದೆ, ವಯಸ್ಸಾಗಿದ್ದರಿಂದ ಆರೋಗ್ಯ ಸುಧಾರಣೆಗೆ ಇನ್ನಷ್ಟು ಸಮಯ ಬೇಕು. ದೇಹದ ಎಲ್ಲ ಅಂಗಾಂಗಗಳೂ ಚೆನ್ನಾಗಿವೆ. ಆದರೆ ಶ್ವಾಸಕೋಶದಲ್ಲಿ ಮಾತ್ರ ಸೋಂಕು ಇದೆ. ನಿಧಾನವಾಗಿ ಸೊಂಕು ನಿವಾರಣೆ ಆಗಬೇಕಿದೆ. ವೆಂಟಿಲೇಟರ್ ನಲ್ಲೆ ಚಿಕಿತ್ಸೆ ನಡೆಯುತ್ತಿದೆ ಎಂದರು.
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…
ಪುಣೆ ಮೂಲದ ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ಭಾರತ್…
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…
ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.…
ಪಂಚಾಯತು ವಿಧಿಸುವ ವಿವಿಧ ಕರಗಳ ಬಗ್ಗೆ ನಿಮಗೆ ಅರಿವಿದೆಯೆ? ನಿಮ್ಮ ಪಂಚಾಯತುಗಳಿಗೆ ಸರಕಾರದಿಂದ…