ಸಂಪಾಜೆ: ಪೇರಡ್ಕ ಅತ್ಯಂತ ಪವಿತ್ರ ಕ್ಷೇತ್ರ ಸರ್ವಧರ್ಮೀಯರು ಇಂದಿಗೂ ಭಕ್ತಿಯಿಂದ ಕಾಣಿಕೆಯನ್ನು ನೀಡುತ್ತಿದ್ದಾರೆ . ಪ್ರೀತಿ ಮತ್ತು ಸಹೋದರತೆಯಿಂದ ಬಾಳುತ್ತಿದ್ದಾರೆ. ಈ ಕ್ಷೇತ್ರ ಸರ್ವಧರ್ಮೀಯ ಸಂಖೇತವಾಗಿ ಉಳಿದಿದೆ ಎಂದು ಕರ್ನಾಟಕ ರಾಜ್ಯ ಜಾತ್ಯತೀತ ಜನತಾದಳ ಉಪಾಧ್ಯಕ್ಷ ಎಮ್.ಬಿ. ಸದಾಶಿವ ಹೇಳಿದರು.
ಅವರು ಪೇರಡ್ಕ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮದಲ್ಲಿ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಭಾಷಣವನ್ನು ರಾಜ್ಯ ಎಸ್ ಕೆ ಎಸ್ ಎಸ್ಎಫ್ ರಾಜ್ಯಾಧ್ಯಕ್ಷರಾದ ಮೌಲಾನಾ ಅನೀಸ್ ಕೌಸರಿಯವರು ಮಾತನಾಡಿ ನಮ್ಮ ಭಾಂದವ್ಯಗಳು ಕಲುಶಿತಗೊಂಡಿಲ್ಲ, ಆದರೆ ಈಗಿನ ಮಾಧ್ಯಮದಿಂದ ಬರುವ ಕಲುಷಿತ ವರದಿಗಳಿಂದಾಗಿ ನಮ್ಮ ಸ್ವಸ್ಥ್ಯ ಸಮಾಜ ಕೆಟ್ಟು ಹೋಗಿದೆ. ನಾವು ಸಮಾಜದಲ್ಲಿ ಮಾನವರಾಗಿ ಮನುಷ್ಯರಾಗಿ ಸೌಹಾರ್ದತೆಯಿಂದ ಬದುಕಬೇಕೆಂದರು. ಇನ್ನೋರ್ವ ಮುಖ್ಯ ಆತಿಥಿ ಸಂಪಾಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಮಾತನಾಡಿ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿಯೇ ಇಂದಿಗೂ ಈ ಪವಿತ್ರ ಕ್ಷೇತ್ರದಲ್ಲಿ ಎಲ್ಲಾ ಧರ್ಮದವರನ್ನು ಕರೆಸಿ ಸರ್ವಧರ್ಮದಂತಹ ಕಾರ್ಯಕ್ರಮವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಮಿಕ ಸಂಘದ ಮುಖಂಡ ಕೆ.ಪಿ.ಜೋನಿ ಮಾತನಾಡಿ ಸಾಮರಸ್ಯ ಬದುಕಿಗಾಗಿ ಎಲ್ಲಾ ಧರ್ಮದೊಂದಿಗೆ ಬೆರೆತು ಜೀವನ ನಡೆಸಬೇಕೆಂದರು. ರಕ್ತದಾನಿ ಪಿ.ಬಿ.ಸುಧಾಕರ ರೈ ಮಾತನಾಡಿ ನಿಜ ಜೀವನದಲ್ಲಿ ನಾವು ಒಳ್ಳೆಯ ಕೆಲಸ ಮಾಡಿದರೆ ಜನ ನಮ್ಮನ್ನು ಗುರುತಿಸುತ್ತಾರೆ. ಇಲ್ಲಿನ ವಿಖಾಯ ತಂಡದಂತಹ ತಂಡವು ಅಶಕ್ತರಿಗೆ ಸಹಾಯ ಮಾಡುತ್ತಿರುವ ಮೂಲಕ ಸಮಾಜದ ಗೌರವವನ್ನು ಪಡೆದಿದೆ ಎಂದರು. ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಚೇರ್ಮನ್ ಯಾಕುಬ್ ಮಾತನಾಡಿ ಇಲ್ಲಿನ ಉರೂಸ್ ಕಾರ್ಯಕ್ರಮದಲ್ಲಿ ಸರ್ವ ಧರ್ಮಿಯರನ್ನು ಕರೆಸಿ ಸೌಹಾರ್ದ ಕೂಟವನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಮಹಿಯ್ಯದ್ದೀನ್ ಜುಮ್ಮಾ ಮಸೀದಿ ಗೌರವಧ್ಯಕ್ಷ ರಾದ ಟಿ.ಎಮ್ ಶಹೀದ್ ತೆಕ್ಕಿಲ್ ವಹಿಸಿ ಮಾತನಾಡಿ ನಮ್ಮ ಹಿರಿಯರಾದ ತೆಕ್ಕಿಲ್ ಕುಟುಂಬ ,ಉಳುವಾರು ಕುಟುಂಬ ,ಪೇರಡ್ಕ ಕುಟುಂಬ ,ಮಹಾಬಲ ಭಟ್, ವಿ.ಪಿ.ಕೋಯಿಲೋ ಸಣ್ಣಯ್ಯ ಪಟೇಲ್, ಕುಯಿಂತೋಡು ಪಠೇಲ್ ರಂತಹ ಹಿರಿಯರು ಈ ಪ್ರದೇಶದಲ್ಲಿ ಕೃಷಿಕರಾಗಿ ಪರಸ್ಪರ ಸೌಹಾರ್ದ ಮತ್ತು ಸಾಮರಸ್ಯದಿಂದ ಜೀವನ ನಡೆಸಿದರ ಫಲವಾಗಿ ಸಂಪಾಜೆ ಗ್ರಾಮದಲ್ಲಿ ಪೇರಡ್ಕ ಪ್ರದೇಶವು ಸೌಹಾರ್ದತೆಗೆ ಹೆಸರುವಾಸಿಯಾಗಿದೆ ಎಂದರು.
ಅತಿಥಿಯಾಗಿ ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ.ಚಕ್ರಪಾಣಿ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ ವ್ಯವಸ್ಥಾಪನಾ ಅಧ್ಯಕ್ಷ ಕೇಶವ ಕೊಳಲುಮೂಲೆ, ಡಾ.ಉಮ್ಮರ್ ಬೀಜದಕಟ್ಟೆ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ .ಸಂಶುದ್ದೀನ್, ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಎಮ್ .ಮುಸ್ತಫಾ, ಎಸ್ ಕೆ ಎಸ್ ಎಸ್ ಎಫ್ ಟ್ರೆಂಡ್ ಜಿಲ್ಲಾ ನಾಯಕರಾದ ಇಕ್ಬಾಲ್ ಬಾಳಿಲ, ತೀರ್ಥ ರಾಮ ಪರ್ನೋಜಿ, ಸುಳ್ಯ ನಗರ ಪಂಚಾಯತ್ ಸದಸ್ಯ ರಾದ ಕೆ.ಎಸ್ ಉಮ್ಮರ್, ಎಸ್ ಡಿಪಿ ಐ ಸುಳ್ಯ ತಾಲ್ಲೂಕು ಅಧ್ಯಕ್ಷ ಕಲಾಂ, ಸುಳ್ಯ ಯತೀಂಖಾನ ಅಧ್ಯಕ್ಷ ಮಜೀದ್ ಜನತಾ, ಶಾಫಿ ದಾರಿಮಿ ಅಜ್ಜಾವರ, ಜನಾರ್ಧನ ಪೇರಡ್ಕ, ಜ್ಞಾನಶೀಲ ಕಲ್ಲುಗುಂಡಿ, ಸತ್ಯಜಿತ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು .
ದುವಾವನ್ನು ಸ್ಥಳೀಯ ಖತೀಬರಾದ ಅಶ್ರಫ್ ಫೈಝಿ ನೇರವೆರಿಸಿದರು. ವೇದಿಕೆಯಲ್ಲಿ ಜಮಾ ಅತ್ ಅಧ್ಯಕ್ಷ ಟಿ.ಇ.ಆರೀಫ್ ತೆಕ್ಕಿಲ್, ಝಕರಿಯಾ ದಾರಿಮಿ, ಅಲಿ ಹಾಜಿ, ಪಾಂಡಿ ಅಬ್ಬಾಸ್ ,ಬಶೀರ್ ತೆಕ್ಕಿಲ್, ಮೊದಲಾದವರು ಉಪಸ್ಥಿತರಿದ್ದರು . ಜಿ.ಕೆ.ಹಮೀದ್ ಸ್ವಾಗತಿಸಿ ಅಬ್ದುಲ್ ಖಾದರ್ ವಂದಿಸಿದರು. ಅಕ್ಬರ್ ಕರಾವಳಿ ನಿರೂಪಿಸಿದರು.