ಪೇಸ್‌ ಬುಕ್‌ ಗಲಾಟೆ ಬೀದಿಗೆ ಬಂತು | ಹಿಂಸಾಚಾರ – ಕರ್ಫ್ಯೂ | ಎಸ್‌ ಡಿ ಪಿ ಐ ಮುಖಂಡನ ಸಹಿತ 110 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು |

August 12, 2020
10:08 AM

ಬೆಂಗಳೂರು:ಪೇಸ್‌ ಬುಕ್‌ ನಲ್ಲಿ  ಅವಹೇಳನಕಾರಿ ಪೋಸ್ಟ್‌ ಹಾಕಿದ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪು ಮಂಗಳವಾರ ರಾತ್ರಿ ಗಲಭೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಯತ್ನಿಸಿದ   ಪೊಲೀಸರು ಮತ್ತು ಉದ್ರಿಕ್ತರ ನಡುವಿನ ಘರ್ಷಣೆ , ಗೊಲೀಬಾರ್‌ ಗೆ  3 ಮಂದಿ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂದಿಸಿ 110 ಮಂದಿಯನ್ನು  ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿ ನವೀನ್‌ನನ್ನು ದಸ್ತಗಿರಿ ಮಾಡಲಾಗಿದೆ. ಪೇಸ್‌ ಬುಕ್‌ ಪೋಸ್ಟ್‌ ಗೆ ಸಂಬಂಧಿಸಿ ಗಲಭೆ ನಡೆಸಿದ ಹಾಗೂ  ಬೆಂಕಿ ಹಚ್ಚಿದ, ಕಲ್ಲು ತೂರಾಟ ನಡೆಸಿದ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ಇತರೆ 110 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಮಲ್ ಪಂತ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಆರೋಪಿ ನವೀನ್‌ ಎಂಬಾತ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಧಾರ್ಮಿಕ ಅವಹೇಳನ ಮಾಡಿದ್ದಾರೆ ಎಂದು ಗಲಭೆ ಆರಂಭವಾಗಿತ್ತು. ನವೀನ್‌ ಎಂಬವರು  ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ಎನ್ನುವ  ನೆಪ ಇಟ್ಟು ಅವರ ಮನೆ ಮತ್ತು ಕಚೇರಿ ಮೇಲೆ ಉದ್ರಿಕ್ತ ಗುಂಪೊಂದು ಮಂಗಳವಾರ ರಾತ್ರಿ ದಾಳಿ ನಡೆಸಿ ಬೆಂಕಿ ಹಚ್ಚಿತ್ತು.

ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ ಆಗಮಿಸಿದ ಪೊಲೀಸರು  ಪರಿಸ್ಥಿತಿ ನಿಯಂತ್ರಣ ತರಲು ಯತ್ನಿಸಿದರು.  ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ  ಗೋಲಿಬಾರ್‌ ನಡೆಸಿದರು. ಕಿಡಿಗೇಡಿಗಳು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಹಲವಾರು ವಾಹನಗಳು ಸುಟ್ಟು ಭಸ್ಮವಾಗಿದೆ. ಕೆಲವೇ ಕೆಲವು ಸಮಯದಲ್ಲಿ ಪರಿಸ್ಥಿತಿ ಕೈ ಮೀರಿ ಹೋಯಿತು. ಹಲವಾರು ದ್ವಿಚಕ್ರ ವಾಹನಗಳು, ಹಲವಾರು ಮನೆಗಳು ಹಾನಿಗೊಳಗಾಗಿವೆ.

ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‍ಡಿಪಿಐ ಮುಖಂಡನನ್ನು ಬಂಧಿಸಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

“ಕೋಟಿ ವೃಕ್ಷ ಅಭಿಯಾನ”ದ ಪರಿಣಾಮವೇ? ವಿಜಯಪುರದಲ್ಲಿ ತಾಪಮಾನ 40°C ದಾಟದಿರುವುದು ಆಶಾದಾಯಕ: ಸಚಿವ ಎಂ.ಬಿ. ಪಾಟೀಲ್
May 16, 2026
10:28 PM
by: ಮಿರರ್‌ ಡೆಸ್ಕ್
ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಿಲ್ಲ
May 8, 2026
7:35 AM
by: ಮಿರರ್‌ ಡೆಸ್ಕ್
ವನ್ಯಜೀವಿಗಳ ಸಂತಾನ ನಿಯಂತ್ರಣಕ್ಕೆ ತಜ್ಞರ ಚರ್ಚೆ ಅಗತ್ಯ
May 7, 2026
7:30 AM
by: ಮಿರರ್‌ ಡೆಸ್ಕ್
ಕರಾವಳಿ ಭಾಗಕ್ಕೆ ಗುಣಮಟ್ಟದ ವಿದ್ಯುತ್ ಸೌಲಭ್ಯ : ಜುಲೈ 15ರೊಳಗೆ ಕಡಂದಲೆ 400 ಕೆವಿ ಉಪಕೇಂದ್ರ ಕಾಮಗಾರಿ ಪೂರ್ಣ
May 7, 2026
7:22 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror