ಪೈಂಬೆಚ್ಚಾಲು: ಎರಡು ದಿನಗಳಲ್ಲಿ ಬಹಳ ವಿಜ್ರಂಬಣೆಯಿಂದ ನಡೆಯುವ ಐದನೇ ಅಜ್ಮೀರ್ ಆಂಡ್ ನೇರ್ಚೆ ಹಾಗೂ ದ್ವಿದಿನ ಮೆಹ್ಫಿಲೇ ನಸ್ವೀಹ ಕಾರ್ಯಕ್ರಮಕ್ಕೆ, ಜಮಾಅತ್ ಅಧ್ಯಕ್ಷರಾದ ಟಿ.ಎಂ.ಅಬ್ದುಲ್ ಕಾದರ್ ರವರ ಅಧ್ಯಕ್ಷತೆಯಲ್ಲಿ, ಗೌರವಾಧ್ಯಕ್ಷರಾದ ಪಿ.ಎಂ.ಮೂಸ ಹಾಜಿಯವರು ಧ್ವಜಹಾರೋಹಣದ ಮೂಲಕ ಇಂದು ಬೆಳಿಗ್ಗೆ ಚಾಲನೆ ನೀಡಿದರು.
ಖತೀಬ್ ಉಸ್ತಾದರು ಪ್ರಾರ್ಥನೆ ನಡೆಸಿದರು. ಈ ಸಂದರ್ಭದಲ್ಲಿ ಫಾರೂಖ್ ಮದನಿ ಉಸ್ತಾದ್ ಸೆರ್ಕಳ, ಜಮಾಅತ್ ನಾಯಕರಾದ ಟಿ.ಎಂ.ಅಬ್ದುಲ್ ರಹಿಮಾನ್, ಎಂ.ಪಿ.ಇಬ್ರಾಹಿಂ, ಕೆ.ಎಚ್.ಇಬ್ರಾಹಿಂ ಮುಂತಾದವರು ಉಪಸ್ಥಿತರಿದ್ದರು. ಮಾರ್ಚ್ 3 ಹಾಗು 4 ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ಇಂದು ರಾತ್ರಿ ಪ್ರಖ್ಯಾತ ಕೆ.ಸಿ.ಎ.ಕುಟ್ಟಿ ಕೊಡುವಳ್ಳಿ ಹಾಗು ಸಂಘಡಿಗರಿಂದ ಕಥಾ ಪ್ರಸಂಗ ನಡೆಯಲಿದೆ. ಸೂಫಿವರ್ಯರಾದ ವಾಲೆಮಂಡೋವು ಉಸ್ತಾದ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಮಾ.4ರಂದು ನಡೆಯುವ ಗ್ರಾಂಡ್ ಅಜ್ಮೀರ್ ಆಂಡ್ ನೆರ್ಚೆಯಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಕೂರಿಕ್ಕುಝಿ ತಙಳ್, ಸಯ್ಯಿದ್ ಸಾಲಿಂ ಬುಖಾರಿ ತಙಳ್, ಸಯ್ಯಿದ್ ಜಿಫ್ರಿ ತಙಳ್ , ಖ್ಯಾತ ಭಾಷಣಗಾರ ಹಾಫಿಳ್ ಮಸ್ಊದ್ ಸಖಾಫಿ ಗೂಡಲ್ಲೂರು ಮೊದಲಾದ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಲ್ ಹಾಜ್ ಬಿ.ಎಂ.ಇಸ್ಮಾಯಿಲ್ ಸಖಾಫಿ ಸ್ವಾಗತಿಸಿ ಧನ್ಯವಾದವಿತ್ತರು.
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …
ಬೇಸಿಗೆಯಲ್ಲಿ ಈ ಬಾರಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್…