ಸುಳ್ಯ: ಎಸ್ಸೆಸ್ಸೆಫ್ ಅರ್ಧವಾರ್ಷಿಕ ಕೌನ್ಸಿಲ್ ಹಾಗೂ ಈ ವರ್ಷ ಪೈಂಬೆಚ್ಚಾಲಿನಿಂದ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳುತ್ತಿರುವ ಜಮಾಅತ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಇಸ್ಮಾಯಿಲ್ ಸಖಾಫಿ, ಹಾಗೂ ಕೋಶಾಧಿಕಾರಿ ಕೆ.ಎಂ.ಮುಹಮ್ಮದ್ ಹಾಜಿಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಆಸಿಫ್ ಕೆ.ಎಂ.ರವರ ಅಧ್ಯಕ್ಷತೆಯಲ್ಲಿ ಎಚ್.ಐ.ಎಂ.ಮದ್ರಸ ವಠಾರದಲ್ಲಿ ನಡೆಯಿತು.
ಸದರ್ ಉಸ್ತಾದ್ ಇಸ್ಮಾಯಿಲ್ ಸಖಾಫಿ ಉಸ್ತಾದರ ಪ್ರಾರ್ಥನೆಯೊಂದಿಗೆ ಚಾಲನೆಗೊಂಡ, ಸಮಾರಂಭದ ಉದ್ಘಾಟನೆಯನ್ನು ಖತಿಬ್ ಉಸ್ತಾದ್ ನಾಸಿರ್ ಸುಖೈಫಿ ಯವರು ನಿರ್ವಹಿಸಿದರು. ಅಡ್ವಕೇಟ್ ಮೂಸ ಪಿ.ಎಂ. ಶುಭಹಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ ವೈಎಸ್ ನಾಯಕರಾದ ಪಿ.ಬಿ.ಮೂಸ ಹಾಜಿ, ಪಿ.ಎಚ್.ಅಬ್ಬಾಸ್, ಪಿ.ಎಂ.ರಫೀಖ್, ಟಿ.ಎಂ.ಸೂಫಿ ಮೊದಲಾದವರು ಉಪಸ್ಥಿತರಿದ್ದರು.
ಸುಳ್ಯ ಸೆಕ್ಟರ್ ನಾಯಕರಾದ ಸ್ವಾದಿಖ್ ಪಿ.ಜಿ., ಬಶೀರ್ ಕಲ್ಲುಮುಟ್ಲು, ಮಾಲಿಕ್ ಕೊಯಂಗಿ ವೀಕ್ಷಕರಾಗಿ ಆಗಮಿಸಿದರು.
ಪಿ.ಎಚ್.ಸಿದ್ದೀಖ್ ಹಿಮಮಿ ಸಖಾಫಿ ಸ್ವಾಗತಿಸಿ, ಟಿಎಎಚ್ಚ್ ಸಅದಿ ಧನ್ಯವಾದವಿತ್ತರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel