ಪೈಂಬೆಚ್ಚಾಲು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್, ಇದರ ಸ್ಥಾಪಕ ದಿನವಾದ ಸೆಪ್ಟೆಂಬರ್ ಹತ್ತೊಂಬತ್ತು ರಂದು, ಪೈಂಬೆಚ್ಚಾಲು ಎಸ್ಸೆಸ್ಸೆಫ್ ಶಾಖಾ ವತಿಯಿಂದ ಧ್ವಜ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಂಘಟನೆಯ ಅಧ್ಯಕ್ಷರಾದ ಕೆ.ಎಂ.ಆಸಿಫ್ ರವರ ಅಧ್ಯಕ್ಷತೆಯಲ್ಲಿ, ಖತೀಬ್ ಉಸ್ತಾದ್ ಅಬ್ದುಲ್ ನಾಸಿರ್ ಸುಖೈಫಿ ಯವರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಮಾಅತ್ ಅಧ್ಯಕ್ಷರಾದ ಟಿ.ಎಂ. ಅಬ್ದುಲ್ ಕಾದರ್ ರವರು ಧ್ವಜಾರೋಹಣ ಗೈದರು. ಎಸ್ ವೈಎಸ್ ಪ್ರಧಾನ ಕಾರ್ಯದರ್ಶಿಗಳಾದ ಬಿ.ಯಂ.ಇಸ್ಮಾಯಿಲ್ ಸಖಾಫಿ ಯವರು ಸಂದೇಶ ಭಾಷಣಮಾಡಿದರು.
ಸಮಾರಂಭದಲ್ಲಿ ಫಾರೂಖ್ ಮದನಿ ಸೆರ್ಕಳ, ಎಸ್ ವೈಎಸ್ ನಾಯಕರಾದ ಪಿ.ಬಿ. ಮೂಸ ಹಾಜಿ, ಎಂ.ಪಿ.ಇಬ್ರಾಹಿಂ, ಪಿ.ಎಂ. ಇಬ್ರಾಹಿಂ, ಸಿ.ಎಚ್.ಉಸ್ಮಾನ್, ಪಿ.ಎಂ. ರಫೀಖ್, ಟಿ.ಎಂ.ಸೂಫಿ ಎಸ್ಸೆಸ್ಸೆಫ್ ನಾಯಕರಾದ ಕೆ.ಎಂ.ಹಸೈನಾರ್, ಸಿದ್ದೀಖ್ ಸಖಾಫಿ ಹಾಗು ಎಸ್ಸೆಸ್ಸೆಫ್, ಎಸ್ ವೈಎಸ್ ಕಾರ್ಯಕರ್ತರೂ ಉಪಸ್ಥಿತರಿದ್ದರು. ಪಿ.ಎ.ಸಿದ್ದೀಖ್ ಹಿಮಮಿ ಸಖಾಫಿ ಸ್ವಾಗತಿಸಿ, ಧನ್ಯವಾದವಿತ್ತರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…
ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…
15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್…
ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…