ಪೈಂಬೆಚ್ಚಾಲು: ಸಮಸ್ತ ಎಂಬ ಪರಮೋನ್ನತ ಸುನ್ನಿ ಆದರ್ಶ ಸಂಘಟನೆಗೆ ಸುಶಕ್ತವಾದ ನಾಯಕತ್ವವನ್ನು ನೀಡಿ ಅಗಲಿದ ತಾಜುಲ್ ಉಲಮಾ, ನೂರುಲ್ ಉಲಮಾ ಆಂಡ್ ನೇರ್ಚೆ ಹಾಗು ಏಕ ದಿನ ನಸ್ವೀಹತ್ ಕಾರ್ಯಕ್ರಮವು, ಸುನ್ನಿ ಸಂಘಟನೆಗಳ ವತಿಯಿಂದ ಡಿ. 14 ರಂದು ಪೈಂಬೆಚ್ಚಾಲು ಮಸೀದಿ ವಠಾರದಲ್ಲಿ ನಡೆಯಿತು.
ಜಮಾಅತ್ ಅಧ್ಯಕ್ಷರಾದ ಟಿ.ಎಂ.ಅಬ್ದುಲ್ ಕಾದರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸಯ್ಯಿದ್ ಉಮರ್ ಜಿಫ್ರಿ ತಙಳ್ ಕೊಡಿಞ ಉದ್ಘಾಟಿಸಿದರು. ಸಿದ್ದೀಖ್ ಮಹ್ಮೂದಿ ಮಲಪ್ಪುರಂ ಮುಖ್ಯಪ್ರಭಾಷಣಗೈದರು. ಸಯ್ಯಿದ್ ಜಲಾಲುದ್ದೀನ್ ತಙಳ್ ಉಜಿರೆ ಸಮಾರೋಪ ಪ್ರಾರ್ಥನೆಗೆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಹಾಜಿ ಕೆ.ಎಂ.ಮುಸ್ತಫಾ, ತಾಲ್ಲೂಕು ಅಧ್ಯಕ್ಷರಾದ ಮುಹಮ್ಮದ್ ಕುಞಿ ಗೂನಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ವೇದಿಕೆಯಲ್ಲಿ ಖತೀಬ್ ಉಸ್ತಾದ್ ಅಬ್ದುಲ್ ನಾಸಿರ್ ಸುಖೈಫಿ, ಮುಅಲ್ಲಿಂ ಫಾರೂಖ್ ಮದನಿ ಸೆರ್ಕಳ, ಎಸ್ವೈಎಸ್ ಅಧ್ಯಕ್ಷರಾದ ಅಡ್ವಕೇಟ್ ಪಿ.ಎಂ.ಮೂಸಕುಞಿ, ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಕೋಶಾಧಿಕಾರಿ ಸಿದ್ದೀಖ್ ಹಿಮಮಿ ಸಖಾಫಿ, ಎಸ್ವೈಎಸ್ ನಾಯಕರಾದ ಸಿ.ಎಚ್.ಅಬ್ದುರ್ರಹ್ಮಾನ್ ಮುಸ್ಲಿಯಾರ್, ಪಿ.ಎಂ.ಹಾರಿಸ್ ಮಿಸ್ಬಾಹಿ, ಎಸ್ಸೆಸ್ಸೆಫ್ ಅಧ್ಯಕ್ಷರಾದ ಆಸಿಫ್ ಕೆ.ಎಂ. ಉಪಸ್ಥಿತರಿದ್ದರು. ಜಮಾಅತ್ ಕಾರ್ಯದರ್ಶಿ ಅಲ್ ಹಾಜಿ ಬಿ.ಎಂ ಇಸ್ಮಾಯಿಲ್ ಸಖಾಫಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…
ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9535156490