ಸುಳ್ಯ: ಮಂಗಳೂರಿನ ಪ್ರತಿಷ್ಠಿತ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದ.ಕ. ಜಿಲ್ಲಾ ಮಟ್ಟದಲ್ಲಿ ನೀಡುವ ಟ್ಯಾಲೆಂಟ್ ಎಕ್ಸಲೆನ್ಸ್ ಅವಾರ್ಡ್ ಗೆ, ಪೈಂಬೆಚ್ಚಾಲು ಮದ್ರಸಾದ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಮಂಗಳೂರು ಕೇಂದ್ರವಾಗಿರಿಸಿಕೊಂಡು ಸಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಠವಾದ ಸೇವೆಯನ್ನು ನೀಡುತ್ತಿರುವ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಪ್ರತಿವರ್ಷವೂ ದ.ಕ.ಜಿಲ್ಲೆಯಲ್ಲಿ, ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಪ ಪಡೆದ ವಿದ್ಯಾರ್ಥಿಗಳಿಗೆ ನೀಡುವ ಎಕ್ಸಲೆನ್ಸ ಅವಾರ್ಡ್ ಗೆ, ಈ ಸಲ ಪೈಂಬೆಚ್ಚಾಲು ಮದ್ರಸಾದ ಏಳನೇ ತರಗತಿಯ ತಮೀಂ ಟಿ.ಐ., ಶಂಮ್ನ ಎಂ.ಪಿ. ಹಾಗು ಫ್ಲಸ್ಟು ವಿನ ಜವೈರಿಯಾ ಟಿ.ಎ. ಈ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿ, ಇಂದು ಮಂಗಳೂರಿನಲ್ಲಿ ನಡೆದ ಪ್ರತಿಭಾ ಸಂಗಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು.
ಐದು, ಏಳು, ಹತ್ತು ಹಾಗು ಫ್ಲಸ್ಟು ತರಗತಿಗಳಲ್ಲಿ ರೇಂಜ್ ಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ಜಿಲ್ಲೆಯ ಸಮಾರು ಇನ್ನೂರ ಅರುವತ್ತು ವಿದ್ಯಾರ್ಥಿಗಳಲ್ಲಿ, ಆಯ್ಕೆಮಾಡಿದ ಮೂವತ್ತು ವಿದ್ಯಾರ್ಥಿಗಳಲ್ಲಿ, ಸುಳ್ಯ ತಾಲೂಕಿನಿಂದ ಆಯ್ಕೆಯಾದ ಮೂರೇ ಮೂರು ವಿದ್ಯಾರ್ಥಿಗಳು ಕೂಡ ಪೈಂಬೆಚ್ಚಾಲು ಮದ್ರಸಾದ ವಿದ್ಯಾರ್ಥಿಗಳಾಗಿದ್ದಾರೆ.
ಬಹು ಫಾರೂಖ್ ಮದನಿ ಸೆರ್ಕಳ, ಇಸ್ಮಾಯಿಲ್ ಸಖಾಫಿ ಬಿ.ಎಂ. ರವರು ಈ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಬೇತಿ ನೀಡಿ ಇದಕ್ಕೆ ಅವರನ್ನು ಅರ್ಹಗೊಳಿಸಿದ್ದರು.