ಮಂಗಳೂರು: ದೇಶವನ್ನು ಆಳುತ್ತಿರುವ ಜನವಿರೋಧಿ ಬಿಜೆಪಿ ನೇತೃತ್ವದ ಸರಕಾರವು ದಲಿತ ಆದಿವಾಸಿ ಸಮುದಾಯದ ಬದುಕಿನ ಮೇಲೆ ನಿರಂತರ ಕುದುರೆ ಸವಾರಿ ಮಾಡುತ್ತಿದ್ದು ಪ್ರಸ್ತುತ ಪೌರತ್ವ ತಿದ್ದುಪಡಿ ಮಸೂದೆಯಿಂದ ಈ ದೇಶದ ಮೂಲನಿವಾಸಿಗಳಾದ ದಲಿತ ಆದಿವಾಸಿ ಬುಡಕಟ್ಟು ಸಮುದಾಯಗಳ ಬದುಕು ಅತಂತ್ರವಾದಂತೆ ಎಂದು ರವಿಚಂದ್ರ ಕೊಪ್ಪಲಕಾಡು ಹೇಳಿದರು. ಅವರು ದಲಿತ ಹಕ್ಕುಗಳ ಸಮಿತಿಯ ಕೊಂಚಾಡಿ ಘಟಕ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.
ಸರ್ವ ಜನಾಂಗದ ಶಾಂತಿಯ ತೋಟ ಆಗಿರುವ ಭಾರತವನ್ನು ಮತ ಧರ್ಮಗಳ ಆಧಾರದ ಮೇಲೆ ವಿಘಟನೆ ಮಾಡುವ ಸಂಘ ಪರಿವಾರದ ಕುತಂತ್ರವನ್ನು ಈ ಮಣ್ಣಿನ ಮೂಲನಿವಾಸಿಗಳಾದ ದಲಿತರು ಆದಿವಾಸಿಗಳು ಸೋಲಿಸಬೇಕೆಂದು ಕರೆನೀಡಿದರು. ಬಿಜೆಪಿ ಆಳ್ವಿಕೆ ಪ್ರಾರಂಭವಾದ ಮೇಲೆ ದಲಿತರ ಮೇಲೆ ದೌರ್ಜನ್ಯದ ಘಟನೆಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷರಾದ ತಿಮ್ಮಯ್ಯ ಕೊಂಚಾಡಿ, ನಗರ ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, ಡಿವೈಎಫ್‌ಐ ನಗರಾಧ್ಯಕ್ಷರಾದ ನವೀನ್ ಬೊಲ್ಪುಗುಡ್ಡೆ, ಕಟ್ಟಡ ಕಾರ್ಮಿಕರ ಮುಂದಾಳುಗಳಾದ ಚಂದ್ರಹಾಸ್, ದಯಾನಂದ ಶೆಟ್ಟಿಗಾರ್, ಶಶಿಕುಮಾರ್ ಗುಂಡಳಿಕೆ ಮಾತನಾಡಿದರು.
ಗತ ವರ್ಷದ ವರದಿಯನ್ನು ಡಿಎಚ್‌ಎಸ್ ನಗರ ಸಮಿತಿ ಸದಸ್ಯರಾದ ಪ್ರವೀಣ್ ಕೊಂಚಾಡಿ ಮಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ನಾರಾಯಣ ಕೊಂಚಾಡಿ ವಹಿಸಿದರು. ಪ್ರಾರಂಭದಲ್ಲಿ ಪಾಂಡುರಂಗ ಕೆ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ನೂತನ ಕಾರ್ಯದರ್ಶಿ ದೊಂಬಯ್ಯ ಕೆ. ವಂದಿಸಿದರು.
18.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ್ದ ಮೊದಲ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್…
ರಾಜ್ಯದ ನೈಋತ್ಯ ಒಳನಾಡಿನಲ್ಲಿ ಸಕ್ರಿಯವಾಗಿದ್ದು ಕರಾವಳಿಯಲ್ಲಿ ಸಾಮಾನ್ಯವಾಗಿತ್ತು. ಆ.20 ರ ವರೆಗೆ ಭಾರಿ…
ಜೀವಿತದಲ್ಲಿ ಬದುಕಿನ ಸಾರವನ್ನೆಲ್ಲಾ ಅನುಭವಿಸಿದ ಏಕೈಕ ವ್ಯಕ್ತಿ ಶ್ರೀಕೃಷ್ಣ. ಪ್ರೀತಿ ಅಂದರೆ ಒಬ್ಬರನ್ನೊಬ್ಬರು…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಆಂದ್ರಾ, ಒಡಿಶಾ ಕರಾವಳಿಯಲ್ಲಿ ಇದ್ದು, ಆಗಸ್ಟ್ 20,21ರಂದು ಗುಜರಾತ್…
ಹಲಸಿನ ಹಣ್ಣಿನ ಬಜ್ಜಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…