ಬೆಳ್ಳಾರೆ: ಸುಳ್ಯ ತಾಲೂಕಿನಾದ್ಯಂತ ಪ್ರಕೃತಿ ವಿಕೋಪ ಸಮಿತಿ ರಚನೆ ಆರಂಭವಾಗಿದ್ದು, ಕಳಂಜ ಗ್ರಾಮ ಪಂಚಾಯತ್ ನಲ್ಲೂ ಪ್ರಕೃತಿ ವಿಕೋಪ ರಚನಾ ಸಮಿತಿಯನ್ನು ರಚನೆ ಮಾಡಿಕೊಂಡಿದೆ. ಉಳಿದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ರಚನೆಯಾಗುತ್ತಿದೆ.
ಗ್ರಾಮ ಪಂಚಾಯತ್ ಮಟ್ಟದ ಸಮಿತಿಯ ತಾಲೂಕು ವೀಕ್ಷಕರಾಗಿ ನೊಡೇಲ್ ಅಧಿಕಾರಿಗಳಿದ್ದು, ಮೇಲ್ವಿಚಾರಕನಾಗಿ ಒಬ್ಬ ಅಧಿಕಾರಿಯಿರುತ್ತಾರೆ. ಮಳೆಗಾಲದ ಅವಧಿಯ ಸಂದರ್ಭದಲ್ಲಿ ವಾರದ 7 ದಿನ ಹಾಗೂ ದಿನದ 24 ಗಂಟೆಯೂ ಮಳೆಗಾಲದ ವಿಪತ್ತಿನ ವಿರುದ್ಧ ಸದಾ ಜನರ ರಕ್ಷಣೆಗಾಗಿ ಸನ್ನದ್ದವಾಗಿರುತ್ತದೆ.
ಸಮಿತಿಯ ಕಾರ್ಯವೈಖರಿ ಹೀಗಿರುತ್ತದೆ:
ಸಮಿತಿಯ ವತಿಯಿಂದ ಜೇಸಿಬಿ, ಹಿಟಾಚಿ, ಮೆಸ್ಕಾಂ ಇಲಾಖೆ ಹಾಗು ಆರೋಗ್ಯ ಇಲಾಖೆಯವರ ಸಂಪರ್ಕ ಸಂಖ್ಯೆಯನ್ನು ಸಂಗ್ರಹಿಸಿಡಲಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಈ ಎಲ್ಲಾ ಇಲಾಖೆಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಅಗತ್ಯ ಬಿದ್ದಾಗ ಜನರಿಗೆ ಸುಲಭವಾಗುವಂತೆ ತಕ್ಷಣ ಸ್ಪಂದಿಸುತ್ತದೆ.ಪ್ರಕೃತಿ ವಿಕೋಪ ರಕ್ಷಣಾ ಸಮಿತಿಯು ಸದಾ ಸಂಬಂಧಿಸಿದ ಇಲಾಖೆಯೊಂದಿಗೆ ಸಂಪರ್ಕದಲ್ಲಿಯೇ ಇದ್ದು, ಜನರನ್ನು ವೃಷ್ಠಿಯ ವಿಪತ್ತಿನಿಂದ ರಕ್ಷಿಸಲು ಶ್ರಮಿಸುತ್ತದೆ.
ನೆರೆ ಹಾವಳಿ,ಮಳೇ ಗಾಳಿಯಿಂದ ಹೆಚ್ಚಿನ ಸಮಸ್ಯೆ ಕಂಡು ಬರುವ ಪ್ರದೇಶಗಳಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ತ್ವರಿತ ಕ್ರಮಕೈಗೊಳ್ಳುತ್ತದೆ. ಈ ಕುರಿತು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಿಡಿಪಿಒ ಹಾಗು ಪಶು ಇಲಾಖೆಗಳೊಂದಿಗೆ ಸಂಪರ್ಕದಲ್ಲಿದ್ದು ಮಾಹಿತಿಗಳನ್ನು ನೀಡುತ್ತಿರುತ್ತದೆ. ಭಾರಿ ಮಳೆಯಾದ ಸಂದರ್ಭ ಶಾಲೆಗಳಿಗೆ ರಜೆ ನೀಡುವ ಶಿಫಾರಸ್ಸನ್ನು ಸಮಿತಿ ಅಧಿಕಾರಿಗಳಿಗೆ ಮಾಡುತ್ತದೆ.
ಸಮಿತಿಯ ರಚನೆಗೆ ಕಾರಣ
ಕಳೆದ ಬಾರಿ ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪದ ಪರಿಣಾಮ ಕೊಡಗು ಹಾಗು ದಕ್ಷಿಣ ಕನ್ನಡದ ಜನತೆಯನ್ನೇ ಬೆಚ್ಚಿಬೀಳಿಸಿತ್ತು. ಸಾಮಾನ್ಯ ಜನರು ಪ್ರಕೃತಿಯ ವೈಪರಿತ್ಯವನ್ನು ಎದುರಿಸಲು ಪೂರ್ವ ತಯಾರಿ ನಡೆಸಿರಲಿಲ್ಲ. ಆದುದರಿಂದ ಈ ಬಾರಿ ಎಲ್ಲಾ ಕಡೆಯೂ ಇನ್ನೇನು ಮಳೆಗಾಲ ಆರಂಭಗೊಳ್ಳುವುದಕ್ಕೂ ಮೊದಲು ಪ್ರಕೃತಿ ವಿಕೋಪ ರಕ್ಷಣಾ ಸಮಿತಿಯನ್ನು ರಚಿಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಕಳಂಜ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ ಆರ್, ” ಜನರಿಗೆ ತೊಂದರೆಯಾಗದಂತೆ ಮುಂಜಾಗೃತಾ ಕ್ರಮವಾಗಿ ಎಲ್ಲಾ ಕಡೆಯೂ ಇಂತಹ ಸಮಿತಿಯನ್ನು ರಚನೆ ಮಾಡಲಾಗುತ್ತಿದೆ. ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರಥಮವಾಗಿ ನಮ್ಮ ಪಂಚಾಯತ್ ಈ ಸಮಿತಿಯನ್ನು ರಚನೆ ಮಾಡಿಕೊಂಡಿದೆ.” ಎಂದು ಹೇಳುತ್ತಾರೆ.
ಗ್ರಾಮಮಟ್ಟದ ಸಮಿತಿ ಬಗ್ಗೆ ಮಾತನಾಡಿದ ತಹಶೀಲ್ದಾರ್ ಕುಂಞ ಅಹಮ್ಮದ್, “ಯಾವುದೇ ಪ್ರಾಕೃತಿಕ ವಿಕೋಪದಿಂದ ಸಾರ್ವಜನಿಕರು ಬಾಧೆಪಡದಂತೆ ಸಹಾಯ ಮಾಡುವ ಮುಖ್ಯ ಉದ್ದೇಶ ಪ್ರಾಕೃತಿಕ ವಿಕೋಪ ರಕ್ಷಣಾ ಸಮಿತಿಯ ಮೊದಲ ಧ್ಯೇಯವಾಗಿದೆ. ಸಹಕಾರಕ್ಕಾಗಿ ಸಮಿತಿಯು ಸರಕಾರದ ಎಲ್ಲಾ ಇಲಾಖೆಯೊಂದಿಗೆ ಸಂಪರ್ಕದಲ್ಲಿರುತ್ತದೆ.” ಎನ್ನುತ್ತಾರೆ.
ಶಿರಸಿಯ ಕಾಳುಮೆಣಸಿನ ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಸಚಿವ…
ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ದಾನಪತ್ರವನ್ನು…
ಹೆಣ್ಣಿನ ಸ್ಥಾನಮಾನ, ಶೋಷಣೆ ಮತ್ತು ಸಬಲೀಕರಣದ ಪ್ರಶ್ನೆ ಬಂದಾಗ ತ್ಯಾಗ ಮತ್ತು ಮಮತೆಯ…
ಲಾ ನಿನಾ ಪ್ರಭಾವ ಇರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಒಳನಾಡು,…
ಅಷ್ಟೊಂದು ಪ್ರಮಾಣದ ಮಳೆಯು ಯಾವ ಮುನ್ಸೂಚನೆಯಲ್ಲೂ ಇರಲಿಲ್ಲ. ನಿರೀಕ್ಷೆಯೂ ಇರಲಿಲ್ಲ. ಬೆಳಿಗ್ಗೆ ಚಳಿ,…
ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ…