ಸುಳ್ಯ: ಸುನ್ನೀ ಮಾನೇಜ್ ಮಂಟ್ ಎಸೋಸಿಯೇಶನ್ ಎಸ್ ಎಂ ಎ ಸುಳ್ಯ ರಿಜೀನಲ್ ಇದರ ವಾರ್ಷಿಕ ಮಹಾಸಭೆಯು ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಕುಂಞ್ಞಿ ಗೂನಡ್ಕ ಅವರ ಅಧ್ಯಕ್ಷತೆಯಲ್ಲಿ ಗಾಂಧಿನಗರ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ವಕ್ಫ್ ಸದಸ್ಯ ಹಾಜಿ ಮುಸ್ತಫ ಕೆ ಎಂ ಉದ್ಘಾಟಿಸಿದರು.ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪುಂಡೂರು ಲೆಕ್ಕ ಪತ್ರ ಮಂಡಿಸಿ, ಮಜೀದ್ ಸುಣ್ಣಮೂಲೆ ವರದಿ ವಾಚಿಸಿದರು.ಎಸ್ ಎಂ ಎ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ಲ ಅಹ್ಸನಿ ಚುನಾವಣಾ ನಿಯಂತ್ರಿಸಿದರು.
ಎಸ್ ಎಂ ಎ ಬೆಳ್ಳಾರೆ ಝೋನ್ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ, ಬೈತಡ್ಕ ರಿಜಿನಲ್ ಕಾರ್ಯದರ್ಶಿ ಅಬ್ದುಲ್ ಲತೀಫ್ ಮುಸ್ಲಿಯಾರ್, ಕಡಬ ರಿಜಿನಲ್ ಅಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ನೂತನ ಅಧ್ಯಕ್ಷರಾಗಿ ಮುಹಮ್ಮದ್ ಕುಂಞ್ಞಿ ಗೂನಡ್ಕ,ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಕೋಶಾಧಿಕಾರಿ ಮೊಯಿದು ಹಾಜಿ ಶಾಂತಿನಗರ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಲತೀಫ್ ಸಖಾಫಿ ಮಾಡನ್ನೂರ್ (ಸಂಘಟನೆ) ಅಬ್ದುಲ್ ಹಮೀದ್ ಬೀಜಕೋಚ್ಚಿ (ಕ್ಷೇಮಕಾರ್ಯ) ಹಾಜಿ ಮುಸ್ತಫ ಕೆ ಎಂ ಜನತ (ಸಂಸ್ಥೆ ಮತ್ತು ವಕ್ಫ್) ಕಾರ್ಯದರ್ಶಿಗಳಾಗಿ ಹಸೈನಾರ್ ಜಯನಗರ,ಲತೀಫ್ ಹರ್ಳಡ್ಕ, ಹಸೈನಾರ್ ಗುತ್ತಿಗಾರು, ಮುಹಮ್ಮದ್ ಸಖಾಫಿ ಮೊಗರ್ಪಣೆ, ನಿರ್ದೇಶಕರಾಗಿ ಜಿ ಎಸ್ ಮುಹಮ್ಮದ್ ಕುಂಞ್ಞಿ ಜೀರ್ಮುಖಿ, ಅಬೂಬಕ್ಕರ್ ಹಾಜಿ ಇರುವಂಬಳ್ಳ,ಕೆ ಎ ಅಬ್ದುಲ್ಲ ಜಾಲ್ಸೂರ್,ಉಸ್ಮಾನ್ ಪೈಂಬಚ್ಚಾಲ್, ಅಬೂಬಕ್ಕರ್ ಜಟ್ಟಿಪಳ್ಳ, ಮುಹಮ್ಮದ್ ಕುಂಞ್ಞಿ ಎಲಿಮಲೆ,ಹಾಜಿ ಐ ಇಸ್ಮಾಯೀಲ್ ಗಾಂಧಿನಗರ,ಹಾಜಿ ಅಬ್ದುರ್ರಹ್ಮಾನ್ ಕಯ್ಯಾರ್,ಅಬೂಬಕ್ಕರ್ ನಂಬರ್ ಮೂಲೆ,ಯೂಸುಫ್ ಹಾಜಿ ಬಿಳಿಯಾರು, ಪಿ ಎನ್ ಅಬೂಬಕ್ಕರ್ ಪೆರಾಜೆ,ಎ ಕೆ ಅಬ್ದುಲ್ ಮಜೀದ್ ಸುಣ್ಣಮೂಲೆ,ಪಿ ಕೆ ಇಬ್ರಾಹಿಂ ಪೈಚಾರು, ಇಬ್ರಾಹಿಂ ಸಖಾಫಿ ಪುಂಡೂರು, ನಿಝಾರ್ ಸಖಾಫಿ ಮುಡೂರು,ಬೀರಾನ್ ಹಾಜಿ ಇರುವಂಬಳ್ಳ, ಜಿ ಎಸ್ ಅಬ್ದುಲ್ಲ ಜೀರ್ಮುಖಿ ಇವರನ್ನು ಆಯ್ಕೆಗೊಳಿಸಲಾಯಿತು.
ಈ ಸಂಧರ್ಭ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಕಾರಣಕರ್ತ ಅದ್ಯಾಪಕರನ್ನೂ ಅಬಿನಂಧಿಸಲಾಯಿತು.ಪ್ರತೀ ಮದ್ರಸಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ಕಾರ್ಯರೂಪಕ್ಕೆ ತರಲು ಕರೆ ನೀಡಲಾಯಿತು.
ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ವಂಧಿಸಿದರು.