ಟೆಸ್ಟ್ ಕ್ರಿಕೆಟ್ ಪಂದ್ಯಾಟ : ಕನ್ನಡಿಗ ಮಯಾಂಕ್​ ಅಗರ್​ವಾಲ್ ಭರ್ಜರಿ ದ್ವಿಶತಕ: ಬೃಹತ್ ಮೊತ್ತ ಪೇರಿಸಿದ ಭಾರತ

October 3, 2019
9:04 PM

ವಿಶಾಖಪಟ್ಟಣ: ಆರಂಭಿಕ ಆಟಗಾರರಾದ ಕನ್ನಡಿಗ ಮಾಯಾಂಕ್ ಅಗರ್​ವಾಲ್ ಭರ್ಜರಿ ದ್ವಿಶತಕ (215)ಮತ್ತು ರೋಹಿತ್ ಶರ್ಮ ಭರ್ಜರಿ ಶತಕದ(176) ನೆರವಿನಿಂದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಭಾರತ ಬೃಹತ್ ಮೊತ್ತ ದಾಖಲಿಸಿದೆ.

Advertisement

ಏಳು ವಿಕೆಟ್ ಗೆ 502 ರನ್ ಗಳಿಸಿ ಭಾರತ ಪ್ರಥಮ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಎರಡನೇ ದಿನದ ಆಟದ ಮುಕ್ತಾಯಕ್ಕೆ ದಕ್ಷಿಣ ಆಫ್ರಿಕಾ ಮೂರು ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದೆ. ವಿಶಾಖಪಟ್ಟಣದ ಎಸಿಎ-ವಿಡಿಸಿಎ ಮೈದಾನದಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಯ್ಲಿ​ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಹೊಸ ಆರಂಭಿಕ ಜೋಡಿಯಾಗಿ ಕಣಕ್ಕಿಳಿದ ರೋಹಿತ್​ ಶರ್ಮಾ ಮತ್ತು ಕನ್ನಡಿಗ ಮಯಾಂಕ್​ ಅಗರ್​ವಾಲ್​ ಪ್ರಥಮ ದಿನ ಪೂರ್ತಿ ಆಡಿ 59.1 ಓವರ್​ಗಳಲ್ಲಿ 202ರನ್​ ಗಳಿಸಿದ್ದರು. ರೋಹಿತ್ ಶರ್ಮ115 ರನ್​, ಮಯಾಂಕ್​ 84 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

ಗುರುವಾರ ಆಟ ಮುಂದುವರಿಸಿದ ಈ ಜೋಡಿ ಮೊದಲ ವಿಕೆಟ್ ಗೆ ಬರೋಬ್ಬರಿ 317 ರನ್​ ಗಳಿಸಿತು. ಈ ಮೂಲಕ 2004ರಲ್ಲಿ ಕಾನ್ಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಆರಂಭಿಕ ಜೋಡಿಯಾಗಿದ್ದ ವಿರೇಂದ್ರ ಸೆಹ್ವಾಗ್ ಹಾಗೂ ಗೌತಮ್​ ಗಂಭೀರ್ ಗಳಿಸಿದ್ದ 218 ರನ್​ಗಳ ದಾಖಲೆಯನ್ನು ಮುರಿದರು. ಅದೇ ರೀತಿ 300ಕ್ಕೂ ಹೆಚ್ಚು ರನ್​ ಜೊತೆಯಾಟ ನೀಡಿದ ​ ಮೂರನೇ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಆರಂಭಿಕನಾಗಿ ಬ್ಯಾಟ್ ಮಾಡಲು ಕಣಕ್ಕೆ ಇಳಿದ ಕನ್ನಡಿಗ ಮಯಾಂಕ್ ಅಗರ್​ವಾಲ್​ ಅವರ ಮೊದಲ ದ್ವಿಶತಕ ಇದಾಗಿದ್ದು 371 ಬಾಲ್​ಗಳಲ್ಲಿ 22 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 215 ರನ್​ ಗಳಿಸಿದರು. ರೋಹಿತ್ ಶರ್ಮಾ 244 ಬಾಲ್ ಗಳಲ್ಲಿ 23 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 176 ರನ್​ ಗಳಿಸಿ ಔಟಾದರು‌. ಇನ್ನುಳಿದಂತೆ ಚೇತೇಶ್ವರ್​ ಪೂಜಾರಿ 6 ರನ್​, ವಿರಾಟ್​ ಕೊಹ್ಲಿ 20, ಅಜಿಂಕ್ಯ ರಹಾನೆ 15, ಹನುಮ ವಿಹಾರಿ 10, ವೃದ್ಧಿಮಾನ್​ ಸಾಹಾ 21 ರನ್​ ಗಳಿಸಿ ಔಟಾದರು. ರವೀಂದ್ರ ಜಡೇಜಾ (30), ರವಿಚಂದ್ರನ್​ ಅಶ್ವಿನ್​ (1) ಔಟಾಗದೆ ಉಳಿದರು.

ಮೊದಲ ಇನ್ನಿಂಗ್ಸ್​ ಆರಂಭಿಸಿದ ದ.ಆಫ್ರಿಕಾ ಎರಡನೇ ದಿನದ ಅಂತ್ಯಕ್ಕೆ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 39 ರನ್​ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಭಾರತದ ಪರ ರವಿಚಂದ್ರನ್ ಅಶ್ವಿನ್ ಎರಡು ಮತ್ತು ರವೀಂದ್ರ ಜಡೇಜ ಒಂದು ವಿಕೆಟ್ ಪಡೆದರು.

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಹಾಳೆ ತಟ್ಟೆ ಅಮೆರಿಕದಲ್ಲಿ ಬ್ಯಾನ್ …
May 14, 2025
9:43 PM
by: ಪ್ರಬಂಧ ಅಂಬುತೀರ್ಥ
ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ
May 14, 2025
11:31 AM
by: ಸಾಯಿಶೇಖರ್ ಕರಿಕಳ
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ – ಈಶ್ವರ ಖಂಡ್ರೆ
May 14, 2025
11:20 AM
by: The Rural Mirror ಸುದ್ದಿಜಾಲ
ಜೂ.30 ರೊಳಗೆ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಲಾಗವುದು | ಕಂದಾಯ ಸಚಿವ ಕೃಷ್ಣಬೈರೇಗೌಡ
May 14, 2025
11:15 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group