ಸುಳ್ಯ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಎಲ್ಲ ರೈತರಿಗೆ ವರ್ಷಕ್ಕೆ 6000 ರೂಪಾಯಿ ನೀಡಲಾಗುತ್ತದೆ. ಈಯೋಜನೆಯ ನೋಂದಾಣಿಗೆ 25 ಜೂನ್ 2019 ಕೊನೆಯ ದಿನವಾಗಿದ್ದು ಎಲ್ಲ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ಈ ಕೆಳಗಿನದಾಖಲೆಗಳನ್ನು ನೀಡಿ ನೋಂದಾವಣೆ ಮಾಡಿಕೊಳ್ಳಲು ಕೋರಲಾಗಿದೆ.
Advertisement
ನಗರ ಪ್ರದೇಶದ ಕೃಷಿಕರು ತೋಟಗಾರಿಕೆ ಇಲಾಖೆ ಸಂಪರ್ಕಿಸಬಹುದು.
ಆಧಾರ್ ಕಾರ್ಡ್, ಆಧಾರ್ ಅನುಮತಿ ಪತ್ರ(ಕಚೇರಿಯಲ್ಲಿ ಪಡೆದು ಅಲ್ಲೇ ಸಹಿ ಮಾಡಿ ನೀಡುವದು),ಸರ್ವೇ ನಂಬರ್ ವಿವರವನ್ನು ಆಧಾರ್ ಮೇಲೆ ಬರೆಯಬೇಕು.ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಮೊದಲ ಪುಟದ ಪ್ರತಿಗಳನ್ನು ನೀಡಿ ನೋಂದಾವಣೆ ಮಾಡಬೇಕು.
ವಾರ್ಷಿಕ 6000 ಆರ್ಥಿಕ ನೆರವು ನೀಡುವ ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ
ಎಲ್ಲಾ ರೈತರು ಅರ್ಹರಾಗಿರುತ್ತಾರೆ.
ಆದರೆ ಸರ್ಕಾರಿ ನೌಕರರು, ವಕಿಲರು, ಆದಾಯ ತೆರಿಗೆ ಪಾವತಿಸುವವರು,
ತಾಲೂಕು ಪಂಚಾಯತ್ ಸದಸ್ಯರುಗಳು ಮತ್ತು ಅಧ್ಯಕ್ಷರು , ಜಿಲ್ಲಾ ಪಂಚಾಯತ್ ಸದಸ್ಯರುಗಳು ಮತ್ತು ಅಧ್ಯಕ್ಷರು ಯೋಜನೆಯಡಿ ಬರುವುದಿಲ್ಲ ಎಂದು ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.