ಬೆಳ್ಳಾರೆ: ಭಾರತ ಸರ್ಕಾರದ ರಾಷ್ಟ್ರೀಯ ಕೌಶಲ್ಯ ಪರಿಷತ್ತು ಮತ್ತು ಕಮ್ಯುನಿಟಿ ಪಾಲಿಟೆಕ್ನಿಕ್ ಸಂಸ್ಥೆ ಬೆಳ್ಳಾರೆ ಇದರ ಜಂಟಿ ಆಶ್ರಯದಲ್ಲಿ ಸಾರ್ವಜನಿಕರಿಗೆ ಹಾಗು ರಜೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಉಚಿತ ವೃತ್ತಿ ತರಬೇತಿಯನ್ನು ಆಯೋಜಿಸಲಾಗಿದೆ.
ಇದರೊಂದಿಗೆ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಅಧಿಕೃತ ಪಾಲುದಾರಿಕಾ ತರಬೇತಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ಇನ್ನಿತರ ಉಚಿತ ಕೌಶಲ್ಯ ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿಗಳು ಸಂಪೂರ್ಣ ಉಚಿತವಿದ್ದು, ಯಾವುದೇ ತರಬೇತಿ ಶುಲ್ಕವಿರುವುದಿಲ್ಲ. ತರಬೇತಿಯ ನಂತರ ಭಾರತ ಸರ್ಕಾರದ ಪ್ರಮಾಣ ಪತ್ರವನ್ನು ನೀಡಲಾಗುವುದು.
ತರಬೇತಿ ಅವಧಿಯಲ್ಲಿ ಬೇಸಿಕ್ ಕಂಪ್ಯೂಟರ್ ಅಪ್ಲಿಕೇಷನ್, ಡಿಟಿಪಿ, ಟ್ಯಾಲಿ ಬ್ಯಾಂಕಿಂಗ್ ಮತ್ತು ಅಕೌಂಟಿಂಗ್, ಟೈಲರಿಂಗ್ ಟೆಕ್ನಾಲಜಿ, ಫ್ಯಾಶನ್ ಡಿಸೈನಿಂಗ್, ಕಸೂತಿ ಬ್ಯೂಟೀಷಿಯನ್, ಸಾಫ್ಟ್ ಸ್ಕಿಲ್ಸ್, ಬ್ಯುಸಿನೆಸ್ ಹಾಗು ಕಾಮರ್ಸ್ ತರಬೇತಿಗಳನ್ನು ಆಯೋಜಿಸಲಾಗಿದೆ.
ಆಸಕ್ತರು ಕನಿಷ್ಠ 16ವರ್ಷದ ವಯೋಮಿತಿಯೊಳಗಿನವರಾಗಿದ್ದು, 8ನೇ ತರಗತಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದವರು ಟೈಲರಿಂಗ್ ತರಬೇತಿಗೆ ಹಾಗು 10ನೇ ತರಗತಿ ಮೇಲ್ಪಟ್ಟವರು ಕಂಪ್ಯೂಟರ್ ಹಾಗು ಇತರ ತರಬೇತಿಗಳಿಗೆ ಅರ್ಹರಾಗಿರುತ್ತಾರೆ. ಅದರೊಂದಿಗೆ ಸಿದ್ಧ ಉಡುಪು ತಯಾರಿಕಾ ತರಬೇತಿಯಲ್ಲಿ ಆಯ್ದ ಅಭ್ಯರ್ಥಿಗಳಿಗೆ 3500 ರೂಪಾಯಿಗಳ ಶಿಷ್ಯ ವೇತನ ನೀಡಲಾಗುವುದು. ಭಾರತ ಸರ್ಕಾರದ ಈ ಮಹತ್ವಾಕಾಂಕ್ಷೆಯಾದ ಗ್ರಾಮೀಣ ಪ್ರದೇಶಗಳಿಗೆ ಕೊಡಮಾಡುವ ಈ ವಿಶೇಷ ಯೋಜನಾ ಸವಲತ್ತುಗಳನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ. ತರಬೇತಿಗೆ ಎಲ್ಲರಿಗೂ ಮುಕ್ತವಾದ ಅವಕಾಶವಿದೆ.
ಆಸಕ್ತ ಅಭ್ಯರ್ಥಿಗಳು ಮೇಲೆ ತಿಳಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಇತ್ತೀಚಿನ 7 ಭಾವಚಿತ್ರ, ವಿದ್ಯಾರ್ಹತೆಯ ಅಂಕಪಟ್ಟಿಯ ನಕಲು ಪ್ರತಿ, ಪರಿಶಿಷ್ಠ ಜಾತಿ ಹಾಗು ಪರಿಶಿಷ್ಠ ಪಂಗಡಕ್ಕೆ ಸೇರಿದವರಾಗಿದ್ದರೆ ಜಾತಿ ಪ್ರಮಾಣ ಪತ್ರ ಹಾಗು ಪಡಿತರ ಚೀಟಿಯ ನಕಲು ಪ್ರತಿಯೊಂದಿಗೆ ಬೆಳ್ಳಾರೆಯ ವಿಜಯ ಬ್ಯಾಂಕ್ ಕಟ್ಟಡದ ಕಮ್ಯುನಿಟಿ ಪಾಲಿಟೆಕ್ನಿಕ್ ಉಚಿತ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಪ್ರಾಂಶುಪಾಲರನ್ನು ನೇರವಾಗಿ ಭೇಟಿಯಾಗಬಹುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…