Advertisement
MIRROR FOCUS

ಪ್ರವಾಹಕ್ಕೆ ಸಿಲುಕಿದ ಸೇತುವೆ ವೀಕ್ಷಿಸಿದರು ತೂಗು ಸೇತುವೆಗಳ ಸರದಾರ

Share

ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಎಲ್ಲಾ ಸೇತುವೆಗಳನ್ನು  ಪದ್ಮಶ್ರೀ ಪ್ರಶಸ್ತಿ ವಿಜೇತ ಸುಳ್ಯದ ಇಂಜಿನಿಯರ್ ಗಿರೀಶ್ ಭಾರದ್ವಾಜ್ ವೀಕ್ಷಿಸುತ್ತಾರಂತೆ. ಕರ್ನಾಟಕ- ಕೇರಳದಲ್ಲಿ  ಒಟ್ಟು 137  ತೂಗುಸೇತುವೆ  ನಿರ್ಮಾಣ ಮಾಡಿದ್ದಾರೆ. ಇದರಲ್ಲಿ  8 ಸೇತುವೆಗಳು ಈ ಬಾರಿಯ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಹೀಗಾಗಿ ಗಿರೀಶರು ಅಪಾರ ನೋವು ಅನುಭವಿಸಿದರು. ಇದೀಗ ಪ್ರವಾಹ ತಗ್ಗಿದ ಬಳಿಕ ಇದೆಲ್ಲವನ್ನೂ ವೀಕ್ಷಣೆ ಮಾಡಲು ತೆರಳುತ್ತಿದ್ದಾರೆ. ಮುಂದೆ ಏನು ಮಾಡಬಹುದು  ಎಂಬ ಯೋಚನೆ ಮಾಡುತ್ತಿದ್ದಾರೆ.


ಸುಳ್ಯ: ರಾಜ್ಯ ಕಂಡು ಕೇಳರಿಯದಷ್ಟು ಭೀಕರ ಪ್ರವಾಹಕ್ಕೆ ಸಿಲುಕಿ ನಾಶವಾದ ತೂಗು ಸೇತುವೆಗಳನ್ನು ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪ್ರಶಸ್ತಿ ವಿಜೇತ ಸುಳ್ಯದ ಇಂಜಿನಿಯರ್ ಗಿರೀಶ್ ಭಾರದ್ವಾಜ್ ವೀಕ್ಷಿಸಿದ್ದಾರೆ.

ಗಿರೀಶರು ನಿರ್ಮಿಸಿದ ಮುಗಿಲೆತ್ತರದ ಎಂಟು ತೂಗು ಸೇತುವೆಗಳನ್ನು ಪ್ರಳಯ ಜಲ ಕೊಚ್ಚಿ ಕೊಂಡು ಹೋಗಿದೆ. ಇದೀಗ ಮಳೆ ಕಡಿಮೆಯಾಗಿ ಪ್ರವಾಹ ಇಳಿದ ಮೇಲೆ ತನ್ನ ತೂಗು ಸೇತುವೆಗಳನ್ನು ಅವರು ವೀಕ್ಷಿಸುತ್ತಿದ್ದಾರೆ. ಪ್ರವಾಹಕ್ಕೆ ಸಿಲುಕಿ ನಾಶವಾದ ಉಪ್ಪಿನಂಗಡಿ ಸಮೀಪ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಮುಗೇರಡ್ಕ ತೂಗು ಸೇತುವೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಗಂಗಾವಳಿ ಹೊಳೆಗೆ ರಾಮನಗುಳಿ-ಕಲ್ಲೇಶ್ವರ ಸಂಪರ್ಕ ಕಲ್ಪಿಸುವ ತೂಗು ಸೇತುವೆಗಳನ್ನು ಅವರು ವೀಕ್ಷಿಸಿದರು. ರಾಜ್ಯದಲ್ಲಿ ಒಟ್ಟು 8 ತೂಗು ಸೇತುವೆಗಳು ಪ್ರವಾಹಕ್ಕೆ ಸಿಲುಕಿ ಹಾಳಾಗಿದೆ ಎಂದು ಇವರಿಗೆ ಮಾಹಿತಿ ಬಂದಿದೆ. ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ತಲಾ 3 ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ತಲಾ 1 ತೂಗು ಸೇತುವೆಗೆ ಹಾನಿ ಸಂಭವಿಸಿದೆ. ಮುಗೇರಡ್ಕ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಕೆಲವು ಸೇತುವೆಗಳಿಗೆ ಹಾನಿ ಸಂಭವಿಸಿದೆ. ತೂಗು ಸೇತುವೆಯ ಎತ್ತರಕ್ಕೆ ಪ್ರವಾಹ ಹರಿದು ಮರಗಳು ಹರಿದು ಬಂದು ಬಡಿದು ತೂಗು ಸೇತುವೆಗಳಿಗೆ ಹಾನಿ ಸಂಭವಿಸಿದೆ. ಕೆಲವು ಕಡೆಗಳಿಂದ ತೂಗು ಸೇತುವೆ ಮರು ನಿರ್ಮಾಣ ಮಾಡುವಂತೆಯೂ ಗಿರೀಶ್ ಭಾರದ್ವಾಜ್‍ಗೆ ಕರೆ ಬಂದಿದೆ. ಮಳೆಹಾನಿಗೆ ಸಿಲುಕಿ ಹಾನಿ ಸಂಭವಿಸಿದ ಚಿಕ್ಕಮಗಳೂರಿನ ಕಾಂಡ್ಯಾ ತೂಗು ಸೇತುವೆ ದುರಸ್ಥಿ ಪಡಿಸಲು ಕ್ರಿಯಾ ಯೋಜನೆ ತಯಾರಿಸಿ ಕೊಡುವಂತೆ ಅಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕರೆ ಮಾಡಿದ್ದಾರೆ ಎಂದು ಗಿರೀಶ್ ಭಾರದ್ವಾಜ್ ತಿಳಿಸಿದ್ದಾರೆ.ಕರ್ನಾಟಕ, ಕೇರಳ ಸೇರಿ ಒಟ್ಟು 137 ತೂಗುಸೇತುವೆಗಳನ್ನು ಅವರು ನಿರ್ಮಿಸಿದ್ದಾರೆ.

ಮಳೆಗಾಲದಲ್ಲಿ ದ್ವೀಪವಾಗುವ ನೂರಾರು ಹಳ್ಳಿಗಳಿಗೆ ತೂಗು ಸೇತುವೆಗಳ ಮೂಲಕ ಸೇತು ಬಂಧ ಕಲ್ಪಿಸಿ ಜನರನ್ನು ಹೊರ ಜಗತ್ತಿಗೆ ಸಂಪರ್ಕ ಕಲ್ಪಿಸಿದವರು ಸುಳ್ಯದ ಗಿರೀಶ್ ಭಾರದ್ವಾಜ್. ತೂಗುಸೇತುವೆಗಳ ಸರದಾರನೆಂದು ಹೆಸರು ಮಾಡಿದ ಗಿರೀಶರ ಅಪೂರ್ವ ಸಾಧನೆಗೆ ದೇಶ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ತನ್ನ ಕೃತಿಗಳು ಕಣ್ಣೆದುರಿನಲ್ಲೇ ನಾಶವಾಗಿ ಹೋಗಿರುವುದು ನೋಡಿ ತುಂಬಾ ನೋವು ಉಂಟಾಗಿದೆ. ಜೊತೆಗೆ ತೂಗು ಸೇತುವೆ ಹಾನಿಯಾದ ಕಾರಣ ಆ ಹಳ್ಳಿಯ ಜನರ ಬದುಕು ಮತ್ತೆ ಸಂಕಷ್ಟಕ್ಕೆ ಸಿಲುಕಿರುವುದು ಮತ್ತು ಜನರ ಭಾವನೆ ನೋಡಿ ಮತ್ತಷ್ಟು ಬೇಸರವಾಯಿತು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಹಾನಿಗೊಳಗಾದ ಎಲ್ಲಾ ಸೇತುವೆಗಳನ್ನು ವೀಕ್ಷಿಸಲಾಗುವುದು ಎಂದರು. 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

1 hour ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

13 hours ago

ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ

ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…

14 hours ago

ಚಿತ್ರದುರ್ಗದಲ್ಲಿ ಕಣ್ಣೆದುರೇ ಒಣಗಿದ ಬೆಳೆ… ರೈತನಿಗೆ ದಿಕ್ಕೇ ತೋಚದ ಸ್ಥಿತಿ – ವಿಶೇಷ ಪ್ಯಾಕೇಜ್‌ಗೆ ರೈತರ ಒತ್ತಾಯ

ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಕೊರತೆ ಮತ್ತು ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿರುವುದರಿಂದ ಈರುಳ್ಳಿ,…

14 hours ago

ಗದಗ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಆರಂಭ – ರಿಯಾಯಿತಿ ದರದಲ್ಲಿ ಕಡಲೆ, ಜೋಳ, ಶೇಂಗಾ ಬೀಜ ಲಭ್ಯ

ಗದಗ ಜಿಲ್ಲೆಯಲ್ಲಿ 2026-27ನೇ ಸಾಲಿನ ಹಿಂಗಾರು ಹಂಗಾಮು ಆರಂಭವಾಗಿದ್ದು, ಕಡಲೆ, ಜೋಳ, ಶೇಂಗಾ…

14 hours ago

ಬೆಳಗಾವಿ ರೈತರಿಗೆ ಸಾಲ ಮರುಪಾವತಿಯಲ್ಲಿ ಪರಿಹಾರ ಸಿಗುತ್ತಾ?

ಬೆಳಗಾವಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಸಾಲ ಮರುರಚನೆ ಮಾಡಿ, 12…

14 hours ago