Advertisement
ಸುದ್ದಿಗಳು

ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಡೀ ದಿನ ಕೈಕೊಟ್ಟ ವಿದ್ಯುತ್ – ಬಿ ಎಸ್ ಎನ್ ಎಲ್…!, ಮೌನ ಮುರಿಯದ ಜನಪ್ರತಿನಿಧಿಗಳು…!

Share

ಸುಬ್ರಹ್ಮಣ್ಯ: ದೇಶದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ವಿವಿದೆಡೆಯಿಂದ ಭಕ್ತರು ಆಗಮಿಸುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ದೇಶದ ಪ್ರಮುಖ ಸೇವಾ ಸಂಸ್ಥೆ, ಸರಕಾರಿ ಸ್ವಾಮ್ಯದ ಬಿ ಎಸ್ ಎನ್ ಎಲ್ ಮಾತ್ರಾ ಸೇವೆಯಲ್ಲಿ  ಕೈಕೊಡುತ್ತಿದೆ ಹೀಗಾಗಿ ಭಕ್ತರು  ಮಾತ್ರಾ ಪರದಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿ ಎಸ್ ಎನ್ ಎಲ್ ಸೇವೆ ಕೈಕೊಟ್ಟರೆ ಆಸುಪಾಸಿನ ಗ್ರಾಮಗಳಲ್ಲೂ ಎಲ್ಲಾ ನೆಟ್ ವರ್ಕ್ ಕೈಕೊಡುತ್ತದೆ. ಹೀಗಾಗಿ ಗ್ರಾಮೀಣ ಭಾಗಗಳು ಇನ್ನೀಗ ಸೇವೆ ವಂಚಿತ ಪ್ರದೇಶಗಳಾಗುತ್ತಿವೆ. ಇದೀಗ ವಾರದಲ್ಲಿ ಎರಡು ದಿನ ಮೆಸ್ಕಾಂ ಕೂಡಾ ಇಡೀ ದಿನ ಪವರ್ ಕಟ್ ಮಾಡುತ್ತಿದೆ. ಇದು ಕೂಡಾ ಕತ್ತಲಿನ ಕಡೆಗೆ ನೂಕಿದೆ.

Advertisement
Advertisement
Advertisement
Advertisement

ಕುಕ್ಕೆ ಸುಬ್ರಹ್ಮಣ್ಯ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶನಿವಾರ ದಿನವಿಡಿ ವಿದ್ಯುತ್ ಹಾಗೂ ದೂರವಾಣಿ ಮೊಬೈಲ್ ಸೇವೆಗಳು ಕೈ ಕೊಟ್ಟ ಪರಿಣಾಮ ಕ್ಷೇತ್ರದಲ್ಲಿ ಹಲವು ಸೇವೆಗಳು ವ್ಯತ್ಯಯಗೊಂಡಿತು. ವಿದ್ಯುತ್ ಹಾದು ಹೋದ ಮಾರ್ಗದ ಲೈನ್ ದುರಸ್ತಿಗಾಗಿ ಶನಿವಾರ ಬೆಳಗ್ಗೆಯಿಂದ ಸಂಜೆ 6 ರ ತನಕ ಮೆಸ್ಕಾಂ ಇಲಾಖೆ ವಿದ್ಯುತ್ ಸ್ತಗಿತಗೊಳಿಸಿತ್ತು. ಸಂಜೆ 6 ರ ವೇಳೆಗೆ ನೀಡಬೇಕಿದ್ದ ವಿದ್ಯುತ್ 9 ಗಂಟೆಯವರೆಗೂ ಕೈಕೊಟ್ಟಿತು. ಇದರ ಪರಿಣಾಮ ಸುಬ್ರಹ್ಮಣ್ಯ ಸಹಿತ ಈ ಭಾಗದ ಎಲ್ಲ ಬಿಎಸ್ಎನ್ ಎಲ್ ಹಾಗೂ ಬಿಎಸ್ಎಲ್ ಎಲ್ ಟವರಿನ ಜತೆ ಹೊಂದಾಣಿಕೆ ಮಾಡಿಕೊಂಡ ಇತರೆ ಖಾಸಗಿ ಕಂಪೆನಿಗಳ ಮೊಬೈಲ್ ಸೇವೆಗಳು ಸ್ತಬ್ಧಗೊಂಡಿದ್ದವು. ಸುಬ್ರಹ್ಮಣ್ಯದಲ್ಲಿ ಬಿ ಎಸ್ ಎನ್ ಎಲ್ ಸೇವೆ ಸ್ಥಗಿತಗೊಂಡರೆ ಆಸುಪಾಸಿನ ಸುಮಾರು 8 ಗ್ರಾಮೀಣ ಭಾಗದ  ಬಿ ಎಸ್ ಎನ್ ಎಲ್ ಟವರ್ ಹಾಗೂ 3 ದೂರವಾಣಿ ಕೇಂದ್ರಗಳ ಮೇಲೆ ಪರಿಣಾಮ ಬೀರುತ್ತದೆ, ಅಲ್ಲೂ ಸೇವೆ ಸ್ಥಗಿತಗೊಳ್ಳುತ್ತದೆ.

Advertisement

ಕುಕ್ಕೆ ಕ್ಷೇತ್ರದಲ್ಲಿ ಶನಿವಾರ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದು ವಿದ್ಯುತ್ ಕೈ ಕೊಟ್ಟು ದೇವಸ್ಥಾನದ ದೂರವಾಣಿ, ಇಂಟರ್ ನೆಟ್ ಇತ್ಯಾದಿ ಸೇವೆಗಳು ಕಾರ್ಯ ನಿರ್ವಹಿಸದೆ ಭಕ್ತರು ಸಂಕಷ್ಟಕ್ಕೆ ಒಳಗಾದರು. ದೇವಸ್ಥಾನದ ಸ್ಥಿರ ದೂರವಾಣಿಗಳಿಗೆ ಹಾಗು ಮೊಬೈಲ್ ಸಂಖ್ಯೆಗೆ ಹೊರಗಿನಿಂದ ಕರೆ ಮಾಡಿದಾಗ ಎಲ್ಲ ಸಂಖ್ಯೆಗಳು ಸ್ವಿಚ್ ಆಪ್ ಆಗಿದ್ದವು.ವಿವಿಧ ಸೇವೆಗಳಿಗೆ ರಶೀದಿ ಬುಕ್ ಮಾಡಿಸುವಲ್ಲಿಯೂ ಭಕ್ತರು ಅಡಚಣೆಗೆ ಒಳಗಾದರು. ದೇವಸ್ಥಾನದ ಸೇವಾ ಕೌಂಟರುಗಳ ಕಂಪ್ಯೂಟರ್ ಕಾರ್ಯಾಚರಿಸಿಲ್ಲ.ಜತೆಗೆ ಉಳಿದೆಲ್ಲ ನಾಗರಿಕ ಸೇವೆಗಳು ಸಿಗದೆ ಭಕ್ತರು ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಲೈನ್ ದುರಸ್ತಿ ನೆಪದಲ್ಲಿ ಮೆಸ್ಕಾಂ ವಾರದಲ್ಲಿ ಗುರುವಾರ ಮತ್ತು ಶನಿವಾರ ಈ ಎರಡು ದಿನ ಬೆಳಗ್ಗೆಯಿಂದ ಸಂಜೆ ತನಕ ಪವರ್ ಕಟ್ ಅಂತ ಪ್ರಕಟನೆ ಹೊರಡಿಸಿ ವಿದ್ಯುತ್ ಸರಬರಾಜು ನಿಲ್ಲಿಸುತ್ತದೆ. ಇಷ್ಟೆಲ್ಲಾ ಕೆಲಸ ಮಾಡಿದರೂ ಟ್ರಿಪ್ ಆಗುವ ಸಮಸ್ಯೆ ನಿಂತಿಲ್ಲ. ವಾರದಲ್ಲಿ ಎರಡು ದಿನ ಕೆಲಸ ಮಡಿದರೂ ಒಂದು ಮಳೆ ಬಂದರೆ ಆಗಾಗ ವಿದ್ಯುತ್ ಕೈಕೊಡುತ್ತಿರುವ ಬಗ್ಗೆ ಗ್ರಾಮೀಣ ಭಾಗದ ಜನರು ಸಂದೇಹ ವ್ಯಕ್ತಪಡಿಸುತ್ತಾರೆ. ಆದರೆ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಗ್ರಾಮೀಣ ಭಾಗದ ಜನರೂ ಸೇರಿದಂತೆ ಎಲ್ಲರೂ ಸಮಸ್ಯೆಗೆ ಒಳಗಾಗುತ್ತಿರುವಾಗ ಮೌನ ಮುರಿಯದೇ ಇರುವುದರಿಂದ ಜನಪ್ರತಿನಿಧಿಗಳಾದರೂ ಏಕೆ ಎಂಬ ಪ್ರಶ್ನೆ ಈಗ ಜನಸಾಮಾನ್ಯರಲ್ಲಿದೆ.

Advertisement

ರಸ್ತೆ ವ್ಯವಸ್ಥೆ ಬಗ್ಗೆ ಬಿಡಿ ಇದೀಗ ವಿದ್ಯುತ್ ಹಾಗೂ ಮೊಬೈಲ್ ಸೇವೆ ಎರಡೂ ಬಂದ್ ಆಗಿರುವಾಗಲೂ ಮಾತನಾಡದೇ ಇರುವ ಆಡಳಿತ ವ್ಯವಸ್ಥೆ, ಜನಪ್ರತಿನಿಧಿಗಳು ಇದ್ದೂ ಏನು ಪ್ರಯೋಜನ ಎಂಬುದು ಈಗಿನ ಚರ್ಚೆಯ ವಿಷಯ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಹಕಾರಿ ಪಾಠ | ಆರ್ಥಿಕ ಶಿಸ್ತು ಹಾಗೂ ಸಣ್ಣ ಸಣ್ಣ ಮೊತ್ತವೂ ಬ್ಯಾಂಕಿಗೆ ಏಕೆ ಬರಬೇಕು…?

ತೀರಾ ಸಣ್ಣ ಮಟ್ಟಿನ‌ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?

5 mins ago

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…

9 hours ago

ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…

9 hours ago

ಹವಾಮಾನ ವರದಿ | 24-02-2025 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |

ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

9 hours ago

ಹವಾಮಾನ ವರದಿ | 23-02-2025 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

1 day ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago