ವಿಟ್ಲ: ಪ್ರೇಮ ವ್ಯವಹಾರ ಮನೆಯವರಿಗೆ ಗೊತ್ತಾಗುತ್ತದೆ ಎಂದು ಭಯಪಟ್ಟು ಯಾರೋ ಅಪರಿಚಿತ ಮುಸುಕುದಾರಿಗಳು ತನ್ನ ಬೈಕನ್ನು ಅಡ್ಡಗಟ್ಟಿ ಬ್ಲೇಡ್ ನಿಂದ ಹಲ್ಲೆ ಮಾಡಿರುತ್ತಾರೆ ಎಂದು ಸುಳ್ಳು ಪ್ರಕರಣ ದಾಖಲಿಸಿರುವ ಪ್ರಕರಣವನ್ನು ವಿಟ್ಲ ಪೊಲೀಸರು ಬೆಳಕಿಗೆ ತಂದಿದ್ದಾರೆ.
ಮಂಗಳವಾರ ಸಾಲೆತ್ತೂರು ಕುಂಚಿತಡ್ಕ ನಿವಾಸಿ 19 ವರ್ಷದ ಮಹಮದ್ ಸಫ್ವಾನ್ ಎಂಬುವರ ಮೇಲೆ ಅಪರಿಚಿತರು ಬ್ಲೇಡ್ ದಾಳಿ ಮಾಡಿರುತ್ತಾರೆ ಎಂದು ವಿಟ್ಲ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದರು. ಈ ಸಂದರ್ಭ ಪೊಲೀಸರು ಮಹಮದ್ ಸಫ್ವಾನ್ ನ ಗಾಯದ ಬಗ್ಗೆ ಅನುಮಾನಗೊಂಡು ಆತನ ಕುಟುಂಬಿಕರಲ್ಲಿ ವಿಚಾರಿಸಿದಾಗ, ಇತ್ತೀಚಿನ ದಿನಗಳಲ್ಲಿ ಆತನ ವರ್ತನೆಯಲ್ಲಿ ಬದಲಾವಣೆ ಇರುವ ಬಗ್ಗೆ ತಿಳಿಸಿದ್ದು ಆತನನ್ನು ವಿಚಾರಣೆಗೊಳಪಡಿಸಿದರು. ಈ ಸಂದರ್ಭ ಸತ್ಯ ಬಯಲಾಯಿತು, ದೂರುದಾರನು ಪ್ರೇಮ ವೈಫಲ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ತಾನೆ ಬ್ಲೇಡ್ ಖರೀದಿಸಿ ರಾತ್ರಿ ಸುಮಾರು 8-30 ಗಂಟೆ ಸುಮಾರಿಗೆ ಮನೆ ಹತ್ತಿರದ ವಾಟರ್ ಟ್ಯಾಂಕ್ ಬಳಿ ಎಡಗೈಗೆ ಕುಯ್ದುಕೊಂಡಿರುವುದಾಗಿ ತಿಳಿದುಬಂದಿತು. ತನಗಾದ ಗಾಯದಿಂದ ತನ್ನ ಪ್ರೇಮ ವ್ಯವಹಾರ ಮನೆಯವರಿಗೆ ಗೊತ್ತಾಗುತ್ತದೆ ಎಂದು ಭಯಪಟ್ಟು ಯಾರೋ ಅಪರಿಚಿತ ಮುಸುಕುದಾರಿಗಳು ತನ್ನ ಬೈಕನ್ನು ಅಡ್ಡಗಟ್ಟಿ ಬ್ಲೇಡ್ ನಿಂದ ಹಲ್ಲೆ ಮಾಡಿರುತ್ತಾರೆ ಎಂದು ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ತಿಳಿಯಿತು.
ಈ ಪ್ರಕರಣ ತೀವ್ರ ಸಂಚಲನ ಮೂಡಿಸಿತ್ತು ಅಲ್ಲದೆ ಸಾಮಾಜಿಕ ಸಾಮರಸ್ಯದ ಮೇಲೂ ಪರಿಣಾಮ ಬೀರುವ ಹಂತದಲ್ಲಿತ್ತು. ಹೀಗಾಗಿ ಪೊಲೀಸರು
ಸಾಲೆತ್ತೂರು ಪರಿಸರವು ಶಾಂತಿ ಮತ್ತು ಸಾಮರಸ್ಯದಿಂದಿದ್ದು ಮಹಮದ್ ಸಫ್ವಾನ್ ತನ್ನ ವೈಯಕ್ತಿಕ ವಿಚಾರಗಳಿಗಾಗಿ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಪೊಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ಮಹಮದ್ ಸಫ್ವಾನ್ 19 ವರ್ಷ ಎಂಬುವನ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.