ಪ್ರೇಮ ವ್ಯವಹಾರ ಮನೆಯವರಿಗೆ ಗೊತ್ತಾಗುತ್ತದೆ ಎಂದು ಸುಳ್ಳು ಕತೆ ಕಟ್ಟಿದ….!

July 31, 2019
10:18 PM

ವಿಟ್ಲ: ಪ್ರೇಮ ವ್ಯವಹಾರ ಮನೆಯವರಿಗೆ ಗೊತ್ತಾಗುತ್ತದೆ ಎಂದು ಭಯಪಟ್ಟು ಯಾರೋ ಅಪರಿಚಿತ ಮುಸುಕುದಾರಿಗಳು ತನ್ನ ಬೈಕನ್ನು ಅಡ್ಡಗಟ್ಟಿ ಬ್ಲೇಡ್ ನಿಂದ ಹಲ್ಲೆ ಮಾಡಿರುತ್ತಾರೆ ಎಂದು ಸುಳ್ಳು ಪ್ರಕರಣ ದಾಖಲಿಸಿರುವ ಪ್ರಕರಣವನ್ನು ವಿಟ್ಲ ಪೊಲೀಸರು ಬೆಳಕಿಗೆ ತಂದಿದ್ದಾರೆ.

Advertisement
Advertisement

ಮಂಗಳವಾರ  ಸಾಲೆತ್ತೂರು ಕುಂಚಿತಡ್ಕ ನಿವಾಸಿ 19 ವರ್ಷದ  ಮಹಮದ್ ಸಫ್ವಾನ್ ಎಂಬುವರ ಮೇಲೆ ಅಪರಿಚಿತರು ಬ್ಲೇಡ್ ದಾಳಿ ಮಾಡಿರುತ್ತಾರೆ ಎಂದು  ವಿಟ್ಲ ಠಾಣೆಯಲ್ಲಿ ನೀಡಿದ ದೂರಿನಂತೆ  ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದರು. ಈ ಸಂದರ್ಭ ಪೊಲೀಸರು ಮಹಮದ್ ಸಫ್ವಾನ್ ನ ಗಾಯದ ಬಗ್ಗೆ ಅನುಮಾನಗೊಂಡು ಆತನ ಕುಟುಂಬಿಕರಲ್ಲಿ ವಿಚಾರಿಸಿದಾಗ,  ಇತ್ತೀಚಿನ ದಿನಗಳಲ್ಲಿ ಆತನ ವರ್ತನೆಯಲ್ಲಿ ಬದಲಾವಣೆ ಇರುವ ಬಗ್ಗೆ ತಿಳಿಸಿದ್ದು ಆತನನ್ನು ವಿಚಾರಣೆಗೊಳಪಡಿಸಿದರು. ಈ ಸಂದರ್ಭ ಸತ್ಯ ಬಯಲಾಯಿತು,  ದೂರುದಾರನು ಪ್ರೇಮ ವೈಫಲ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ತಾನೆ ಬ್ಲೇಡ್ ಖರೀದಿಸಿ ರಾತ್ರಿ ಸುಮಾರು 8-30 ಗಂಟೆ ಸುಮಾರಿಗೆ ಮನೆ ಹತ್ತಿರದ ವಾಟರ್ ಟ್ಯಾಂಕ್ ಬಳಿ ಎಡಗೈಗೆ ಕುಯ್ದುಕೊಂಡಿರುವುದಾಗಿ ತಿಳಿದುಬಂದಿತು.  ತನಗಾದ ಗಾಯದಿಂದ ತನ್ನ ಪ್ರೇಮ ವ್ಯವಹಾರ ಮನೆಯವರಿಗೆ ಗೊತ್ತಾಗುತ್ತದೆ ಎಂದು ಭಯಪಟ್ಟು ಯಾರೋ ಅಪರಿಚಿತ ಮುಸುಕುದಾರಿಗಳು ತನ್ನ ಬೈಕನ್ನು ಅಡ್ಡಗಟ್ಟಿ ಬ್ಲೇಡ್ ನಿಂದ ಹಲ್ಲೆ ಮಾಡಿರುತ್ತಾರೆ ಎಂದು ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ತಿಳಿಯಿತು.

Advertisement

ಈ ಪ್ರಕರಣ ತೀವ್ರ ಸಂಚಲನ ಮೂಡಿಸಿತ್ತು ಅಲ್ಲದೆ ಸಾಮಾಜಿಕ ಸಾಮರಸ್ಯದ ಮೇಲೂ ಪರಿಣಾಮ ಬೀರುವ ಹಂತದಲ್ಲಿತ್ತು. ಹೀಗಾಗಿ ಪೊಲೀಸರು

ಸಾಲೆತ್ತೂರು ಪರಿಸರವು ಶಾಂತಿ ಮತ್ತು ಸಾಮರಸ್ಯದಿಂದಿದ್ದು ಮಹಮದ್ ಸಫ್ವಾನ್ ತನ್ನ ವೈಯಕ್ತಿಕ ವಿಚಾರಗಳಿಗಾಗಿ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಪೊಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ಮಹಮದ್ ಸಫ್ವಾನ್ 19 ವರ್ಷ ಎಂಬುವನ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಲೋಕ ಸಮರ : ಬಳ್ಳಾರಿಯಲ್ಲಿ ಭರ್ಜರಿ ಬೇಟೆ – 5.60 ಕೋಟಿ ರೂ. ಹಣ, 3 ಕೆಜಿ ಚಿನ್ನ, 103 ಕೆಜಿ ಬೆಳ್ಳಿ ಜಪ್ತಿ
April 7, 2024
10:20 PM
by: The Rural Mirror ಸುದ್ದಿಜಾಲ
ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ | ರಾಜ್ಯಾದ್ಯಂತ ಒಟ್ಟು 15.78 ಕೋಟಿ ಹಣ, 1.27 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ |
March 23, 2024
11:10 PM
by: The Rural Mirror ಸುದ್ದಿಜಾಲ
ಗ್ರಾಮೀಣ ಭಾಗದಲ್ಲೂ ಗೋಹತ್ಯೆ…!? | ವೈರಲ್‌ ಆಯ್ತು ವಿಡಿಯೋ… | ಕೊಲ್ಲಮೊಗ್ರದಲ್ಲಿ ನಕ್ಸಲ್‌ ಸದ್ದಿನ ಜೊತೆಗೆ ಗೋಹತ್ಯೆಯ ಸದ್ದು…!
March 19, 2024
7:31 PM
by: ದ ರೂರಲ್ ಮಿರರ್.ಕಾಂ
ಮಾಧ್ಯಮಗಳ ಬುರುಡೆ, ಸುಳ್ಳು, ಅತಿರೇಕದ, ಬಾಲಿಶ ಸುದ್ದಿಗಳಿಗೆ ಮತ್ತೊಂದು ಕಪಾಳಮೋಕ್ಷ…..!
March 12, 2024
11:36 AM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror