ಸುಳ್ಯ : ಯುವಜನ ಚಟುವಟಿಕೆಗಳಿಗೆ ಸರಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ನೀಡುವ ಅನುದಾನ ಮತ್ತು ಪ್ರೋತ್ಸಾಹ ಸಾಲದು. ಯುವಜನತೆಯನ್ನು ಉತ್ತೇಜಿಸು ಸಲುವಾಗಿ ಸರಕಾರಗಳು ಹೆಚ್ಚಿನ ಅನುದಾನ ನೀಡಬೇಕೆಂದು ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿಯ ಗೌರವ ಸಲಹೆಗಾರ ದಿನೇಶ್ ಮಡಪ್ಪಾಡಿ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮೊದಲು ತಾಲೂಕು ಮಟ್ಟದಲ್ಲಿ ನಡೆಯುತ್ತಿದ್ದ ಯುವಜನ ಮೇಳಗಳು ಈಗ ಜಿಲ್ಲಾ ಮಟ್ಟಕ್ಕೆ ಸೀಮಿತಗೊಂಡಿದೆ. ದಸರಾ ಕ್ರೀಡಾ ಕೂಟಗಳನ್ನು ಸಂಘಟಿಸುವಾಗ ಯುವಜನ ಸಂಯುಕ್ತ ಮಂಡಳಿಯನ್ನು, ಒಕ್ಕೂಟವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಸ್ಥಳೀಯ ಸಂಸ್ಥೆಗಳು ಹಾಗೂ ಸರಕಾರಗಳು ಯುವಜನ ಚಟುವಟಿಕೆಗಳಿಗೆ ಅತ್ಯಂತ ಅಲ್ಪ ಅನುದಾನ ನೀಡುತ್ತಿದೆ. ಇದರಿಂದಾಗಿ ಯುವಜನರ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ಇಲ್ಲದಂತಾಗಿದೆ. ಆದರೂ ಈಗ ಯುವಕ – ಯುವತಿ ಮಂಡಲಗಳ ಸ್ವ ಪ್ರಯತ್ನದಿಂದಾಗಿಯೇ ಇಲ್ಲಿ ಹೆಚ್ಚಿನ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಹೇಳಿದರು.
ಯುವಜನ ಸಂಯುಕ್ತ ಮಂಡಳಿಯಿಂದ ಟ್ರಸ್ಟ್ ಒಂದನ್ನು ಆರಂಭಿಸಿ ಆ ಮೂಲಕ ಚಟುವಟಿಕೆಗಳನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ. ಯುವಜನ ಸಂಯುಕ್ತ ಮಂಡಳಿಯ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಸಂಸದರ ನಿಧಿಯಿಂದ ಮೂರು ಲಕ್ಷ ರೂ ಮಂಜೂರುಗೊಂಡಿದ್ದು ಅದು ಬಂದ ಕೂಡಲೇ ಕೆಲಸ ಆರಂಭಿಸಲಾಗುವುದು ಎಂದು ಹೇಳಿದರು.
ಸುಳ್ಯ ತಾಲೂಕಿನಲ್ಲಿ ಈ ಬಾರಿ ಯುವ ಸಮ್ಮೇಳನದಂತಹ ಹೊಸ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ ಎಂದು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಂಡಳಿಯ ಗೌರವಾಧ್ಯಕ್ಷ ಚಂದ್ರಶೇಖರ ಪನ್ನೆ, ಗೌರವ ಸಲಹೆಗಾರರಾದ ಶೈಲೇಶ್ ಅಂಬೆಕಲ್ಲು, ದೀಪಕ್ ಕುತ್ತಮೊಟ್ಟೆ, ಲಕ್ಷ್ಮೀನಾರಾಯಣ ಕಜೆಗದ್ದೆ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಜಯನಗರ, ಕೋಶಾಧಿಕಾರಿ ತೇಜಸ್ವಿ ಕಡಪಳ, ಜತೆ ಕಾರ್ಯದರ್ಶಿಗಳಾದ ವಿಜಯ ಕುಮಾರ್ ಉಬರಡ್ಕ, ಶಂಕರ ಪೆರಾಜೆ, ನಿರ್ದೇಶಕರುಗಳಾದ ದಯಾನಂದ ಕೇರ್ಪಳ, ಆರ್.ಕೆ.ಮಹಮ್ಮದ್, ಚರಣ್ ಕಾಯರ, ವಿಖ್ಯಾತ್ ಬಾರ್ಪಣೆ, ಪವನ್ ಜಿ.ಟಿ. ಪಲ್ಲತಡ್ಕ, ರಶ್ಮಿ ರಜನಿಕಾಂತ್, ಶ್ರೀಮತಿ ರಾಜೀವಿ ಲಾವಂತಡ್ಕ, ಪೂರ್ವಾಧ್ಯಕ್ಷರಾದ ಪಿ.ಎಸ್.ಗಂಗಾಧರ್, ಕೆ.ಆರ್. ಪದ್ಮನಾಭ, ಹರೀಶ್ ಪೂಜಾರಿಮನೆ, ರಂಜಿತ್ ಕುಕ್ಕೆಟ್ಟಿ ಉಪಸ್ಥಿತರಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…