ಪ್ಲಾಸ್ಟಿಕ್ ನಿಷೇಧದ ಬಗ್ಗೆ ರಾಜಾರಾಮ ಬೆಟ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ,

ಸಾಧ್ಯವಾದಷ್ಟೂ ಎಲ್ಲರೂ ವಸ್ತುಗಳನ್ನು ಖರೀದಿಸಲು ಹೋಗುವಾಗ ತಾವೇ ಕೈಚೀಲಗಳನ್ನು ತೆಗೆದು ಕೊಂಡು ಹೋಗುವಂತೆ ಜಾಗೃತಿ ಮೂಡಿಸಬೇಕು.ಈ ಬಗ್ಗೆ ಸಂಘ ಸಂಸ್ಥೆಗಳು ಕಾರ್ಯಕ್ರಮ ಹಾಕಿಕೊಳ್ಳಬೇಕು. ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುವವರು ಪ್ಲಾಸ್ಟಿಕ್ ಬಳಕೆಯಿಂದಾಗುವ ಹಾನಿಯ ಬಗ್ಗೆ ಕೂಡ ತಿಳುವಳಿಕೆ ನೀಡಬಹುದು. ವ್ಯಾಪಾರಿಗಳು ಪ್ಲಾಸ್ಟಿಕ್ ಹೊರತಾದ ಬಟ್ಟೆಯ ಅಥವಾ ಕಾಗದದ ಚೀಲಗಳಲ್ಲಿ ಕಟ್ಟಿ ಕೊಡುವಂತೆ ಪ್ರೇರೇಪಿಸಬೇಕು. ಪ್ಲಾಸ್ಟಿಕ್ ನಿಂದಾಗುವ ಹಾನಿಯ ಬಗ್ಗೆ ಎಲ್ಲರಿಗೂ ಅರಿವಿದ್ದರೂ ಅದು ಸುಲಭವಾಗಿ ದೊರಕುವುದರಿಂದ ಅದನ್ನು ಉಪಯೋಗಿಸುತ್ತಾರೆ, ಆದ್ದರಿಂದ ಕಡ್ಡಾಯವಾಗಿ ನಿಷೇಧಿಸಿದರೆ ಮಾತ್ರ ಪ್ರಯೋಜನವಾಗಬಹುದು ಎಂದು ರಾಜಾರಾಮ ಬೆಟ್ಟ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel