ಸುಳ್ಯ:ಅಜ್ಜಾವರ ಗ್ರಾಮದ ನೆಲ್ಯಡ್ಕ ಎಂಬಲ್ಲಿ ಪ.ಜಾತಿ ಮಹಿಳೆಯೊಬ್ಬರು ರಬ್ಬರ್ ಕೃಷಿ ಮಾಡಿಕೊಂಡು ಬಂದ ಜಾಗವನ್ನು ಇದೀಗ ಅಜ್ಜಾವರ ಗ್ರಾ.ಪಂ. ಘನತ್ಯಾಜ್ಯ ವಿಲೇವಾರಿ ಮಾಡಲು ಗುರುತಿಸಿದೆ. ಗ್ರಾ.ಪಂ.ನವರು ಕೈಗೊಂಡಿರುವ ಈ ನಿರ್ಧಾರವನ್ನು ಕೈ ಬಿಟ್ಟು ಆ ಜಾಗವನ್ನು ಆ ಮಹಿಳೆಗೇ ಬಿಟ್ಟು ಕೊಡಬೇಕೆಂದು ಮನವಿ ಮಾಡುತ್ತೇವೆ ಎಂದು ಆದಿದ್ರಾವಿಡ ಸಮುದಾಯದ ಪ್ರಮುಖರಾದ ಕೆ.ಎಂ.ಬಾಬು ಜಾಲ್ಸೂರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ನೇಲ್ಯಡ್ಕದಲ್ಲಿ ಸುಶೀಲರವರು ೨ ಎಕ್ರೆ ಜಾಗದಲ್ಲಿ ೬೦೦ ರಬ್ಬರ್ ಕೃಷಿ ಮಾಡಿದ್ದು, ಅದರಲ್ಲಿ ೪೫೦ ಗಿಡಗಳು ಈಗ ಹಾಲು ಟ್ಯಾಪಿಂಗ್ ಮಾಡಲಾಗುತ್ತಿದೆ. ಇದು ಸರಕಾರಿ ಜಮೀನು. ಇದನ್ನು ಅಕ್ರಮ ಸಕ್ರಮದಲ್ಲಿ ಮಾಡಿಕೊಳ್ಳಲು ಅವರು ಅರ್ಜಿಯನ್ನು ಹಾಕಿದ್ದಾರೆ.
ಇದೀಗ ಈ ಜಾಗವನ್ನು ಗ್ರಾ.ಪಂ. ಘನತ್ಯಾಜ್ಯ ವಿಲೇವಾರಿಗೆ ಗುರಿತಿಸಿದ್ದು ಇದರಿಂದ ಇವರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಘನತ್ಯಾಜ್ಯಕ್ಕೆ ಬೇರೆ ಜಾಗ ಗುರುತಿಸುವಂತೆ ವಿನಂತಿಸಿದ ಅವರು ಇದೇ ಸರ್ವೆ ನಂಬರ್‌ನಲ್ಲಿ ಒಟ್ಟು ೭.೭೩ ಎಕ್ರೆ ಸರಕಾರಿ ಜಮೀನು ಇದೆ. ಅದರಲ್ಲಿ ೨ ಎಕ್ರೆ ಸುಶೀಲರು ಕೃಷಿ ಮಾಡಿದರೆ ಉಳಿದ ಜಾಗವೂ ಒತ್ತುವರಿಯಾಗಿದೆ. ಅದೆಲ್ಲವನ್ನು ಬಿಟ್ಟು ಇವರ ಜಾಗ ಮಾತ್ರ ಘನತ್ಯಾಜ್ಯ ವಿಲೇವಾರಿಗೆ ಗುರಿತಿಸಿರುವುದು ಸರಿಯಲ್ಲ. ಇದಕ್ಕೆ ನಾವು ಅವಕಾಶವನ್ನು ನೀಡುವುದಿಲ್ಲ. ಜಿಲ್ಲಾಧಿಕಾರಿ ಸೇರಿದಂತೆ ಹಲವರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಕೆ.ಎಂ.ಬಾಬು ಹೇಳಿದರು.
ಸುಶೀಲಾ ಮಾತನಾಡಿ ಅಕ್ರಮ ಸಕ್ರಮದಡಿಯಲ್ಲಿ ಅರ್ಜಿ ಅಲ್ಲಿಸಲಾಗಿದ್ದು ಕೃಷಿ ಮಾಡಿದ ಆ ಜಾಗವನ್ನು ತನ್ನ ಹೆಸರಿಗೆ ನೀಡಬೇಕೆಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರತ್ನಾವತಿ ಉದ್ದಂತಡ್ಕ, ವಿಶ್ವನಾಥ ಉದ್ದಂತಡ್ಕ, ಸತೀಶ್ ನೆಲ್ಯಡ್ಕ, ರವಿ ಪಿಲಿಕೋಡಿ, ಮಂಜುನಾಥ ಇದ್ದರು.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…